ಡಿ ಬಾಸ್ ಅಂದ್ರೆ ಕ್ರೇಜ್ ಕಾ ಬಾಪ್ ಅನ್ನೋದು ಇದೇ ಕಾರಣಕ್ಕೆ.!
Recommended Video
ಡಿ-ಬಾಸ್ ದರ್ಶನ್ ಅಂದ್ರೆನೇ ಹಾಗೆ. ಸ್ಯಾಂಡಲ್ ವುಡ್ ನಲ್ಲಿ ಕ್ರೇಜ್ ಗೆ ಇನ್ನೊಂದು ಹೆಸರು ಎನ್ನಬಹುದು. ಹೊಸ ಸಿನಿಮಾ ಮಾಡ್ತಿದ್ದಾರೆ ಎನ್ನುತ್ತಿದ್ದಂತೆ ಆರಂಭವಾಗುವ ಕ್ರೇಜ್ ಆ ಸಿನಿಮಾ ಮುಹೂರ್ತ, ಫಸ್ಟ್ ಲುಕ್ ಪೋಸ್ಟರ್, ಟೀಸರ್, ಟ್ರೈಲರ್, ಹಾಡುಗಳು, ಸಿನಿಮಾ ಥಿಯೇಟರ್ ಗೆ ಬರೋವರೆಗೂ ಫ್ಯಾನ್ಸ್ ಹಬ್ಬದಂತೆ ಆಚರಣೆ ಮಾಡ್ತಾರೆ.
ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಒಂದು ವಾರದ ಮುಂಚೆಯೇ ಹ್ಯಾಷ್ ಟ್ಯಾಗ್ ಬಳಸಿ ವರ್ಲ್ಡ್ ವೈಡ್ ಟ್ರೆಂಡ್ ಮಾಡುವ ಸಂಪ್ರದಾಯ ಆರಂಭಿಸಿದ್ದಾರೆ. ಸದ್ಯ ದರ್ಶನ್ ಅವರ ರಾಬರ್ಟ್ ಚಿತ್ರದ ಹವಾ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದೆ.
ಸಿನಿಮಾದ ಮೂರು ಪೋಸ್ಟರ್ ಬಿಟ್ಟರೇ ಬೇರೆ ಮಾಹಿತಿಯೂ ರಾಬರ್ಟ್ ಚಿತ್ರದ ಬಗ್ಗೆ ಬಹಿರಂಗವಾಗಿಲ್ಲ. ಈಗಷ್ಟೇ ಬಂದಿದ್ದ ಥೀಮ್ ಪೋಸ್ಟರ್ ನಲ್ಲಿ ದರ್ಶನ್ ಅವರ ಲುಕ್ ಹೇಗಿರಬಹುದು ಎಂಬ ಸುಳಿವು ನೀಡಿದ್ದರು ಅಷ್ಟೆ. ಅಷ್ಟಕ್ಕೇ ಈಗ ಡಿ ಬಾಸ್ ಅಭಿಮಾನಿಗಳು ಜಾತ್ರೆಯಂತೆ ಸಂಭ್ರಮಿಸುತ್ತಿದ್ದಾರೆ. ಅದು ಹೇಗೆ? ಚಿತ್ರಗಳ ಸಮೇತ ಮುಂದೆ ನೋಡಿ.....

ರಾಬರ್ಟ್ ಬೈಕ್, ಲುಕ್.!
ರಾಬರ್ಟ್ ಥೀಮ್ ಪೋಸ್ಟರ್ ನಲ್ಲಿ ದರ್ಶನ್ ಅವರು ದುಬಾರಿ ಬೈಕ್ ಮೇಲೆ ಹಿಮ್ಮುಖವಾಗಿ ಕೂತಿದ್ದು, ಆ ಬೈಕ್ ಸಖತ್ ಆಕರ್ಷಣೆ ಮಾಡ್ತಿದೆ. ಅದರಲ್ಲೂ ಆ ಬೈಕ್ ನ ನಂಬರ್ ಪ್ಲೇಟ್ ಮೇಲಿರುವ ಡಿ ಬಾಸ್ ಶೈಲಿಯ ನಂಬರ್ ಈಗ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಅದೇ ರೀತಿ ಬೈಕ್ ನಲ್ಲಿ ನಂಬರ್ ಪ್ಲೇಟ್ ಬಳಸುತ್ತಿದ್ದಾರೆ.

ಕಾರ್ ಮೇಲೆ ರಾಬರ್ಟ್ ಮಿಂಚು
ಇಲ್ಲೊಬ್ಬ ಅಭಿಮಾನಿ ತನ್ನ ಕಾರಿನ ಮೇಲೆ ರಾಬರ್ಟ್ ಚಿತ್ರದ ಹೆಸರು ಹಾಕಿಕೊಂಡಿದ್ದಾರೆ. ಕಾರಿ ಹಿಂಬದಿಯ ಗ್ಲಾಸ್ ಮೇಲೆ ರಾಬರ್ಟ್ ಥೀಮ್ ಪೋಸ್ಟರ್ ಹಾಕಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ರಾಬರ್ಟ್ ಟ್ಯಾಟೂ
ರಾಬರ್ಟ್ ಚಿತ್ರದಲ್ಲಿ ದರ್ಶನ್ ಅವರು ಬಳಸಿದಂತೆ ಬೈಕ್ ಡಿಸೈನ್ ಮಾಡಿಸುವುದು, ಗಾಡಿಗೆ ನಂಬರ್ ಪ್ಲೇಟ್ ಹಾಕುವುದರ ಜೊತೆಗೆ ಕೆಲವು ಅಭಿಮಾನಿಗಳು ತಮ್ಮ ದೇಹದ ಮೇಲೆ ರಾಬರ್ಟ್ ಎಂದು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ.

ರಾಬರ್ಟ್ ನಂಬರ್ ಪ್ಲೇಟ್
ಬೈಕಿಗೆ ಅಥವಾ ಕಾರಿಗೆ ನಂಬರ್ ಪ್ಲೇಟ್ ಹೀಗೆ ಇರಬೇಕು, ಇದೇ ರೀತಿ ಹಾಕಬೇಕು ಎಂದು ಕಾನೂನು ಇದೆ. ಆದರೆ ರಾಬರ್ಟ್ ಚಿತ್ರದ ಕ್ರೇಜ್ ಹೇಗಿದೆ ಅಂದ್ರೆ ಕಾನೂನಿನ ಬಗ್ಗೆ ಯೋಚನೆ ಮಾಡದೆ ಬೈಕಿನ ನಂಬರ್ ಪ್ಲೇಟ್ ನಲ್ಲಿ ನಂಬರ್ ಇರಬೇಕಾದ ಜಾಗದಲ್ಲಿ ರಾಬರ್ಟ್ ಅಂತ ಹೆಸರು ಹಾಕಿದ್ದಾರೆ.


Click it and Unblock the Notifications











