For Quick Alerts
  ALLOW NOTIFICATIONS  
  For Daily Alerts

  ಪ್ರಮೋಷನ್ ಕಿಂಗ್ ಪ್ರೇಮ್ ಈಸ್ ಬ್ಯಾಕ್: ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್‌ಗೆ ಹೇಗಿದೆ ಗೊತ್ತಾ ಪ್ಲ್ಯಾನ್?

  |

  'ಏಕ್‌ ಲವ್‌ಯಾ' ನಂತರ ಪ್ರೇಮ್, ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿರೋದು ಗೊತ್ತೇಯಿದೆ. ಆದರೆ ಸಿನಿಮಾ ಟೈಟಲ್ ಮಾತ್ರ ಇನ್ನು ಫಿಕ್ಸ್ ಆಗಿದೆ. 'ಕಾಳಿ' ಹಾಗೂ 'ಕೇಡಿ' ಟೈಟಲ್‌ಗಳ ಬಗ್ಗೆ ಚಿತ್ರತಂಡ ಚರ್ಚೆ ನಡೆಸಿದ್ದು ನಿಜ. ಆದರೆ ಯಾವುದು ಫೈನರ್ ಎನ್ನುವುದು ಮಾತ್ರ ಇನ್ನು ಗೊತ್ತಿಲ್ಲ. ಸದ್ಯ ಸಿನಿಮಾ ಟೈಟಲ್ ಲಾಂಚ್‌ಗೆ ಭರ್ಜರಿ ಸಿದ್ಧತೆ ನಡೀತಿದೆ. ಸಿಂಹಾಸನದ ಮೇಲೆ ಚಪ್ಪಲಿ, ಪಕ್ಕದಲ್ಲಿ ಲಾಂಗ್ ಇಟ್ಟು ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

  ಒಂದು ಒಳ್ಳೆ ಸಿನಿಮಾ ಮಾಡುವುದು ಎಷ್ಟೇ ಅಲ್ಲ, ಅದರ ಬಗ್ಗೆ ಅಷ್ಟೇ ಚೆನ್ನಾಗಿ ಪ್ರಮೋಷನ್ ಮಾಡಬೇಕು. ಪ್ರೇಕ್ಷಕರು ಮುಂದೆ ಕೊಂಡೊಯ್ಯಬೇಕು. ಆಗ ಮಾತ್ರ ಸಿನಿಮಾ ಗೆಲ್ಲೋಕೆ ಸಾಧ್ಯ. ಜೋಗಿ ಪ್ರೇಮ್ ಪ್ರಮೋಷನ್ ಸ್ಟ್ಯಾಟರ್ಜಿ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ವಿಭಿನ್ನ ರೀತಿಯ ಪ್ರಮೋಷನ್‌ನಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸದ್ದು ಮಾಡಿದವರು ಪ್ರೇಮ್. ಧ್ರುವ ಸರ್ಜಾ ಜೊತೆ ಸೇರಿ ಪ್ರೇಮ್ ಈ ಬಾರಿ ಪ್ಲ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ಇದೀಗ ಟೈಟಲ್ ರಿಲೀಸ್ ಸಮಯ ಬಂದಿದೆ.

  ಅಧಿಕೃತ ಘೋಷಣೆಗೂ ಮೊದ್ಲೆ ಧ್ರುವ- ಪ್ರೇಮ್ ಸಿನಿಮಾ ಟೈಟಲ್ ಲೀಕ್? ಅಯ್ಯೋ ಇದು ಹಳೇ ಟೈಟಲ್ ಎಂದ ನೆಟ್ಟಿಗರು!ಅಧಿಕೃತ ಘೋಷಣೆಗೂ ಮೊದ್ಲೆ ಧ್ರುವ- ಪ್ರೇಮ್ ಸಿನಿಮಾ ಟೈಟಲ್ ಲೀಕ್? ಅಯ್ಯೋ ಇದು ಹಳೇ ಟೈಟಲ್ ಎಂದ ನೆಟ್ಟಿಗರು!

  ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನೆರವೇರಿಸಿ, ಪ್ರೇಮ್ ಸಿನಿಮಾ ಶೂಟಿಂಗ್ ಶುರು ಮಾಡಿದ್ದರು. ಚಿತ್ರದಲ್ಲಿ 80ರ ದಶಕದ ಕತೆ ಹೆಣೆದು ರೆಟ್ರೋ ಸ್ಟೈಲ್‌ನಲ್ಲಿ ಪ್ರೇಮ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸದ್ಯ ಥೀಮ್ ಪೋಸ್ಟರ್‌ಗಳು ಬಿಟ್ಟರೆ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಅಕ್ಟೋಬರ್ 29ಕ್ಕೆ ಸಿನಿಮಾ ಟೈಟಲ್ ಅನೌನ್ಸ್ ಮಾಡೋದಾಗಿ ವಿಜಯದಶಮಿ ಸಂಭ್ರಮದಲ್ಲಿ ಪ್ರೇಮ್ ಘೋಷಿಸಿದ್ದಾರೆ. ಭಾರೀ ವೆಚ್ಚದಲ್ಲಿ ಟೈಟಲ್ ಟೀಸರ್ ಸಿದ್ದಪಡಿಸಿದ್ದು, ಅದ್ಧೂರಿ ಈವೆಂಟ್‌ನಲ್ಲಿ ಇದನ್ನು ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

  ಒರಾಯನ್ ಮಾಲ್‌ನಲ್ಲಿ ದೊಡ್ಡ ಈವೆಂಟ್ ನಡೆಸಿ ಕ್ರೇಜಿ ಕಾಂಬಿನೇಷನ್‌ ಸಿನಿಮಾ ಟೈಟಲ್‌ ಘೋಷಣೆಗೆ ತೀರ್ಮಾನಿಸಲಾಗಿದೆ. ಅಂದು ಸಂಜೆ 5 ಗಂಟೆಗೆ ಈವೆಂಟ್‌ ನಡೆಯಲಿದೆ. ಸಾಮಾನ್ಯವಾಗಿ ಸಿನಿಮಾ ಟೀಸರ್ ಅಥವಾ ಟ್ರೈಲರ್ ಲಾಂಚ್ ಈವೆಂಟ್‌ನ ಈ ರೀತಿ ದೊಡ್ಡದಾಗಿ ಮಾಡ್ತಾರೆ. ಆದರೆ ಪ್ರೇಮ್ ಟೈಟಲ್‌ ಟೀಸರ್ ರಿಲೀಸ್‌ಗೆ ಇಂತಾದೊಂದು ಪ್ಲ್ಯಾನ್ ಮಾಡಿದ್ದಾರೆ. ಟೈಟಲ್‌ಗಾಗಿಯೇ 10 ಲಕ್ಷ ಖರ್ಚು ಮಾಡಿ, ಈ ಟೀಸರ್​ ರೆಡಿ ಮಾಡಿದ್ದಾರೆ. ಸ್ಟಾರ್ ನಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರುವ ಸಾಧ್ಯತೆಯಿದೆ.

  Date venue locked for Prem And Dhruva Sarja Movie Title Teaser Launch

  ಧ್ರುವ ಸರ್ಜಾಗೆ ಕಷ್ಟದ ಕೆಲಸ ಕೊಟ್ಟ ಪ್ರೇಮ್; ಕನ್ನಡ ನಟರಲ್ಲಿ ಈ ಕೆಲಸ ಇದೇ ಮೊದಲುಧ್ರುವ ಸರ್ಜಾಗೆ ಕಷ್ಟದ ಕೆಲಸ ಕೊಟ್ಟ ಪ್ರೇಮ್; ಕನ್ನಡ ನಟರಲ್ಲಿ ಈ ಕೆಲಸ ಇದೇ ಮೊದಲು

  ಈ ಹಿಂದೆ ಚಿತ್ರಕ್ಕೆ 'ಕಾಳಿ' ಎನ್ನುವ ಟೈಟಲ್ ಇಡಲು ಪ್ರೇಮ್ ಮುಂದಾಗಿದ್ದರು. ಆದರೆ ಆ ಟೈಟಲ್ ಹೆಬ್ಬುಲಿ ಸಿನಿಮಾ ನಿರ್ದೇಶಕ ಕೃಷ್ಣ ಅವರ ಬಳಿಯಿದೆ. ಅಭಿಷೇಕ್ ಅಂಬರೀಶ್ ನಟನೆಯ ಚಿತ್ರವನ್ನು ಇದೇ ಟೈಟಲ್‌ನಲ್ಲಿ ಕೃಷ್ಣ ನಿರ್ದೇಶನ ಮಾಡ್ತಿದ್ದಾರೆ. ಇದೀಗ 'ಕೇಡಿ' ಎನ್ನುವ ಟೈಟಲ್‌ನ ಚಿತ್ರಕ್ಕೆ ಫಿಕ್ಸ್ ಮಾಡಲು ಆಲೋಚನೆಯಲ್ಲಿದ್ದಾರಂತೆ ಪ್ರೇಮ್. 'ಕೇಡಿ' ನಂಬರ್ ವನ್ ಎಂದು ಕೊಂಚ ಬದಲಿಸಿ, ಸಿನಿಮಾ ಪ್ರೇಕ್ಷಕರ ಮುಂದೆ ತರುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಟೈಟಲ್ ಬಿಟ್ಟು ಪ್ರೇಮ್‌ಗೆ ಹೊಸ ಟೈಟಲ್‌ ಸಿಕ್ಕಿದ್ಯಾ ? ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಒಟ್ನಲ್ಲಿ ಪ್ರೇಮ್- ಧ್ರುವ ಜೋಡಿಯ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.

  English summary
  Date venue locked for Prem And Dhruva Sarja Movie Title Teaser Launch. Know mOre.
  Wednesday, October 5, 2022, 13:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X