Darshan- Vijayalakshmi: ರೊಮ್ಯಾಂಟಿಕ್ ಮೂಡ್‌ನಲ್ಲಿ ದರ್ಶನ್- ವಿಜಯಲಕ್ಷ್ಮಿ ದಂಪತಿ ಡ್ಯಾನ್ಸ್: ವಿಡಿಯೋ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಇತ್ತೀಚೆಗೆ ಅಭಿಮಾನಿಗಳ ಪ್ರೀತಿಯ ದಾಸ ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ್ದರು. ಸ್ಪೆಷಲ್ ಸಿಡಿಪಿ ಟ್ರೆಂಡ್ ಮಾಡಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು. ಇದೇ ಸಂಭ್ರಮದಲ್ಲಿ ಸೂಪರ್ ಹಿಟ್ 'ಮೆಜೆಸ್ಟಿಕ್' ಚಿತ್ರವನ್ನು ಅಭಿಮಾನಿಗಳು ರೀ-ರಿಲೀಸ್ ಮಾಡಿ ಖುಷಿಪಟ್ಟಿದ್ದಾರೆ.
ಅಭಿಮಾನಿಗಳಿಗಂತಲೇ ಕೆಂಗೇರಿಯ ರಾಬಿನ್ ಚಿತ್ರಮಂದಿರದಲ್ಲಿ 'ಮೆಜೆಸ್ಟಿಕ್' ಚಿತ್ರದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಬ್ಯಾನರ್ ಕಟ್ಟಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ದಾಸನನ್ನು ಕೊಂಡಾಡಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಹೆಜ್ಜೆ ಹಾಕಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ದರ್ಶನ್- ವಿಜಯಲಕ್ಷ್ಮಿ ದಂಪತಿ ಡ್ಯಾನ್ಸ್ ಮಾಡಿದ್ದಾರೆ.

'ಆಶಿಕಿ- 2' ಚಿತ್ರದ 'ಹಮ್ ತೇರೆ ಬಿನ್ ಅಬ್ ರೆಹ್ ನಹೀ ಸಕ್ತೆ' ಹಾಡಿಗೆ ರೊಮ್ಯಾಂಟಿಕ್ ಮೂಡ್‌ನಲ್ಲಿ ದರ್ಶನ್- ವಿಜಯಲಕ್ಷ್ಮಿ ಸಿಂಪಲ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಸುತ್ತ ಇದ್ದವರು ಚಪ್ಪಾಳೆ ತಟ್ಟಿ ಚಿಯರ್ ಅಪ್ ಮಾಡಿದ್ದಾರೆ. ದರ್ಶನ್ ಅಂತೂ ಬ್ಲ್ಯಾಕ್ ಟೀ-ಶರ್ಟ್ ಹಾಗೂ ಬ್ಲೂ ಡೆನಿಮ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಸದ್ಯ ಈ ಸಣ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳ ವಾಟ್ಸಪ್ ಸ್ಟೇಟಸ್, ಇನ್‌ಸ್ಟಾ, ಎಫ್‌ಬಿ ಸ್ಟೋರಿಯಲ್ಲಿ ರಾರಾಜಿಸ್ತಿದೆ.
ಪ್ರೀತಿಸಿ ಮದುವೆ ಆಗಿದ್ದ ಜೋಡಿ
ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವಿಜಯಲಕ್ಷ್ಮಿ ಕೆಮಿಕಲ್ ಇಂಜಿನಿಯರ್ ಪದವೀಧರೆ. ದೂರದ ಸಂಬಂಧಿಕರೆ ಆದರೆ ವಿಜಯಲಕ್ಷ್ಮಿ ಅವರನ್ನು ಬರ್ತ್‌ಡೇ ಪಾರ್ಟಿಯಲ್ಲಿ ನೋಡಿ ದರ್ಶನ್ ಇಷ್ಟಪಟ್ಟಿದ್ದರು. ಬಳಿಕ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಧರ್ಮಸ್ಥಳದಲ್ಲಿ ಮದುವೆ ಆಗಿದ್ದರು. ದಂಪತಿಗೆ ವಿನೀಶ್ ಎಂಬ ಮಗ ಕೂಡ ಇದ್ದಾನೆ. 'ಐರಾವತ' ಹಾಗೂ 'ಯಜಮಾನ' ಸಿನಿಮಾಗಳ ಸಣ್ಣ ಝಲಕ್‌ನಲ್ಲಿ ವಿನೀಶ್ ಸಹ ಕಾಣಿಸಿಕೊಂಡಿದ್ದಾನೆ.
ಧರ್ಮಸ್ಥಳದಲ್ಲಿ ಮದುವೆ
ದರ್ಶನ್- ವಿಜಯಲಕ್ಷ್ಮಿ 2000, ಮೇ 19 ರಂದು ಧರ್ಮಸ್ಥಳದಲ್ಲಿ ಸರಳವಾಗಿ ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಧರ್ಮಸ್ಥಳದ ಸಾಮೂಹಿತ ವಿವಾಹ ಸಮಾರಂಭದಲ್ಲಿ ಭಾಗಿ ಆಗಿದ್ದ ದರ್ಶನ್ ನಾನು ಇಲ್ಲೇ ಮದುವೆ ಆಗಿದ್ದು ಎಂದು ನೆನಪಿಸಿಕೊಂಡಿದ್ದರು. "ಹೊಸ ಜೀವನಕ್ಕೆ ಕಾಲಿಡುತ್ತಿರುವ ಎಲ್ಲಾ ಜೋಡಿಗಳಿಗೆ ಶುಭಾಶಯ. ಭಗವಂತ ನಿಮಗೆ ಆಯುಷ್ ಆರೋಗ್ಯ ಕೊಡಲಿ. ಜೀವನ ಬಹಳ ಚೆನ್ನಾಗಿರಲಿ. ಇಲ್ಲಿ ಬಂದಿರುವ ಎಲ್ಲಾ ಜೋಡಿಗಳು ಒಳ್ಳೆ ಕೆಲಸ ಮಾಡಿದ್ಧಾರೆ. ಯಾಕಂದ್ರೆ ಇವತ್ತು ಮದುವೆ ಮಾಡೋದು ಬಹಳ ಕಷ್ಟ. ಇಲ್ಲಿ ಮದುವೆಯಾದರೆ ಬಹಳ ಉಪಯೋಗ ಇದೆ. ಹೆಣ್ಣಿನ ಮನೆಯವರು ಅದು ಮಾಡಿಲ್ಲ, ಇದು ಮಾಡಿಲ್ಲ ಎಂದು ಯಾರು ಹೇಳಲ್ಲ. ಇದನ್ನು ನಾನು ಯಾಕೆ ಹೇಳ್ತೀನಿ ಅಂದ್ರೆ ನಾನು ಮದುವೆ ಮಾಡಿಕೊಂಡಿದ್ದು ಇಲ್ಲೇನೆ" ಎಂದಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗ ಇರುತ್ತಾರೆ. ಆಗಿಂದ್ದಾಗೆ ಫೋಟೊ, ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ದರ್ಶನ್ ಎಲ್ಲೇ ಹೋದರೂ ಬಂದರೂ ಫೋಟೊ, ವಿಡಿಯೋ ವೈರಲ್ ಆಗುತ್ತಿರುತ್ತದೆ. ಕಳೆದ ವರ್ಷ ದಂಪತಿ ಮಗನ ಜೊತೆ ವಿದೇಶ ಪ್ರವಾಸಕ್ಕೆ ಹೋಗಿ ಬಂದಿದ್ದರು. ಇನ್ನು ಜೀಪ್‌ನಲ್ಲಿ ಒಮ್ಮೆ ದಂಪತಿ ರೈಡ್ ಹೋಗುವಾಗ ಅಭಿಮಾನಿಯೊಬ್ಬ ವಿಡಿಯೋ ಮಾಡಿದ್ದ. ಜೀಪ್ ಚೇಸ್ ಮಾಡುತ್ತಿದ್ದ ಆತನಿಗೆ ದರ್ಶನ್ ಬೈದು ಬುದ್ದಿ ಹೇಳಿದ್ದರು.

ವಿಜಯಲಕ್ಷ್ಮೀ ದರ್ಶನ್ ಉದ್ಯಮ
ಕೆಲ ದಿನಗಳ ಹಿಂದೆಯಷ್ಟೆ ವಿಜಯಲಕ್ಷ್ಮಿ 'ಮೈ ಫ್ರೆಶ್ ಬಾಸ್ಕೆಟ್' ಎಂಬ ಆನ್‌ಲೈನ್ ಆಪ್ ಸ್ಥಾಪಿಸಿ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದರು. ರೈತರಿಗೆ ನೆರವಾಗುವಂತಹ ವ್ಯಾಪಾರ ಆರಂಭಿಸಿದ್ದರು. ಈ ಆಪ್ ಬಳಸಿ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಆಕೆಯ ಉದ್ಯಮದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. 'ಟೈಮ್ಸ್ ಬಿಸಿನೆಸ್' ವಿಜಯಲಕ್ಷ್ಮಿಗೆ ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು.


Click it and Unblock the Notifications