ಡಿಜಿಟಲ್ ರೈಟ್ಸ್: 'ಕೆಜಿಎಫ್' ಫಸ್ಟ್ 'ಯಜಮಾನ' ನೆಕ್ಸ್ಟ್.!
Recommended Video

ಗಾಂಧಿನಗರದ ತುಂಬಾ ಸದ್ಯ 'ಯಜಮಾನ'ನ ಹವಾ ಜೋರಾಗಿದೆ. ಎಲ್ಲೆಲ್ಲೂ 'ಯಜಮಾನ'ನ ಗುಣಗಾನ ಕೇಳಿ ಬರುತ್ತಿದೆ. ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗಿರುವ 'ಯಜಮಾನ' ಸಿನಿಮಾ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದೆ. ಆದರೆ ಡಿಜಿಟಲ್ ರೈಟ್ಸ್ ವಿಷಯದಲ್ಲಿ ಮಾತ್ರ ಕನ್ನಡದ 'ಕೆಜಿಎಫ್' ಸಿನಿಮಾ ಈಗಲೂ ನಂಬರ್ 1 ಸ್ಥಾನದಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಡಿಜಿಟಲ್ ರೈಟ್ಸ್ 18 ಕೋಟಿ ರೂಪಾಯಿ ಮೊತ್ತಕ್ಕೆ ಸೇಲ್ ಆಗಿತ್ತು ಎಂದು ವರದಿಯಾಗಿತ್ತು. ಇದೀಗ 'ಯಜಮಾನ' ಚಿತ್ರದ ಡಿಜಿಟಲ್ ರೈಟ್ಸ್ ಕೂಡ ಬಿಕರಿ ಆಗಿದೆ. ಹೆಚ್ಚಿನ ವಿವರ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ಅಮೆಜಾನ್ ಪ್ರೈಮ್ ಪಾಲಾದ 'ಯಜಮಾನ'
ದಾಸ ದರ್ಶನ್, ರಶ್ಮಿಕಾ ಮಂದಣ್ಣ ಅಭಿನಯದ ಯಜಮಾನ ಚಿತ್ರದ ಡಿಜಿಟಲ್ ಹಕ್ಕುಗಳು ಅಮೆಜಾನ್ ಪ್ರೈಮ್ ಪಾಲಾಗಿದೆ. ಸುಮಾರು 3.75 ಕೋಟಿ ರೂಪಾಯಿಗೆ 'ಯಜಮಾನ' ಚಿತ್ರದ ಡಿಜಿಟಲ್ ರೈಟ್ಸ್ ಸೇಲ್ ಆಗಿದೆ ಎನ್ನಲಾಗಿದೆ.

ಎರಡನೇ ಸ್ಥಾನದಲ್ಲಿ 'ಯಜಮಾನ'
ಡಿಜಿಟಲ್ ಹಕ್ಕುಗಳ ಮಾರಾಟದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವ ಎರಡನೇ ಕನ್ನಡ ಸಿನಿಮಾ 'ಯಜಮಾನ'. 'ಕೆಜಿಎಫ್' ಬಿಟ್ಟರೆ 'ಯಜಮಾನ'ನಿಗೆ ಇಷ್ಟೊಂದು ಡಿಮ್ಯಾಂಡ್ ಲಭಿಸಿರುವುದು.!

ಸ್ಟಾರ್ ಸುವರ್ಣ ಸ್ಯಾಟಲೈಟ್ ಹಕ್ಕು
ಇನ್ನು 'ಯಜಮಾನ' ಚಿತ್ರದ ಪ್ರಸಾರ ಹಕ್ಕುಗಳು ಕನ್ನಡದ ಸ್ಟಾರ್ ಸುವರ್ಣ ವಾಹಿನಿ ಪಾಲಾಗಿದೆ. ದಾಖಲೆಯ ಮೊತ್ತ ಕೊಟ್ಟು ಸ್ಟಾರ್ ಸುವರ್ಣ ವಾಹಿನಿ 'ಯಜಮಾನ' ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆ.

ಪ್ರಸಾರ ಯಾವಾಗ.?
ಸದ್ಯಕ್ಕೆ ಅಮೆಜಾನ್ ಪ್ರೈಮ್ ಮತ್ತು ಸ್ಟಾರ್ ಸುವರ್ಣ ವಾಹಿನಿ ಹಕ್ಕುಗಳನ್ನು ಖರೀದಿ ಮಾಡಿದೆ ಅಷ್ಟೇ. ಇನ್ನೂ 'ಯಜಮಾನ' ಸಿನಿಮಾ ಬಿಡುಗಡೆಯಾಗಿ ಬೆರಳೆಣಿಕೆ ದಿನಗಳಷ್ಟೇ ಕಳೆದಿವೆ. ಹೀಗಾಗಿ 'ಯಜಮಾನ' ಸಿನಿಮಾವನ್ನು ಮೊಬೈಲ್ ನಲ್ಲೋ, ಟಿವಿಯಲ್ಲೋ ನೋಡಬೇಕು ಅಂದ್ರೆ ಇನ್ನೂ ಕೆಲ ತಿಂಗಳು ಕಾಯಬೇಕು.


Click it and Unblock the Notifications











