ಅಭಿಮಾನಿಗಳಿಗೆ ದರ್ಶನ ನೀಡಲು ಸಿದ್ಧನಾದ 'ಯಜಮಾನ'
Recommended Video

ಯಜಮಾನ ಸಿನಿಮಾದ ಫಸ್ಟ್ ಲುಕ್ ಯಾವಗ ರಿಲೀಸ್ ಗೊತ್ತಾ..? | Filmibeat Kannada
ನಟ ದರ್ಶನ್ 'ಯಜಮಾನ'ನಾಗಿ ಹೇಗೆ ಕಾಣುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆ ಕುತೂಹಲಕ್ಕೆ ಬ್ರೇಕ್ ಬೀಳುವ ಸಮಯ ಹತ್ತಿರದಲ್ಲಿಯೇ ಇದೆ. ಅಂದಹಾಗೆ, 'ಯಜಮಾನ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
'ಯಜಮಾನ' ಚಿತ್ರದ ಮೊದಲ ನೋಟ ಸಪ್ಟೆಂಬರ್ 23 ರಂದು ಬೆಳಗ್ಗೆ 10ರಂದು ಬಿಡುಗಡೆಯಾಗಲಿದೆ. ಈ ವಿಷಯವನ್ನು ಒಂದು ಸಿಂಪಲ್ ಪೋಸ್ಟರ್ ಮೂಲಕ ಚಿತ್ರತಂಡ ಹಂಚಿಕೊಂಡಿದೆ. ಪೋಸ್ಟರ್ ನಲ್ಲಿ ಹಿಂದೆ ತಿರುಗಿಕೊಂಡ ಡಿ ಬಾಸ್ ಲುಕ್ ಇದೇ ಭಾನುವಾರ ರಿವೀಲ್ ಆಗಲಿದೆ.

'ಯಜಮಾನ' ನಟ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾವನ್ನು ಪಿ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಕೊನೆಯ ಹಂತದಲ್ಲಿದೆ. ಬಿ ಸುರೇಶ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪೆ ಸಿನಿಮಾದ ನಾಯಕಿ ಆಗಿದ್ದಾರೆ. ವಿಶೇಷ ಅಂದರೆ, ದರ್ಶನ್ ಪುತ್ರ ವಿನೀಶ್ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
More from Filmibeat
English summary
Kannada actor Darshan's 51th movie 'Yajamana' first look will be releasing september 23th. The movie is producing by Shailaja Nag and P.Kumar will be directing this movie.


Click it and Unblock the Notifications











