For Quick Alerts
  ALLOW NOTIFICATIONS  
  For Daily Alerts

  ನೀರ್ ದೋಸೆ 'ದತ್ತಣ್ಣ'ಗೆ 75 ವರ್ಷ ಆಯ್ತಣ್ಣಾ.!

  |

  ಹೆಸರು ಹೆಚ್.ಜಿ.ದತ್ತಾತ್ರೇಯ... ಆದರೆ 'ದತ್ತಣ್ಣ' ಅಂತ್ತಾನೆ ಜನಪ್ರಿಯ. ಇತ್ತೀಚೆಗಷ್ಟೆ ಎಲ್ಲರಿಗೂ 'ನೀರ್ ದೋಸೆ' ತಿನ್ನಿಸಿದ್ದ ದತ್ತಣ್ಣ ಈಗ ಕೇಕ್ ಕಟ್ ಮಾಡಿದ್ದಾರೆ. ತಮ್ಮ 75ನೇ ವರ್ಷದ ಹುಟ್ಟುಹಬ್ಬವನ್ನ ದತ್ತಣ್ಣ ಸ್ಪೆಷಲ್ ಆಗಿ ಆಚರಣೆ ಮಾಡಿಕೊಂಡಿದ್ದಾರೆ. ಅವ್ರ ಕುಟುಂಬದಲ್ಲಿ ಹುಟ್ಟುಹಬ್ಬ ಆಚರಿಸುವ ಪದ್ಧತಿ ಇಲ್ಲ. ಅದರು ಸಹ ಸ್ನೇಹಿತರ ಪ್ರೀತಿಪೂರ್ವ ಆದೇಶಕ್ಕೆ ತಲೆಬಾಗಿದ್ದಾರೆ. ಈ ಆಚರಣೆಯಲ್ಲಿ ನಿರ್ದೇಶಕ ಸೀತಾರಾಮ್, ಪಿ.ಶೇ‍ಷಾದ್ರಿ, ಲಿಂಗದೇವರು, ನಿರ್ಮಾಪಕಿ ಶೈಲಾಜಾ ನಾಗ್ ಭಾಗಿಯಾಗಿದ್ದರು.

  75ನೇ ವಸಂತಕ್ಕೆ ಕಾಲಿಟ್ಟಿರುವ ದತ್ತಣ್ಣ ಏಪ್ರಿಲ್ 20 ರಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಕೇಕ್ ಕಟ್ ಮಾಡಿ, ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಅಂದಹಾಗೆ, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದತ್ತಣ್ಣ ಅವರ ಜೀವನ ಮತ್ತು ಸಿನಿಮಾ ಯಾನ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನ ನಿಮ್ಮ ಮುಂದೆ ತಂದಿದ್ದೀವಿ, ಓದಿರಿ....

  'ದತ್ತಣ್ಣ' ಅಂತ್ಲೇ ಜನಪ್ರಿಯ

  'ದತ್ತಣ್ಣ' ಅಂತ್ಲೇ ಜನಪ್ರಿಯ

  ಹೆಸರು ಎಚ್.ಜಿ.ದತ್ತಾತ್ರೇಯ ಅದರೂ ಚಿತ್ರರಂಗದಲ್ಲಿ 'ದತ್ತಣ್ಣ' ಎಂದೇ ಜಯಪ್ರಿಯ. ಏಪ್ರಿಲ್ 20, 1942 ರಂದು ಚಿತ್ರದುರ್ಗದಲ್ಲಿ ದತ್ತಣ್ಣ ಜನಿಸಿದರು. ಇವರ ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಓದಿನಲ್ಲಿ ತುಂಬ ಆಸಕ್ತಿ ಹೊಂದಿದ್ದ ದತ್ತಣ್ಣ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಎಂ.ಇ.ಪದವಿ ಪಡೆದಿದ್ದಾರೆ.

  ರಂಗಭೂಮಿಯ ಪ್ರೀತಿ

  ರಂಗಭೂಮಿಯ ಪ್ರೀತಿ

  ಪದವಿ ಬಳಿಕ ದತ್ತಣ್ಣ ಅನೇಕ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರೂ ಸಹ ರಂಗಭೂಮಿಯನ್ನ ಮರೆಯಲಿಲ್ಲ. ಗುಬ್ಬಿ ಕಂಪನಿಯ ನಾಟಕಗಳು ಅವರ ಮೇಲೆ ಜಾಸ್ತಿ ಪ್ರಭಾವ ಬೀರಿತು. ತುಮಕೂರಿನ ಪ್ರೌಢಶಾಲೆಯ ನಾಟಕದಲ್ಲಿ ಮದಕರಿ ನಾಯಕನ ಪಾತ್ರ ಮಾಡಿ ಭೇಷ್ ಎನ್ನಿಸಿಕೊಂಡಿದ್ದರು.

  ಹೆಣ್ಣು ಪಾತ್ರಗಳೇ ಮಾಡಿದ್ದು ಜಾಸ್ತಿ

  ಹೆಣ್ಣು ಪಾತ್ರಗಳೇ ಮಾಡಿದ್ದು ಜಾಸ್ತಿ

  ದತ್ತಣ್ಣ ನಾಟಕದಲ್ಲಿ ಮೊದಮೊದಲು ಗಂಡು ಪಾತ್ರಗಳಿಗಿಂತ ಹೆಣ್ಣು ಪಾತ್ರಗಳನ್ನೇ ಮಾಡಿದ್ದು ಹೆಚ್ಚು. ಆಗಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತೀರ ಕಡಿಮೆ. ಅದೊಂದೆ ಕಾರಣದಿಂದ ನಾಟಕ ನಿಲ್ಲಬಾರದು ಅಂತ ದತ್ತಣ್ಣ ತಾವೇ ಹೆಣ್ಣು ಪಾತ್ರಗಳನ್ನ ಮಾಡುತ್ತಿದ್ರು. ಅವುಗಳಲ್ಲಿ 'ಅಳಿಯ ದೇವರು' ನಾಟಕದ ರುಕ್ಕುಪಾತ್ರ, 'ದೇವದಾಸಿ' ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ, ಪ್ರಮುಖವಾದವು.

  ಸಿನಿಮಾ ರಂಗಕ್ಕೆ ಬಂದಾಗ 45 ವರ್ಷ!

  ಸಿನಿಮಾ ರಂಗಕ್ಕೆ ಬಂದಾಗ 45 ವರ್ಷ!

  ದತ್ತಣ್ಣನವರು ಸಿನಿಮಾ ರಂಗಕ್ಕೆ ಬಂದದ್ದು ಬಹಳ ತಡವಾಗಿ, ಅಂದರೆ 45 ವರ್ಷ ತುಂಬಿದ ಮೇಲೆ. ಟಿ.ಎಸ್‌.ರಂಗ ಅವರು ತಮ್ಮ 'ಉದ್ಭವ್' ಎಂಬ ಸಿನಿಮಾದಲ್ಲಿ 'ದತ್ತಣ್ಣ'ನವರನ್ನು ಪರಿಚಯಿಸಿದರು. ಅದಾದ ನಂತರ ನಾಗಾಭರಣ ಅವರ 'ಆಸ್ಫೋಟ', 'ಶರವೇಗದ ಸರದಾರ', 'ಮಾಧುರಿ', 'ಚಿನ್ನಾರಿ ಮುತ್ತ', 'ಬೆಟ್ಟದ ಜೀವ' ಸೇರಿದಂತೆ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು.

  ಪ್ರಶಸ್ತಿ, ಪುರಸ್ಕಾರ

  ಪ್ರಶಸ್ತಿ, ಪುರಸ್ಕಾರ

  'ಮುನ್ನುಡಿ' ಮತ್ತು 'ಆಸ್ಫೋಟ' ಸಿನಿಮಾಗಾಗಿ ರಾಜ್ಯ ಪ್ರಶಸ್ತಿ, ಮುನ್ನುಡಿ ಸಿನಿಮಾಗಾಗಿ ಪೋಷಕ ನಟ ರಾಷ್ಟ್ರ ಪ್ರಶಸ್ತಿ, ಎರಡು ಬಾರಿ ಸ್ಪೆಸಲ್ ಮೆನ್ಷನ್ ರಾಷ್ಟ್ರ ಪ್ರಶಸ್ತಿಗಳು, ಫೀಜಿ ಫಿಲಂ ಫೆಸ್ಟಿವಲ್ ನ ಬೆಸ್ಟ್ ಆಕ್ಟರ್ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಅವರನ್ನ ಅರಸಿ ಬಂದಿವೆ.

  ಇಂದಿಗೂ ಅದೇ ಚಾರ್ಮ್

  ಇಂದಿಗೂ ಅದೇ ಚಾರ್ಮ್

  ಇಂದಿನ ಪೀಳಿಗೆಯ ಪ್ರೇಕ್ಷಕರಿಗೂ ದತ್ತಣ್ಣ ತುಂಬ ಇಷ್ಟ ಆಗ್ತಾರೆ. ಇತ್ತೀಚೆಗೆ ಬಂದ 'ನೀರ್ ದೋಸೆ' ಮತ್ತು 'ರಾಜಕುಮಾರ' ಸಿನಿಮಾಗಳೇ ಅದಕ್ಕೆ ಉತ್ತಮ ಉದಾಹರಣೆ. ಇಂದಿನ ಸಿನಿಮಾಗಳಲ್ಲಿ ಅವ್ರ ಅಭಿನಯ ನೋಡಿದ್ರೆ ವಾವ್ ಎನಿಸುತ್ತೆ. ಕೈತುಂಬ ಸಿನಿಮಾಗಳನ್ನ ಹೊಂದಿರುವ ದತ್ತಣ್ಣಗೆ ಪೋಷಕ ನಟನಾಗಿ ಈಗಲ್ಲೂ ಸಖತ್ ಬೇಡಿಕೆ ಇದೆ.

  English summary
  Kannada Actor H.G.Dattatreya celebrated his 75th birthday on April 20th. On this occasion, here is his life journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X