ಜನವರಿ ತಿಂಗಳಲ್ಲಿ ದರ್ಶನ್ ಅಭಿನಯದ ಎರಡು ಸಿನಿಮಾ ಆರಂಭ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಾವುದೇ ಸಿನಿಮಾ ಈ ವರ್ಷ ಬಿಡುಗಡೆಯಾಗಿಲ್ಲ. ಮುನಿರತ್ನ ಕುರುಕ್ಷೇತ್ರ ಮುಗಿಸಿ, ಯಜಮಾನ ಸಿನಿಮಾದ ಚಿತ್ರೀಕರಣವನ್ನ ಕೂಡ ಬಹುತೇಕ ಮುಗಿಸಿದ್ದಾರೆ ಡಿ ಬಾಸ್.
ಈ ಎರಡು ಚಿತ್ರಗಳಲ್ಲಿ ಯಾವುದು ಮೊದಲು ರಿಲೀಸ್ ಆಗುತ್ತೆ ಎಂಬುದು ಕೂಡ ಸದ್ಯದ ಮಟ್ಟಿಗೆ ಕುತೂಹಲ. ಹೀಗಿರುವಾ, ಮತ್ತೆರಡು ಚಿತ್ರಗಳಿಗೆ ದರ್ಶನ್ ಚಾಲನೆ ನೀಡಲು ಸಜ್ಜಾಗಿದ್ದಾರೆ.
ದರ್ಶನ್ ಅವರದ್ದು ಒಂದು ನಿಯಮವಿದೆ. ಒಂದು ಸಿನಿಮಾ ಮುಗಿಸೋವರೆಗೂ ಇನ್ನೊಂದು ಚಿತ್ರದ ಬಗ್ಗೆ ಎಲ್ಲಿಯೂ ಮಾತನಾಡಲ್ಲ. ಆದ್ರೆ, ಒಂದು ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆಯೇ ಬ್ಯಾಕ್ ಟು ಬ್ಯಾಕ್ ಸಿನಿಮಾ ಶುರು ಮಾಡ್ತಿರುವುದು ಕುತೂಹಲ ಕೆರಳಿಸಿದೆ. ಅಷ್ಟಕ್ಕೂ, ಜನವರಿಯಲ್ಲಿ ಸೆಟ್ಟೇರಲಿರುವ ಎರಡು ಸಿನಿಮಾ ಯಾವುದು.? ಮುಂದೆ ಓದಿ.....

ಮದಕರಿ ನಾಯಕ ಶುರು
ಈಗಾಗಲೇ ಗಂಡುಗಲಿ ಮದಕರಿ ನಾಯಕ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿಸಿರುವ ರಾಕ್ ಲೈನ್ ಅಂಡ್ ಟೀಂ ಜನವರಿ ತಿಂಗಳಲ್ಲಿ ಸಿನಿಮಾ ಮುಹೂರ್ತ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಮೆಗಾಸಿನಿಮಾಗೆ ಚಾಲನೆ ನೀಡಲು ದರ್ಶನ್ ಕೂಡ ನಿರ್ಧರಿಸಿದ್ದಾರಂತೆ.

D-53 ಗೂ ಗ್ರೀನ್ ಸಿಗ್ನಲ್
ಇನ್ನು ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ನಲ್ಲಿ ಬರಲಿರುವ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸನೂ ಮುಗಿದಿದೆ. ಈ ಹಿಂದೆಯೇ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ಮುಗಿಸಿದ್ದರು. ಸದ್ಯದ ಮಾಹಿತಿ ಪ್ರಕಾರ ಈ ಚಿತ್ರವೂ ಜನವರಿ ತಿಂಗಳಲ್ಲೇ ಆರಂಭವಾಗುವ ಸಾಧ್ಯತೆ ಇದೆ. ದರ್ಶನ್ 53ನೇ ಸಿನಿಮಾ ಎಂದು ಗುರುತಿಸಿಕೊಂಡಿರುವ ಈ ಚಿತ್ರವನ್ನ ಹೆಬ್ಬುಲಿ ಖ್ಯಾತಿಯ ಉಮಾಪತಿ ನಿರ್ಮಾಣ ಮಾಡ್ತಿದ್ದಾರೆ.

'ಒಡೆಯ' ನಡೆಯುತ್ತಿದೆ
ಕುರುಕ್ಷೇತ್ರ ಮತ್ತು ಯಜಮಾನ ಚಿತ್ರದ ಕಂಪ್ಲೀಟ್ ಟಾಕಿ ಪೋಷನ್ ಮುಗಿಸಿರುವ ದರ್ಶನ್ ಸಂದೇಶ್ ನಾಗರಾಜ್ ನಿರ್ಮಾಣದ 'ಒಡೆಯ' ಚಿತ್ರವನ್ನ ಆರಂಭಿಸಿದ್ದಾರೆ. ಈಗಾಗಲೇ ಮೈಸೂರು ಸುತ್ತಮುತ್ತ ಈ ಸಿನಿಮಾದ ಶೂಟಿಂಗ್ ಆರಂಭವಾಗಿದೆಯಂತೆ.

ದರ್ಶನ್ ಮೊದಲೇ ಹೇಳಿದ್ದರು
ದರ್ಶನ್ ಸತತವಾಗಿ ಸಿನಿಮಾ ಮಾಡ್ತಿದ್ದಾರೆ. ಇದೆಲ್ಲ ಯಾವಾಗ ರಿಲೀಸ್ ಆಗಲಿದೆ. ಹೇಗೆ ಶೂಟಿಂಗ್ ಬ್ಯಾಲೆನ್ಸ್ ಮಾಡಲಿದ್ದಾರೆ, ಮದಕರಿ ಚಿತ್ರವನ್ನ ಹೇಗೆ ತೆಗೆದುಕೊಂಡು ಹೋಗ್ತಾರೆ ಎಂಬ ಕುತೂಹಲ ಕಾಡುತ್ತೆ. ಆದ್ರೆ, ದರ್ಶನ್ ಈ ಹಿಂದೆಯೇ ಹೇಳಿದ್ದರು, ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರಗಳು ಬಂದ್ರೆ, ಅದಕ್ಕೆ ಮೊದಲ ಮಾನ್ಯತೆ ನೀಡುತ್ತೇನೆ ಎಂದು. ಬಹುಶಃ ಈಗಲೂ ಅದನ್ನೆ ಮಾಡ್ತಿರಬಹುದು.


Click it and Unblock the Notifications











