»   » ಕನ್ನಡ ಹಾಡು ಹಾಡಿ, ಅಪವಾದಕ್ಕೆಇತಿಶ್ರೀ ಹಾಡಿದ

ಕನ್ನಡ ಹಾಡು ಹಾಡಿ, ಅಪವಾದಕ್ಕೆಇತಿಶ್ರೀ ಹಾಡಿದ

Posted By: Staff
Subscribe to Filmibeat Kannada

ಮಲಾಹಾಸನ್‌ರ ಹೇರಾಮ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಪಡೆದ ಮೋಹಕ ಕಂಠದ ಹಾಗೂ ಆಕರ್ಷಕ ಕಣ್ಣುಗಳ ಚೆಲುವೆ ವಸುಂಧರಾ ದಾಸ್‌ ಬೆಂಗಳೂರಿನಲ್ಲೇ ನೆಲೆಸಿದ್ದರೂ ಕನ್ನಡ ಚಿತ್ರಗಳಿಗೆ ಹಾಡುವುದಿಲ್ಲ ಎಂಬ ಅಪವಾದದಿಂದ ಈಗ ಸಂಪೂರ್ಣ ಮುಕ್ತರಾಗಿದ್ದಾರೆ.

ಸೃಷ್ಟಿ - ದೃಷ್ಟಿ ಲಾಂಛನದಲ್ಲಿ ಟಿ.ಎಸ್‌. ನಾಗಾಭರಣ ನಿರ್ದೇಶಿಸುತ್ತಿರುವ 'ನೀಲಾ" ಚಿತ್ರದಲ್ಲಿ ಹೆಜ್ಜೆ ಹೆಜ್ಜೆ ಮಾತನಾಡು, ಗೆಜ್ಜೆ ಗೆಜ್ಜೆ ಮಾತಾಡು, ಮಾತಾಡು.. ಎಂಬ ಗೀತೆಯನ್ನು ಹಾಡುವ ಮೂಲಕ ವಸುಂಧರಾ ತಮ್ಮ ಮೇಲಿದ್ದ ಆರೋಪಕ್ಕೆ ಇತಿಶ್ರೀ ಹಾಡಿದ್ದಾರೆ.

ಈ ಮಧ್ಯೆ ವಿಶಿಷ್ಟ ಪೂರ್ಣ ಕಥೆಯನ್ನುಳ್ಳ 'ನೀಲಾ" ಚಿತ್ರಕ್ಕೆ ಸವದತ್ತಿ, ಉಳವಿ, ಶಿಂಷಾ, ಶ್ರೀರಂಗಪಟ್ಟಣ, ಮೈಸೂರು ಮೊದಲಾದ ಐತಿಹಾಸಿಕ ತಾಣಗಳಲ್ಲಿ ಭರದ ಚಿತ್ರೀಕರಣ ಸಾಗಿದೆ. ಮದನ್‌ ಹರಿಣಿ ನೃತ್ಯ ಸಂಯೋಜನೆಯಲ್ಲಿ ವಸುಂಧರಾ ದಾಸ್‌ ಹಾಡಿರುವ ಗೀತೆಯ ಚಿತ್ರೀಕರಣ ಇತ್ತೀಚೆಗೆ ಮೈಸೂರು ಕಲಾಮಂದಿರದಲ್ಲಿ ಮುಕ್ತಾಯವಾಗಿದೆ.

ಟಿ.ಎಸ್‌. ನಾಗಾಭರಣ ಚಿತ್ರಕತೆ - ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಜಿ.ಎಸ್‌. ಭಾಸ್ಕರ್‌ ಛಾಯಾಗ್ರಹಣ, ವಿಜಯಭಾಸ್ಕರ್‌ ಸಂಗೀತ ಇರುವ ಈ ಚಿತ್ರದ ತಾರಾಗಣದಲ್ಲಿ ಅನಂತ್‌ನಾಗ್‌, ಜಯಂತಿ, ಶರತ್‌ಬಾಬು, ಮಯೂರಿ, ಗಾಯತ್ರಿ, ಜಯರಾಂ, ಏಣಗಿ ನಟರಾಜ್‌ ಹಾಗೂ ಧಾರವಾಡದ ಹಲವು ಜಾನಪದ ಕಲಾವಿದರಿದ್ದಾರೆ.

English summary
Vasundharadas records a song for Neela, new kannada movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada