Yash-Radhika: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅದ್ದೂರಿ ದಸರಾ ಸಂಭ್ರಮ ನೋಡಿ

ನಾಡಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಜಂಬೂ ಸವಾರಿಗೆ ರಾಜ್ಯ ಸಾಕ್ಷಿಯಾಗುತ್ತಿದ್ದು, ನಟ ನಟಿಯರು ಮನೆಯಲ್ಲಿ ನವರಾತ್ರಿ ಸಂಭ್ರಮಿಸಿ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ರಾಕಿಂಗ್ ಜೋಡಿ ಕೂಡ ತಮ್ಮ ಮನೆಯಲ್ಲಿ ಹಬ್ಬ ಮಾಡಿದ್ದು, ನಾಡಿನ ಜನತೆಗೆ ದಸರಾ ಶುಭಾಶಯ ಕೋರಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಸರಾ ಹಬ್ಬದ ನೆನಪಿಗಾಗಿ ತಮ್ಮ ಅದ್ದೂರಿ ಡ್ಯೂಪ್ಲೆಕ್ಸ್ ಮನೆಯ ಬಾಲ್ಕನಿಯಲ್ಲಿ ಸ್ಟೈಲಿಶ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Dasara 2023: Actor Yash and Radhika Pandit celebrate dasara festival

ನಾಡಿನ ಜನತೆಗೆ ದಸರಾ ಶುಭಾಶಯ ಹೇಳಿದ ರಾಕಿಂಗ್ ದಂಪತಿ

ನಟಿ ರಾಧಿಕಾ ಪಂಡಿತ್ ನೀಲಿ ಬಣ್ಣದ ಸೀರೆ ಮತ್ತು ಸ್ಲೀವ್ ಲೆಸ್ ಬ್ಲೌಸ್‌ನಲ್ಲಿ ಮಿಂಚುತ್ತಿದ್ದು, ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದಾರೆ. ಯಶ್ ಬೂದು ಬಣ್ಣದ (ಗ್ರೇ) ಕುರ್ತಾ ಧರಿಸಿದ್ದು, ದಟ್ಟನೆ ಗಡ್ಡ ಮತ್ತು ಕಪ್ಪು ಕನ್ನಡಕ ಮತ್ತು ತಲೆಗೆ ಬೂದು ಬಣ್ಣದ ಬೀನಿ ಕ್ಯಾಪ್ ಧರಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ನಟಿ ರಾಧಿಕಾ ಪಂಡಿತ್, "ಆನಂದದ ಮತ್ತು ಆಶೀರ್ವಾದಗಳಿಂದ ಕೂಡಿದ ದಸರಾ ಹಬ್ಬದ ಶುಭಾಶಯಗಳು!" ಎಂದು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ಕಾಮೆಂಟ್ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

Dasara 2023: Actor Yash and Radhika Pandit celebrate dasara festival

ಇಬ್ಬರ ಫೋಟೋಗೆ ಫ್ಯಾನ್ಸ್ ಈಗಾಗಲೇ ಲಕ್ಷಾಂತರ ಲೈಕ್ ಕೊಟ್ಟಿದ್ದಾರೆ. 'ದಸರಾ ಹಬ್ಬದ ಹಾರ್ಧಿಕ ಶುಭಾಶಯಗಳು ಅಣ್ಣಾ ಅತ್ತಿಗೆ...', 'ಗೊಂಬೆ ಗೊಂಬೆ ದಂತದ ಗೊಂಬೆ... ಇವಳೊಂದು ಅಂದದ ಉಯ್ಯಾಲೆ', 'ದೇವತೆ ನಿನ್ನ ನೋಡಲು ಪ್ರತಿ ನಿಮಿಷ ಕಾಯುವೆನು ಅರೆ ಕ್ಷಣ ನೀ ಸಿಕ್ಕರು ನಗುನಗುತಲಲೆ ಸಾಯುವೆನು!! ಜನುಮಕು ಪ್ರತಿ ಜನುಮಕು ನೀ ನನ್ನವಳು' ಎನ್ನುವ ಕಾಮೆಂಟ್ ಮೂಲಕ ಹೊಗಳಿದ್ದಾರೆ. ಫೋಟೋ ಹಂಚಿಕೊಂಡ ಮೂರು ಗಂಟೆ ಒಳಗೆ 3 ಲಕ್ಷದ 40 ಮಂದಿ ಲೈಕ್ ನೀಡಿದ್ದಾರೆ.

ಇನ್ನು, ಆಯುಧ ಪೂಜೆ ಹಬ್ಬದಂದು ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳಾದ ಐರಾ ಮತ್ತು ಯಥರ್ವ್ ಪೂಜೆ ಮಾಡುತ್ತಿರುವ ಫೋಟೋಗನ್ನು ನಟಿ ಹಂಚಿಕೊಂಡಿದ್ದರು. ಯಾವ ಹಬ್ಬಗಳನ್ನು ಮಿಸ್ ಮಾಡದ ದಂಪತಿಯನ್ನು ಅಭಿಮಾನುಗಳು ಮನಸಾರೆ ಮೆಚ್ಚಿಕೊಂಡಿದ್ದಾರೆ. ದುಬಾರಿ ಕಾರುಗಳು ಮತ್ತು ತಮ್ಮ ಸೈಕಲ್‌ಗಳಿಗೆ ಇಬ್ಬರು ಪೂಜೆ ಮಾಡಿದ್ದಾರೆ. ಬಳಿಕ ಸೈಕಲ್‌ನಲ್ಲಿ ಸವಾರಿ ಮಾಡಿದ್ದಾರೆ.

ಯಶ್ ಸಿನಿಮಾಗಳು

ಕೆಜಿಎಫ್ ಸರಣಿ ಸಿನಿಮಾಗಳ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ತಮ್ಮ ಮುಂದಿನ ಚಿತ್ರವನ್ನು ಆಯ್ಕೆ ಮಾಡುವಲ್ಲಿ ಸಕತ್ ಚ್ಯೂಸಿ ಆಗಿದ್ದಾರೆ. ಕನ್ನಡ ಹೊರತುಪಡಿಸಿ ಬೇರೆ ಬೇರೆ ಚಿತ್ರರಂಗಗಳಿಂದ ಆಫರ್‌ಗಳು ಬರುತ್ತಿರುವ ಕಾರಣ, ಯಶ್ ಅವರು ಸ್ಕ್ರಿಪ್ಟ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುವ ಸಾಧ್ಯತೆಯಿದೆ.

ನಟ ಯಶ್ ಅಧಿಕೃತವಾಗಿ ಯಾವುದೇ ಸಿನಿಮಾವನ್ನು ಘೋಷಣೆ ಮಾಡಿಲ್ಲ. ಆದರೆ, ಯಶ್ 19 ಸಿನಿಮಾವನ್ನು ಗಾಗಿ ಮಲಯಾಳಂ ಚಲನಚಿತ್ರ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನಿರ್ದೇಶಿಸುವ ಸಾಧ್ಯತೆಯಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಅದರ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ. ಇದರ ಜೊತೆಗೆ ಹಿಂದಿಯಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿಯೂ ನಟ ಯಶ್ ನಟಿಸುವ ವದಂತಿಗಳಿವೆ.

More from Filmibeat

English summary
Actor Yash and Radhika Pandit celebrate dasara festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X