ಅಬ್ಬಾ...ನಾಲ್ಕೈದು ತಿಂಗಳಲ್ಲಿ ದರ್ಶನ್ ಬಿಡುಗಡೆ ಮಾಡಿದ ಟ್ರೈಲರ್ ಗಳ ಸಂಖ್ಯೆ ನೋಡಿ

Recommended Video

Yajamana Movie: ಅಬ್ಬಾ...ನಾಲ್ಕೈದು ತಿಂಗಳಲ್ಲಿ ದರ್ಶನ್ ಬಿಡುಗಡೆ ಮಾಡಿದ ಟ್ರೈಲರ್ ಗಳ ಸಂಖ್ಯೆ ನೋಡಿ

ದರ್ಶನ್ ಅವರ ಕೈಯಿಂದ ಟ್ರೈಲರ್, ಟೀಸರ್, ಆಡಿಯೋ ಅಥವಾ ಸಿನಿಮಾ ಲಾಂಚ್ ಮಾಡಿಸಬೇಕೆಂಬ ಆಸೆ, ಹಠಕ್ಕೆ ಬಿದ್ದಂತೆ ಕಾಣುತ್ತಿದೆ ಸ್ಯಾಂಡಲ್ ವುಡ್ ಇಂಡಸ್ಟ್ರಿ. ಯಾಕಂದ್ರೆ, ಇತ್ತೀಚಿನ ದಿನಗಳಂತೂ ಯಾವುದೇ ಕಾರ್ಯಕ್ರಮ ನೋಡಿದ್ರು ದರ್ಶನ್ ಅತಿಥಿಯಾಗಿರ್ತಾರೆ. ವಾರಕ್ಕೆ ಒಂದು ಅಥವಾ ಎರಡು ಪ್ರೋಗ್ರಾಂಗೆ ಯಜಮಾನ್ರು ಬರೋದು ಫಿಕ್ಸ್.

ತಮ್ಮ ಸಿನಿಮಾಗಳ ಕಾರ್ಯಕ್ರಮಕ್ಕಿಂತಲೂ ಹೊಸಬರು, ಆಪ್ತರು, ಸ್ನೇಹಿತರ ಚಿತ್ರಗಳ ಕಾರ್ಯಕ್ರಮಕ್ಕೆ ದರ್ಶನ್ ಹೆಚ್ಚು ಹೋಗ್ತಿದ್ದಾರೆ ಎಂಬುದು ಇದನ್ನೆಲ್ಲಾ ನೋಡಿದ್ರೆ ಗೊತ್ತಾಗುತ್ತೆ. 'ತಾನು ಬೆಳೆದು ತನ್ನವರನ್ನು ಬೆಳಸುವ ಯಜಮಾನ' ಎಂಬ ಮಾತು ದರ್ಶನ್ ಗೆ ಹೆಚ್ಚು ಸೂಕ್ತವಾಗುತ್ತಿದೆ.

ಹಾಗ್ನೋಡಿದ್ರೆ, ಕಳೆದ ಕೆಲ ದಿನಗಳಿಂದ ದರ್ಶನ್ ಅವರು ಸಾಲು ಸಾಲು ಟ್ರೈಲರ್ ರಿಲೀಸ್, ಟೀಸರ್ ಬಿಡುಗಡೆ, ಸಿನಿಮಾ ಮುಹೂರ್ತ ಸಮಾರಂಭಕ್ಕೆ ಹೋಗಿದ್ದಾರೆ. ಆ ಚಿತ್ರಗಳು ಯಾವುದು, ಯಾವಾಗ ಎಂಬುದರ ಬಗ್ಗೆ ವಿವರ ಇಲ್ಲಿದೆ. ಮುಂದೆ ಓದಿ....

ಮಾರ್ಚ್ 15ಕ್ಕ ಸಿಂಗ ಟ್ರೈಲರ್

ಮಾರ್ಚ್ 15ಕ್ಕ ಸಿಂಗ ಟ್ರೈಲರ್

ಮಾರ್ಚ್ 15ಕ್ಕೆ, ಅಂದ್ರೆ ಇಂದು ಚಿರು ಸರ್ಜಾ ಅಭಿನಯದ ಸಿಂಗ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ನಟ ದರ್ಶನ್. ಶೂಟಿಂಗ್ ಇದ್ದರೂ ಬಿಡುವು ಮಾಡಿಕೊಂಡು ಸ್ನೇಹಿತರ ಚಿತ್ರಗಳಿಗೆ ಬೆಂಬಲ ಕೊಡ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಮುಂದಿನ ಸ್ಲೈಡ್ ನಲ್ಲಿದೆ.

ರಗಡ್ ಗೆ ಬಾಸ್ ಸಾಥ್

ರಗಡ್ ಗೆ ಬಾಸ್ ಸಾಥ್

ವಿನೋದ್ ಪ್ರಭಾಕರ್ ಅಭಿನಯಿಸಿರುವ ರಗಡ್ ಸಿನಿಮಾ ಲಾಂಚ್ ಮಾಡಿದ್ದು ದರ್ಶನ್. ಈಗ ಈ ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಮಾಡ್ತಿರುವುದು ದರ್ಶನ್. ಹೌದು, ಮಾರ್ಚ್ 16ಕ್ಕೆ ರಗಡ್ ಸಿನಿಮಾ ಆಡಿಯೋ ಬಿಡುಗಡೆ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್.

ಉದ್ಘರ್ಷ ಟ್ರೈಲರ್

ಉದ್ಘರ್ಷ ಟ್ರೈಲರ್

ಮಾರ್ಚ್ 5ನೇ ತಾರೀಖು, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುಭಾಷಾ ಚಿತ್ರ ಉದ್ಘರ್ಷ ಟ್ರೈಲರ್ ರಿಲೀಸ್ ಮಾಡಿದ್ದು ಯಜಮಾನ ದರ್ಶನ್. ಈ ಟ್ರೈಲರ್ ಗೆ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದರು.

ಪ್ರೀಮಿಯರ್ ಪದ್ಮಿನಿ ಜೊತೆ ದರ್ಶನ್

ಪ್ರೀಮಿಯರ್ ಪದ್ಮಿನಿ ಜೊತೆ ದರ್ಶನ್

ಶ್ರುತಿ ನಾಯ್ಡು ನಿರ್ಮಾಣ ಮಾಡಿರುವ ಪ್ರೀಮಿಯರ್ ಪದ್ಮಿನಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದ ನಟ ದರ್ಶನ್. ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಪಾತ್ರವನ್ನ ನಿಭಾಯಿಸಿದ್ದಾರೆ. ಫೆಬ್ರವರಿ 25ಕ್ಕೆ ಈ ಕಾರ್ಯಕ್ರಮ ನಡೆದಿತ್ತು.

ಪಡ್ಡೆಹುಲಿ ಟ್ರೈಲರ್ ಬಿಡುಗಡೆ

ಪಡ್ಡೆಹುಲಿ ಟ್ರೈಲರ್ ಬಿಡುಗಡೆ

ಗಂಡುಗಲಿ ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯದ ಚೊಚ್ಚಲ ಸಿನಿಮಾ ಪಡ್ಡೆಹುಲಿ ಟ್ರೈಲರ್ ರಿಲೀಸ್ ಮಾಡಿದ್ದು ನಟ ದರ್ಶನ್. ಫೆಬ್ರವರಿ 26ಕ್ಕೆ ಈ ಕಾರ್ಯಕ್ರಮ ನಡೆದಿತ್ತು. ಗುರುದೇಶಪಾಂಡೆ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

ಮಹಿರಾ ಆಡಿಯೋ ಲಾಂಚ್

ಮಹಿರಾ ಆಡಿಯೋ ಲಾಂಚ್

ಫೆಬ್ರವರಿ 9 ರಂದು ಮಹಿರಾ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದರು ನಟ ದರ್ಶನ್. ಇದು ಅಪ್ಪಟ ಹೊಸಬರ ಸಿನಿಮಾ. ವಿದೇಶದಲ್ಲಿದ ಕೆಲವರು ಸೇರಿ ನಿರ್ಮಾಣ ಮತ್ತು ನಿರ್ದೇಶನ ಮಾಡಿರುವ ಚಿತ್ರ ಇದಾಗಿದ್ದು, ಇದಕ್ಕೆ ಬಾಕ್ಸ್ ಆಫೀಸ್ ಸುಲ್ತಾನ ಸಾಥ್ ನೀಡಿದ್ದರು.

ಅದಕ್ಕೂ ಮುಂಚೆ ಲಿಸ್ಟ್ ದೊಡ್ಡದಿದೆ

ಅದಕ್ಕೂ ಮುಂಚೆ ಲಿಸ್ಟ್ ದೊಡ್ಡದಿದೆ

ಕೇವಲ ಇವಷ್ಟೆ ಅಲ್ಲ. ಇದಕ್ಕೂ ಮುಂಚೆ ಹಲವು ಕಾರ್ಯಕ್ರಮಗಳಿಗೆ ದರ್ಶನ್ ಭಾಗಿಯಾಗಿದ್ರು. ಬಜಾರ್ ಸಿನಿಮಾ ನೋಡಿದ್ರು. ಶ್ರೀಮುರಳಿ ಅಭಿನಯಿಸಲಿರುವ ಮದಗಜ ಪೋಸ್ಟರ್ ರಿಲೀಸ್ ಮಾಡಿದ್ರು. ಶ್ರೀಮುರಳಿ ಅಭಿನಯದ ಭರಾಟೆ ಟೀಸರ್ ಲಾಂಚ್ ಮಾಡಿದ್ರು. ಡಿಂಗ್ರಿನಾಗರಾಜ್ ಮಗ ಅಭಿನಯದ 'ಬಿಚ್ಚುಗತ್ತಿ' ಸಿನಿಮಾ ಲಾಂಚ್ ಮಾಡಿದ್ರು. ಅನುಕ್ತ ಟ್ರೈಲರ್ ಬಿಡುಗಡೆ ಮಾಡಿದ್ರು. ಧರ್ಮಕೀರ್ತಿರಾಜ್ ಅಭಿನಯದ ಚಾಣಕ್ಷ ಆಡಿಯೋ ರಿಲೀಸ್ ಮಾಡಿದ್ರು. ಶಶಿ ಕುಮಾರ್ ಮಗ ಅಭಿನಯದ ಮೊಡವೆ ಸಿನಿಮಾದ ಮುಹೂರ್ತಕ್ಕೆ ಬಂದಿದ್ದರು. 'ಇರುವುದೆಲ್ಲವ ಬಿಟ್ಟು' ಟ್ರೈಲರ್ ಲಾಂಚ್ ಮಾಡಿದ್ರು. ವಾಸು ನಾನ್ ಪಕ್ಕಾ ಕಮರ್ಷಿಲಯ್ ಚಿತ್ರದ ಪ್ರೀ -ರಿಲೀಸ್ ಕಾರ್ಯಕ್ರಮಕ್ಕೆ ಹೋಗಿದ್ದರು. ಹೀಗೆ ಕಳೆದ ಆರೇಳು ತಿಂಗಳಲ್ಲಿ ದರ್ಶನ್ ಅನೇಕ ಚಿತ್ರಗಳಿಗೆ ಸಾಥ್ ನೀಡಿದ್ದಾರೆ.

More from Filmibeat

English summary
Challenging star darshan has released more than 10 trailers of others movie in last 5 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X