ದರ್ಶನ್ ಬಿಡುಗಡೆ ಭವಿಷ್ಯ ನುಡಿದ ದಸರೀಘಟ್ಟದ ಶಕ್ತಿ ದೇವತೆ, ಕಳಸದಲ್ಲಿ ಬರೆದಿದ್ದೇನು..?

ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಈ ವಾದ-ವಿವಾದ ಏನೇ ಇರಲಿ.. ಸದ್ಯಕ್ಕೆ ದರ್ಶನ್ ಹಣೆಬರಹಕ್ಕೆ ಈ ಗ್ರಹ ಗತಿಗಳೇ ಕಾರಣ ಎಂಬ ಮಾತುಗಳು ಮಾತ್ರ ದಶ ದಿಕ್ಕುಗಳಲ್ಲಿ ಬಲವಾಗಿ ಕೇಳಿ ಬರುತ್ತಿವೆ. ಎದುರಾದ ಇದೊಂದು ಅಪಾಯವನ್ನು ದರ್ಶನ್ ಪಾರು ಮಾಡಿದರೆ ಮುಂದೆ ಯಾರಿಂದನೂ ದರ್ಶನ್ ಅವರನ್ನು ತಡೆಯಲು ಸಾಧ್ಯ ಇಲ್ಲ ಎಂಬ ಭವಿಷ್ಯವಾಣಿ ಕೇಳಿ ಬರುತ್ತಿವೆ.

ಇದಕ್ಕೆ ಪೂರಕವಾಗಿ ನಾನು ಅಂದರೆ ನಂಬರ್.. ನಂಬರ್ ಅಂದರೆ ನಾನು..ಎನ್ನುವ ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ದರ್ಶನ್ ಅವರ ಜಾತಕ ಹರಿವುಕೊಂಡು ಮುಂದೆ ಏನೆಲ್ಲ ಆಗಬಹುದು ಎನ್ನುವುದನ್ನು ಈಗ್ಲೇ ಹೇಳಲು ಶುರು ಮಾಡಿದ್ದಾರೆ. ಸದ್ಯದಲ್ಲಿಯೇ ದರ್ಶನ್ ಬಂಧನದಿಂದ ಮುಕ್ತರಾಗುತ್ತಾರೆ ಎಂದು ಕೂಡ ಹೇಳುತ್ತಿದ್ದಾರೆ. ಈ ನಡುವೆ ಅವರ ಅಭಿಮಾನಿಗಳು ದರ್ಶನ್ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ದರ್ಶನ್ ಅವರ ಇಬ್ಬರು ಅಭಿಮಾನಿಗಳು ಪ್ರಸಿದ್ಧ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆಯನ್ನೂ ಕೇಳಿದ್ದಾರೆ.

dasarighatta-chowdeshwari-devi-predictions-about-actor-darshan-who-is-accused-in-renukaswamy-case

ಹೌದು. ದಸರೀಘಟ್ಟ ಚೌಡೇಶ್ವರಿ ದೇವಸ್ಥಾನ..ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆದಿಚುಂಚನಗಿರಿ ಶಾಖ ಮಠದಲ್ಲಿರುವ 800 ವರ್ಷಗಳ ಇತಿಹಾಸವನ್ನೂ ಹೊಂದಿರುವ ಭವ್ಯ ದೇವಾಲಯ. ಶ್ರೀ ಕ್ಷೇತ್ರ ದಸರೀಘಟ್ಟದಲ್ಲಿ ನೆಲೆಗೊಂಡಿರುವ ಚೌಡೇಶ್ವರಿ ದೇವಿಯು ವಲ್ಮಿಕ (ಹುತ್ತ)ದ ರೂಪದಲ್ಲಿಇದೆ. ಅದರ ಮುಂಭಾಗದಲ್ಲಿಆರು ಅಡಿ ಎತ್ತರದಲ್ಲಿಅಮ್ಮನವರ ಆಕೃತಿಯನ್ನು ಶುದ್ಧ ಆವೆಮಣ್ಣು, ನಾರಿಕೇಳ, ಶಂಖ ಇತ್ಯಾದಿ ಪ್ರಾಕೃತಿಕ ದ್ರವ್ಯಗಳಿಂದ ನಿರ್ಮಿಸಲಾಗಿದೆ. ತಾಯಿಯ ಧ್ಯಾನ ಶ್ಲೋಕದಲ್ಲಿಅವಳ ವರ್ಣನೆ ಕಾಣಬಹುದಾಗಿದೆ.

ಶ್ರೀ ಕ್ಷೇತ್ರ ದಸರೀಘಟ್ಟದ ಅಮ್ಮನವರ ಪವಾಡ ಅದ್ಭುತ. ಅದನ್ನು ಯಾವ ರೀತಿಯಲ್ಲೂಬಣ್ಣಿಸಲು, ವರ್ಣಿಸಲು ಸಾಧ್ಯವೇ ಇಲ್ಲ. ಕಾರಣ ಅದೊಂದು ಅಗೋಚರ, ವಿಸ್ಮಯಕಾರಿ, ಹಿಂದೆ, ಇಂದು, ಮುಂದೆ ನಡೆಯುವ ಆಗುಹೋಗುಗಳನ್ನು ಬರೆದು ಹೇಳುವ ಮಹಾಶಕ್ತಿ. ಚೌಡೇಶ್ವರಿಯ ಉತ್ಸವದ ಮೂರ್ತಿಯ ಪೀಠವನ್ನು ಇಬ್ಬರು ವ್ಯಕ್ತಿಗಳು ಹಿಡಿದುಕೊಳ್ಳುತ್ತಾರೆ. ಒಂದು ಮಣೆಯ ಮೇಲೆ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಹಾಕಿದರೆ ಅದರ ಮೇಲೆ ಯಾವ ಭಾಷೆಯಲ್ಲಾದರೂ ನಮ್ಮ ಮನದಾಳದ ಭಾವನೆ, ನೋವು ಸಮಸ್ಯೆ ಬರೆದು ಅದಕ್ಕೆ ಪರಿಹಾರ ಹೇಳುತ್ತದೆ. ಇದು ನೈಜಘಟನೆ. ಯಾರು ಯಾವಾಗ ಬೇಕಾದರೂ ನೋಡಬಹುದಾಗಿದೆ. ಅಮ್ಮನವರನ್ನು ನೋಡಲು ಪ್ರಶ್ನೆ ಕೇಳಲು, ರಾಜ್ಯ ಹೊರರಾಜ್ಯಗಳಿಂದ ಅನೇಕ ಭಕ್ತರು ಬರುತ್ತಾರೆ.

dasarighatta-chowdeshwari-devi-predictions-about-actor-darshan-who-is-accused-in-renukaswamy-case

ಇಂತಹ ಪಾಪ ಕಳೆವ ಪುಣ್ಯಧಾಮಕ್ಕೆ ಬಂದಿದ್ದ ದರ್ಶನ್ ಅವರ ಇಬ್ಬರು ಅಭಿಮಾನಿಗಳು, ದೇವಿಯ ಕಳಸದ ಮುಂದೆ ದರ್ಶನ್ ಬಿಡುಗಡೆ ಆಗ್ತಾರಾ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಆ ನಂತರ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿದೆಯೋ ಇಲ್ಲೋ ಗೊತ್ತಿಲ್ಲ. ನಮಗೆ ಅವರು ಹೊರಗಡೆ ಬರಬೇಕು ಅನ್ನುವ ಆಸೆ ಇದೆ. ಯಾವಾಗ ಅವರು ಹೊರಬರುತ್ತಾರೆ ಎಂದು ಕೇಳಿದ್ದೆವು ಎಂದಿರುವ ಇಬ್ಬರು, ಅದಕ್ಕೆ ದೇವಿ ಏನೂ ಕೂಡ ಉತ್ತರ ನೀಡುತ್ತಿಲ್ಲ. ಎಷ್ಟು ದಿವಸ ಆಗುತ್ತದೆ ಎಂದು ನಾವು ಕೇಳಿದೆವು ಅದಕ್ಕೆ ದೇವಿ ಇನ್ನೂ ಸಮಯಬೇಕು. ಈಗಲೇ ಹೇಳಲು ಆಗಲ್ಲ ಎಂದು ಹೇಳುತ್ತಿದ್ದಾಳೆ ಎಂದಿದ್ದಾರೆ. ಕೊನೆಯದಾಗಿ ಕೇಳಿದಾಗ ಇನ್ನೂ ಕಾಲಾವಕಾಶ ಇದೆ ಎಂದು ಹೇಳಿದ್ದಾಳೆ ಎಂದು ಅಭಿಮಾನಿ ಉತ್ತರಿಸಿದ್ದಾರೆ. ಅಭಿಮಾನಗಳ ಪ್ರಶ್ನೆಗೆ ದೇವಿ ಕಳಸದಲ್ಲಿ ಬರೆದಿದ್ದು, ಕಷ್ಟ ಇದೆ ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X