ಅಬ್ಬಬ್ಬಾ.. ಬಕೆಟ್ ಸೈಜ್ ಕಪ್ ಕಾಫಿ, ಬಿಗ್ ಸೈಜ್ ಕ್ರೋಸೆಂಟ್ ಸವಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಕೇವಲ ತಮ್ಮಿಷ್ಟದ ಸ್ಟಾರ್ ಮೇಲಷ್ಟೇ ಅಲ್ಲ, ಆ ಸ್ಟಾರ್ ಕುಟುಂಬದ ಸದಸ್ಯರ ಚಲನವಲನದ ಮೇಲೆ ಕೂಡ ಅಭಿಮಾನಿಗಳು ನಿಗಾ ಇಟ್ಟಿರುತ್ತಾರೆ. ಕುತೂಹಲದಿಂದ ಅವರ ಬದುಕನ್ನ ಅಧ್ಯಯನ ಮಾಡುತ್ತಾರೆ. ಹೀಗಾಗಿಯೇ, ಕೇವಲ ಸ್ಟಾರ್‌ಗಳ ಫೋಟೋಗಳಷ್ಟೇ ಅಲ್ಲ, ಅವರ ಮನೆಯವರು ಹಾಕುವ ಫೋಟೋಗಳು ಕೂಡ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ವೈರಲ್ ಆಗಿ ಬಿಡುತ್ತಾವೆ. ಇದಕ್ಕೆ ಇನ್ನೊಂದು ಉದಾಹರಣೆ ಅನ್ನುವಂತೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಹೌದು, ಹೊಸ..ಹೊಸ..ಸ್ಥಳಗಳನ್ನ ಅನ್ವೇಶಿಸುವ ಹವ್ಯಾಸವನ್ನ ಮೊದಲಿಂದ ರೂಢಿ ಮಾಡಿಕೊಂಡಿರುವ ವಿಜಯಲಕ್ಷ್ಮಿ ದರ್ಶನ್, ತಿಂಡಿ ಪ್ರಿಯೆಯೂ ಹೌದು. ಗುಡ್ ಫುಡ್ ಇಸ್ ಗುಡ್ ಮೂಡ್ ಎಂಬ ಪಾಲಿಸಿ ಇವರದ್ದು. ಇಂಥ ವಿಜಯ ಲಕ್ಷ್ಮಿ ದರ್ಶನ್, ಸದ್ಯಕ್ಕೆ.. ಕೈಯಲ್ಲಿ ಹಿಡಿಯಲಾಗದಷ್ಟು ದೊಡ್ಡದಾಗಿರುವ ಕಪ್ನಲ್ಲಿ ಕಾಫಿ ಸವಿದಿದ್ದಾರೆ. ಇದರ ಜೊತೆಗೆ ಕ್ರೋಸೆಂಟ್ ಕೂಡಾ ತಿಂದಿದ್ದಾರೆ. ವಿಶೇಷ ಅಂದರೆ ಈ ಕ್ರೋಸೆಂಟ್ ಎತ್ತಲು ಎರಡು ಕೈ ಕೂಡ ಸಾಕಾಗಲ್ಲ.

ವಿಜಯಲಕ್ಷ್ಮಿ ದರ್ಶನ್ ಅವರ ಈ ಬಕೆಟ್ ಸೈಜ್ ಕಪ್ ಕಾಫಿ ಮತ್ತು ಬಿಗ್ ಸೈಜ್ ಕ್ರೋಸೆಂಟ್ ಸದ್ಯಕ್ಕೆ ಅನೇಕರ ಕಣ್ಣರಳಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ಗಳ ಸುರಿಮಳೆಯೂ ಆಗ್ತಿದೆ.
ಒಂದು ಕಪ್ ಕಾಫಿ ತಗೊಂಡರೆ, ಒಂದು ತಿಂಗಳು ಚಿಂತೆ ಇಲ್ಲ ಎಂಬ ಅಭಿಪ್ರಾಯ ಒಬ್ಬರದ್ದಾದರೆ, ಮತ್ತೊಬ್ಬರು ಬೈಟು ಬೇಡಿಕೆಯನ್ನ ವಿಜಯಲಕ್ಷ್ಮೀ ದರ್ಶನ್ ಅವರಲ್ಲಿ ಇಟ್ಟಿದ್ದಾರೆ. ಮೇಡಂ ಕಾಫಿ ಎಷ್ಟು ಬೇಕು ನಿಮಗೆ ಕುಡಿಯಿರಿ. ಹಾಗೆ ನಮ್ಮ ಬಾಸ್ಗೂ ಸ್ವಲ್ಪ ಉಳಿಸಿ ಎಂಬ ಮನವಿಯನ್ನೂ ಕೂಡ ಅನೇಕರು ಮಾಡಿಕೊಂಡಿದ್ದಾರೆ. ಇನ್ನೂ ಒಬ್ಬರ ಪ್ರಕಾರ ಈ ಕಪ್ ಕಾಫಿಯಲ್ಲಿಯೇ ಸ್ನಾನ ಕೂಡ ಮಾಡಬಹುದು.
ಇನ್ನೂ.. ಭಾನುವಾರದ ರಜಾ-ಮಜಾ ಪ್ರಯುಕ್ತ, ವಿಜಯಲಕ್ಷ್ಮಿ ದರ್ಶನ್ ಈ ಫೋಟೋ ಹಂಚಿಕೊಂಡ ಬೆನ್ನಲ್ಲಿಯೇ.. 18000ಕ್ಕೂ ಅಧಿಕ ಲೈಕ್‌ಗಳು ಬಂದಿವೆ. ಫೋಟೋಗಳು ವೈರಲ್ ಕೂಡ ಆಗ್ತಿವೆ. ಇದರ ನಡುವೆ ಕ್ರೋಸೆಂಟ್ ಮಾಡುವ ರೆಸಿಪಿಯನ್ನೂ ಕೂಡ ಅನೇಕರು ಗೂಗಲ್ ನ ಕೇಳುತ್ತಿದ್ದಾರೆ. ಫೋಟೋ ಜೊತೆ ಊರು ಕೇರಿಯ ಮಾಹಿತಿಯನ್ನೂ ನೀಡಿದ್ದರೆ ಚೆನ್ನಾಗಿರುತ್ತಿತ್ತು, ನಾವು ಅಲ್ಲಿ ಹೋದಾಗ ಈ ಬಕೆಟ್ ಸೈಜ್ ಕಾಫಿಯನ್ನ ಕುಡಿಯುವ ಪ್ರಯತ್ನ ಮಾಡಬಹುದಿತ್ತು ಎಂದು ಕೆಲವರು ವಿಜಯಲಕ್ಷ್ಮಿ ಅವರಲ್ಲಿ ಕೇಳುತ್ತಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಈ ಬಕೆಟ್ ಸೈಜ್ ಕಪ್ ಕಾಫಿ ಮತ್ತು ಬಿಗ್ ಸೈಜ್ ಕ್ರೋಸೆಂಟ್ ಜೊತೆ ವಿಜಯಲಕ್ಷ್ಮಿ ದರ್ಶನ್ ಅವರ ಈ ಫೋಟೋಗಳು, ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳ ಹೃದಯವನ್ನ ಗೆಲ್ಲುತ್ತಿವೆ. ವಿಜಯಲಕ್ಷ್ಮಿ ಅವರ ಜೊತೆ ವಿನೀಶ್ ಮತ್ತು ದರ್ಶನ್ ಅವರು ಕೂಡ ಈ ಫೋಟೋದಲ್ಲಿ ಇದ್ದಿದ್ದರೆ ಆಗ ಪರ್ಫೆಕ್ಟ್ ಫ್ಯಾಮಿಲಿ ಫೋಟೋ ಆಗ್ತಿತ್ತು ಅನ್ನುವ ಅಭಿಪ್ರಾಯವನ್ನೂ ಕೂಡ ಇದೇ ಸಮಯದಲ್ಲಿ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











