ದರ್ಶನ್ 'ಒಡೆಯರ್' ಸಿನಿಮಾ ಲಾಂಚ್ ಗೆ ನಿಗದಿ ಆಯ್ತು ದಿನಾಂಕ
Recommended Video

ನಟ ದರ್ಶನ್ ಒಂದರ ನಂತರ ಒಂದರಂತೆ ಬೇರೆ ಬೇರೆ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ. ದರ್ಶನ್ ಕೆರಿಯರ್ ನ ಮಹತ್ವದ ಸಿನಿಮಾ 'ಕುರುಕ್ಷೇತ್ರ'ದ ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿದಿದೆ. ಇದರ ಜೊತೆ ಜೊತೆಗೆ 'ಯಜಮಾನ' ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಬಿಜಿ ಇದ್ದಾರೆ.
ಈ ಸಿನಿಮಾಗಳ ನಡುವೆ ಈಗ ದರ್ಶನ್ ಅವರ 52ನೇ ಸಿನಿಮಾ ಸೆಟ್ಟೇರುವ ಸಮಯ ಬಂದಿದೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕ ಸದ್ದು ಮಾಡಿರುವ 'ಒಡೆಯರ್' ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿ ಆಗಿದೆ. ಅಂದಹಾಗೆ, ದರ್ಶನ್ ಅವರ 'ಒಡೆಯರ್' ಸಿನಿಮಾದ ಒಂದಷ್ಟು ವಿವರ ಮುಂದಿದೆ ಓದಿ...

ಆಗಸ್ಟ್ ಗೆ ಲಾಂಚ್
ನಟ ದರ್ಶನ್ ಅವರ 52ನೇ ಸಿನಿಮಾ 'ಒಡೆಯರ್' ಸಿನಿಮಾ ಆಗಸ್ಟ್ 16 ರಂದು ಲಾಂಚ್ ಆಗಲಿದೆಯಂತೆ. ಸ್ವಾತಂತ್ರ್ಯ ದಿನದ ಮುಂದಿನ ದಿನವೇ 'ಒಡೆಯರ್' ಸಿನಿಮಾ ಸೆಟ್ಟೆರಲಿದೆ. ಆಗಸ್ಟ್ 16 ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬ ಇದ್ದು ಅದೇ ದಿನ ಸಿನಿಮಾ ಪ್ರಾರಂಭ ಆಗಲಿದೆ.

5 ವರ್ಷದ ಬಳಿಕ ಮತ್ತೆ ಒಂದಾದ ಹಿಟ್ ಜೋಡಿ
'ಒಡೆಯರ್' ಸಿನಿಮಾಗೆ ಎಂ ಡಿ ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಪೋರ್ಕಿ' ಹಾಗೂ 'ಬುಲ್ ಬುಲ್' ಸಿನಿಮಾದ ನಂತರ ಮತ್ತೆ ಈ ಹಿಟ್ ಜೋಡಿ ಒಂದಾಗಿದೆ. ಐದು ವರ್ಷದ ನಂತರ ಮತ್ತೆ ದರ್ಶನ್ ಗೆ ಎಂ ಡಿ ಶ್ರೀಧರ್ ಆಕ್ಷನ್ ಕಟ್ ಹೇಳಲು ಸಿದ್ಧವಾಗಿದ್ದಾರೆ.

ಪವನ್ ಒಡೆಯರ್ ಬದಲು ಎಂ ಡಿ ಶ್ರೀಧರ್
ಈ ಹಿಂದೆ 'ಒಡೆಯರ್' ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನ ಮಾಡಬೇಕಿತ್ತು. ಆದರೆ ಈಗ ಚಿತ್ರಕ್ಕೆ ಎಂ ಡಿ ಶ್ರೀಧರ್ ಎಂಟ್ರಿ ಆಗಿದೆ. ಅತ್ತ ಪವನ್ ಒಡೆಯರ್ ಪುನೀತ್ ರಾಜ್ ಕುಮಾರ್ ಜೊತೆಗೆ 'ನಟ ಸಾರ್ವಭೌಮ' ಚಿತ್ರದಲ್ಲಿ ಬಿಜಿ ಇದ್ದಾರೆ. ಇತ್ತ ದರ್ಶನ್ ಇಮೇಜ್ ಗೆ ತಕ್ಕಂತೆ ಸಿನಿಮಾ ಮಾಡಲು ಎಂ ಡಿ ಶ್ರೀಧರ್ ತಯಾರಾಗಿದ್ದಾರೆ.

ಹೀರೋಯಿನ್ ಆಯ್ಕೆ ಆಗಿಲ್ಲ
ದರ್ಶನ್ ಅವರ ಜೊತೆಗೆ 'ಒಡೆಯರ್' ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಎಂಬುದು ಇನ್ನು ಗೊತ್ತಿಲ್ಲ. ಚಿತ್ರದ ನಾಯಕಿಯ ಆಯ್ಕೆ ಸದ್ಯದವರೆಗೆ ಆಗಿಲ್ಲ. ಜೊತೆಗೆ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಪ್ರಾರಂಭ ಆಗಿಲ್ಲ.

'ಕುರುಕ್ಷೇತ್ರ' ನಂತರ
ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಡಬ್ಬಿಂಗ್ ಕೆಲಸ ಸಹ ಇದೀಗ ಮುಗಿದಿದೆ. ಈ ಸಿನಿಮಾ ಮುಂದಿನ ತಿಂಗಳ ಕೊನೆಗೆ ಅಥವಾ ಆಗಸ್ಟ್ ಶುರುವಿನಲ್ಲಿ ಬಿಡುಗಡೆಯಾಗಬಹುದು. ಸೋ, 'ಕುರುಕ್ಷೇತ್ರ' ಚಿತ್ರದ ಬಳಿಕ 'ಒಡೆಯರ್' ಸಿನಿಮಾ ಲಾಂಚ್ ಆಗಲಿದೆ.


Click it and Unblock the Notifications











