ಯಜಮಾನನ ವೇಗಕ್ಕೆ ಸೌತ್ ಇಂಡಿಯಾ ಶೇಕ್: ಪ್ರಿನ್ಸ್ ಮಹೇಶ್, ರಜನಿ ರೆಕಾರ್ಡ್ ಬ್ರೇಕ್.!

Recommended Video

Yajamana Movie : ಸೌತ್ ಇಂಡಿಯಾ ನಟರ ದಾಖಲೆಗಳನ್ನ ಧೂಳೀಪಟ ಮಾಡಿದ ದರ್ಶನ್ ಯಜಮಾನ ಟ್ರೈಲರ್

ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಂದ ವೇಗಕ್ಕೆ ಹಳೇ ದಾಖಲೆಗಳೆಲ್ಲಾ ಧೂಳಿಪಟವಾಗಿದೆ. ಟ್ರೈಲರ್ ವೀಕ್ಷಣೆಯ ಸಂಖ್ಯೆಯನ್ನ ಲೆಕ್ಕಹಾಕಲಾಗದೇ ಸ್ಟಕ್ ಆಗಿದ್ದ ಘಟನೆಯೂ ನಡೆದಿದೆ. ಸದ್ಯ, ಯಜಮಾನ ಟ್ರೈಲರ್ ಕೇವಲ 24 ಗಂಟೆಯಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದೆ ಎಂದು ಹೇಳಲಾಗ್ತಿದೆ.

ಯೂಟ್ಯೂಬ್ ನಲ್ಲಿ ನೋಡಿದ್ರೆ ಸುಮಾರು 8 ಮಿಲಿಯನ್ ವೀಕ್ಷಣೆ ತೋರಿಸುತ್ತಿದೆ. ಆದ್ರೆ, ಟ್ರೈಲರ್ ಕವರ್ ಇಮೇಜ್ ನಲ್ಲಿ 10 ಮಿಲಿಯನ್ ವೀಕ್ಷಣೆ ದಾಟಿದೆ ಎಂದು ಪ್ರಿವ್ಯೂ ಬರ್ತಿದೆ. ಅಂದ್ರೆ, 24 ಗಂಟೆಯಲ್ಲಿ 10 ಮೀಲಿಯನ್ ವೀವ್ಸ್ ಕಂಡಿದೆ. ಬಟ್, ಅಪ್ಡೇಟ್ ಆಗಿಲ್ಲ ಎನ್ನಲಾಗಿದೆ.

ಈ ದಾಖಲೆ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಜಮಾನ, ಸೌತ್ ಇಂಡಿಯಾದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ. ಈ ಹಿಂದೆ ರಜನಿಕಾಂತ್, ಪ್ರನ್ಸ್ ಮಹೇಶ್ ಬಾಬು ಮಾಡಿದ್ದ ದಾಖಲೆಗಳನ್ನ ಧೂಳಿಪಟ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅಷ್ಟಕ್ಕೂ, ಮಹೇಶ್ ಬಾಬು, ತಲೈವಾ ದಾಖಲೆ ಏನಾಗಿತ್ತು? ಯಜಮಾನ ಹೇಗೆ ಉಡೀಸ್ ಮಾಡಿದೆ ಎಂಬ ಮಾಹಿತಿ ತಿಳಿಯಲು ಮುಂದೆ ಓದಿ.....

ಈ ಇತಿಹಾಸ ಬರೆದ ಕನ್ನಡದ ಮೊದಲ ಸಿನಿಮಾ

ಈ ಇತಿಹಾಸ ಬರೆದ ಕನ್ನಡದ ಮೊದಲ ಸಿನಿಮಾ

ಟ್ರೈಲರ್ ರಿಲೀಸ್ ಆದ 24 ಗಂಟೆಯಲ್ಲಿ 10 ಮಿಲಿಯನ್ ವೀಕ್ಷಣೆ ಕಂಡ ಮೊಟ್ಟ ಮೊದಲ ಕನ್ನಡದ ಟ್ರೈಲರ್ ಯಜಮಾನ ಎಂಬ ದಾಖಲೆ ನಿರ್ಮಿಸಿದೆ. ಇದುವರೆಗೂ ಕನ್ನಡದ ಯಾವ ಟ್ರೈಲರ್ ಕೂಡ ಇಷ್ಟು ವೇಗವಾಗಿ 10 ಮಿಲಿಯನ್ ಕ್ರಾಸ್ ಮಾಡಿಲ್ಲ.

ಸೌತ್ ಇಂಡಿಯಾದಲ್ಲಿ ಎರಡನೇ ಸ್ಥಾನ

ಸೌತ್ ಇಂಡಿಯಾದಲ್ಲಿ ಎರಡನೇ ಸ್ಥಾನ

24 ಗಂಟೆಯಲ್ಲಿ ಅತಿ ಹೆಚ್ಚು ವೀವ್ಸ್ ಪಡೆದ ಟ್ರೈಲರ್ ಗಳ ಪೈಕಿ ದರ್ಶನ್ ಯಜಮಾನ ಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿದೆ. ಮೊದಲ ಸ್ಥಾನದಲ್ಲಿ ತಮಿಳು ನಟ ವಿಜಯ್ ಅಭಿನಯದ ಮೆರ್ಸಲ್ ಸಿನಿಮಾ ಇದೆ. ಮೆರ್ಸಲ್ ಸಿನಿಮಾ ಮೊದಲ 24 ಗಂಟೆಯಲ್ಲಿ 11 ಮಿಲಿಯನ್ ವೀವ್ಸ್ ಪಡೆದಿದೆ.

ಭರತ್ ಅನೆ ನೇನು ಹಿಂದಿಕ್ಕಿದ ಡಿ ಬಾಸ್

ಭರತ್ ಅನೆ ನೇನು ಹಿಂದಿಕ್ಕಿದ ಡಿ ಬಾಸ್

ಮೆರ್ಸಲ್ ಮೊದಲ ಸ್ಥಾನದಲ್ಲಿದ್ದರೇ ಎರಡನೇ ಸ್ಥಾನದಲ್ಲಿ ತೆಲುಗು ನಟ ಮಹೇಶ್ ಬಾಬು ಅಭಿನಯದ ಭರತ್ ಅನೆ ನೇನು ಸಿನಿಮಾದ ಟ್ರೈಲರ್ ಇತ್ತು. ಇದೀಗ, 24 ಗಂಟೆಯಲ್ಲಿ 9.1 ಮಿಲಿಯನ್ ವೀಕ್ಷಣೆ ಪಡೆದಿದ್ದ ಭರತ್ ಅನೆ ನೇನು ಈಗ ಮೂರನೇ ಸ್ಥಾನಕ್ಕೆ ಜಾರಿದೆ. ಎರಡನೇ ಸ್ಥಾನದಲ್ಲಿ ಯಜಮಾನ ಬಂದು ಕೂತಿದೆ.

ಶಿವನಂದಿಯ ಆರ್ಭಟಕ್ಕೆ ತಲೈವಾ ಶಾಕ್

ಶಿವನಂದಿಯ ಆರ್ಭಟಕ್ಕೆ ತಲೈವಾ ಶಾಕ್

ಕೇವಲ ಮಹೇಶ್ ಬಾಬು ಸಿನಿಮಾ ಮಾತ್ರವಲ್ಲ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ ಕಾಲಾ ಚಿತ್ರದ ಟ್ರೈಲರ್ ಅನ್ನು ಸಹ ಯಜಮಾನ ಬ್ರೇಕ್ ಮಾಡಿ ಇಡೀ ಸೌತ್ ಇಂಡಿಯಾವನ್ನೇ ನಡುಗಿಸಿದೆ.

More from Filmibeat

English summary
Darshan's Yajamana is in top 2nd position in most viewed trailer in 24hrs south india beating bharat aane nenu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X