ಮುಂದೇನಾಗುತ್ತೋ ? ದರ್ಶನ್ ಗೆ ಇತ್ತು ಅಪಾಯದ ಅರಿವು, ಈ ವರ್ಷವೇ 'ಡೆವಿಲ್' ಬಿಡುಗಡೆ? ಸಿಕ್ತು ಹೊಸ ಸುಳಿವು

''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಹೀಗಾಗಿಯೇ ಭಯ ಆತಂಕದಲ್ಲಿಯೇ ವಿರಮಿಸದೆ..

ಸಮರೋಪಾದಿಯಲ್ಲಿ ದರ್ಶನ್ ತಮ್ಮ ''ಡೆವಿಲ್'' ಚಿತ್ರದ ಬಾಕಿ ಉಳಿದ ಕೆಲಸಗಳನ್ನು ಮಾಡಿದರು. ತಮ್ಮ ಕರ್ತವ್ಯ ಪೂರೈಸಿದರು. ಈಗ ದರ್ಶನ್ ಅಂದುಕೊಂಡತೆಯೇ ಆಗಿದೆ. ''ಮಿಲನಾ ಪ್ರಕಾಶ್'' ಅದೃಷ್ಟ ಚೆನ್ನಾಗಿತ್ತು. ಸಿನಿಮಾ ಮುಗಿದಿದೆ.

Darshan s The Devil Release Date in Doubt Filmibeat s Exclusive Report Amidst Legal Troubles

ಈ ಹಿನ್ನೆಲೆ ಈಗ ಚಿತ್ರದ ಬಿಡುಗಡೆಯ ಕುರಿತು ಚರ್ಚೆಯಾಗುತ್ತಿದೆ. ಅಂದುಕೊಂಡ ದಿನದಂದೇ ''ಡೆವಿಲ್'' ಬಿಡುಗಡೆಯಾಗುತ್ತಾ ? ದರ್ಶನ್ ಅನುಪಸ್ಥಿತಿಯಲ್ಲಿ ''ಮಿಲನಾ ಪ್ರಕಾಶ್'' ಮತ್ತು ತಂಡ ಚಿತ್ರವನ್ನು ತೆರೆಗೆ ತರಲು ಮುಂದಾಗುತ್ತಾ ? ಹೀಗೆ ಹತ್ತಾರು ಪ್ರಶ್ನೆಗಳು ಹಲವರಲ್ಲಿವೆ. ಜೈಲಿಂದ ''ಡೆವಿಲ್'' ವಿಚಾರದಲ್ಲಿ ಸಾಕ್ಷಾತ್ ದರ್ಶನ್ ತಮ್ಮ ಅಭಿಮಾನಿಗಳಿಗೆ ''ಸಂದೇಶ''ವನ್ನು ನೀಡಿದ್ದರೂ ಕೂಡ ''ಡೆವಿಲ್'' ಬಿಡುಗಡೆ ವಿಚಾರದಲ್ಲಿ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇದೆ.

ಇದೀಗ ಇದೇ ಪ್ರಶ್ನೆಗಳಿಗೆ ''ನಿರ್ಮಾಪಕರ ಸಂಘದ ಅಧ್ಯಕ್ಷ''ರಾಗಿರುವ ''ಉಮೇಶ್ ಬಣಕಾರ್'' ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ಪ್ರತಿಕ್ರಿಯೆ ನೀಡಿದ್ದಾರೆ.ಹಾಗಿದ್ದರೆ ''ಉಮೇಶ್ ಬಣಕಾರ್'' ಈ ಕುರಿತು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓಧಿ.

''ಡೆವಿಲ್'' ಚಿತ್ರದ ಬಿಡುಗಡೆಯ ವಿಚಾರದಲ್ಲಿ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಉಮೇಶ್ ಬಣಕಾರ್ ''ನಿರ್ಮಾಪಕರು ನಿರ್ಮಾಪಕರ ಸಂಘದ ಜೊತೆ ಬಿಡುಗಡೆಯ ವಿಚಾರದಲ್ಲಿ ನೇರವಾಗಿ ಮಾತನಾಡಿಲ್ಲ ಆದರೆ ದರ್ಶನ್ ತಮ್ಮ ಗಳಸ್ಯ ಕಂಠಸ್ಯ ಬಾಲ್ಯದ ಸ್ನೇಹಿತನಾಗಿರುವ, ನಿರ್ಮಾಪಕನಾಗಿ ಕೂಡ ಗುರುತಿಸಿಕೊಂಡಿರುವ ''ಕಾಡು ಶಿವು'' ಜೊತೆ ಈ ಕುರಿತು ಚರ್ಚೆ ಮಾಡಿದ್ದಾರೆ. ಅವರಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಚಿತ್ರಕ್ಕೆ ಸಂಬಂಧಿಸಿದಂತೆ ದರ್ಶನ್ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಡಬ್ಬಿಂಗ್ ಕೂಡ ಮುಗಿಸಿದ್ದಾರೆ.ನನ್ನೆಲ್ಲಾ ಕರ್ತವ್ಯವನ್ನು ನಾನು ಪೂರ್ಣ ಮಾಡಿದ್ದೇನೆ. ಮುಂದೇನಾಗುತ್ತೋ ಏನೋ ? ಹೇಳಲು ಸಾಧ್ಯ ಇಲ್ಲ, ಆದ್ದರಿಂದ ಯಾರು ಕಷ್ಟ ಅನುಭವಿಸುವುದು ಬೇಡ'' ಎಂದು ದರ್ಶನ್ ಅವರಿಗೆ ಹೇಳಿದ್ದರು ಎಂದು ಉಮೇಶ್ ಬಣಕಾರ್ ತಿಳಿಸಿದ್ದಾರೆ. '' ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಮಿಲನಾ ಪ್ರಕಾಶ್ ನಿರ್ಮಾಪಕರ ಸಂಘವನ್ನು ಸಂಪರ್ಕಿಸಿಲ್ಲ'' ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ''ಮಿಲನಾ ಪ್ರಕಾಶ್ ಚಿತ್ರದ ನಿರ್ದೇಶಕ ಮಾತ್ರ ಅಲ್ಲ ನಿರ್ಮಾಪಕ ಕೂಡ ಹೌದು.ಆದರೆ ಬಿಡುಗಡೆಯ ವಿಚಾರದಲ್ಲಿ ಅವರು ಇನ್ನೂ ನಿರ್ಮಾಪಕರ ಸಂಘವನ್ನು ಸಂಪರ್ಕ ಮಾಡಿಲ್ಲ ಆದರೆ ಚಿತ್ರ ಅಂದುಕೊಂಡ ದಿನದಂದು ಅಂದರೆ ಅಕ್ಟೋಬರ್‌ನಲ್ಲಿಯೇ ಬಿಡುಗಡೆಯಾಗುವುದು ನೂರಕ್ಕೆ ನೂರು ಸತ್ಯ. ಅಬ್ಬಬ್ಬಾ ಅಂದರೆ ಚಿತ್ರದ ಬಿಡುಗಡೆ ಒಂದು ವಾರಕ್ಕೆ ಮುಂದಕ್ಕೆ ಹೋಗಬಹುದು ಅಥವಾ ಅಂದುಕೊಂಡ ದಿನಕ್ಕಿಂತ ಒಂದು ವಾರ ಮೊದಲೇ ತೆರೆಗೆ ಬರಬಹುದು, ಅವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ'' ಎಂದು ಹೇಳಿದ್ದಾರೆ. ಈ ಮೂಲಕ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ''ದಿ ಡೆವಿಲ್'' ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವುದು ಖಚಿತ ಅದರಲ್ಲಿ ಯಾವುದೇ ಅನುಮಾನ ಬೇಡ ಎನ್ನುವುದನ್ನು ಕೂಡ ಉಮೇಶ್ ಬಣಕಾರ್ ಪುನರುಚ್ಚಿದ್ದಾರೆ.

darshans-the-devil-release-date-in-doubt-filmibeats-exclusive-report-amidst-legal-troubles

ಇನ್ನುಳಿದಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ.. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ, ಸೇರಿ ಹಲವರು ಚಿತ್ರದಲ್ಲಿದ್ದಾರೆ.

ಇನ್ನು ತೀರಾ ಇತ್ತೀಚೆನವರೆಗೂ ''ಡೆವಿಲ್'' ಚಿತ್ರವನ್ನು ಅನೇಕರು ಮಾಸ್ ಕಥೆಯನ್ನು ಹೊಂದಿರುವ ಚಿತ್ರ ಎಂದು ಅಂದುಕೊಂಡಿದ್ದರು. ದರ್ಶನ್ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಡಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದುಕೊಂಡಿದ್ದರು. ಆದರೆ.. ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿಯ ರೂಪದಲ್ಲಿ ಪ್ರತ್ಯಕ್ಷವಾದ ಫೋಟೊ ಒಂದು ವೈರಲ್ ಆಗಿತ್ತು. ದರ್ಶನ್ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನುವುದು ಗೊತ್ತಾಗಿತ್ತು.

ಈ ಹಿನ್ನೆಲೆ ಎಲ್ಲಿಯ ಡಾನ್, ಎಲ್ಲಿಯ ಮುಖ್ಯಮಂತ್ರಿ, ಒಂದಕ್ಕೊಂದು ಏನು ಸಂಬಂಧ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ದರ್ಶನ್ ಅವರದ್ದು ಚಿತ್ರದಲ್ಲಿ ಡಬಲ್ ರೋಲಾ ಅಥವಾ ಹಣಬಲದಿಂದ ಅಧಿಕಾರದ ಬಲವನ್ನು ಡಾನ್ ಪಡೆಯುತ್ತಾನಾ ? ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಆ ನಂತರ ಡಾನ್ ಆಗುತ್ತಾನಾ ? ಎಂಬ ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದರ್ಶನ್ ಅವರ ಅನುಪಸ್ಥಿತಿಯಲ್ಲಿಯೇ ಈ ಅಕ್ಟೋಬರ್‌ನಲ್ಲಿ ಸಿಗಲಿದೆ. ಅಲ್ಲಿಯವರೆಗೆ ತಾಳ್ಮೆ ಇರಲಿ.

More from Filmibeat

English summary
Fans are waiting: Will Darshan's 'The Devil' release as planned? This exclusive report from Filmibeat Kannada has the inside scoop on the movie's status, production details, and whether it will still hit theaters this year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X