'ನೀರ್ ದೋಸೆ' ತಿನ್ನಿಸಿದ್ದ ದತ್ತಣ್ಣ ಈಗ 'ಕಿಸ್' ಕೊಡೋಕ್ಕೆ ಬಂದರು
Recommended Video

ಹಿರಿಯ ನಟ ದತ್ತಣ್ಣ ಈಗ ಮತ್ತೆ ಬಂದಿದ್ದಾರೆ. 'ನೀರ್ ದೋಸೆ' ಸಿನಿಮಾದ ಬಳಿಕ 'ರಾಜಕುಮಾರ' ಸಿನಿಮಾದಲ್ಲಿ ನಟಿಸಿದ್ದ ಅವರು ಈಗ ಮತ್ತೊಂದು ಕಮರ್ಷಿಯಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಎ.ಪಿ.ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದಲ್ಲಿ ದತ್ತಣ್ಣ ನಟಿಸಿದ್ದಾರೆ. ಸಿನಿಮಾದ ಒಂದು ವಿಶೇಷ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ತಮ್ಮ ನಟನೆಯ ಮೂಲಕ ಇಂದಿನ ಪೀಳಿಗೆಯ ಪ್ರೇಕ್ಷಕರನ್ನು ದತ್ತಣ್ಣ ಸೆಳೆಯುತ್ತಿದ್ದಾರೆ. ಸದ್ಯ 'ಕಿಸ್' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದ್ದಿದ್ದು, ಎರಡು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಜೊತೆಗೆ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಹಾಡಿನ ಶೂಟಿಂಗ್ ಅನ್ನು ಆಸ್ಟೇಲಿಯಾದಲ್ಲಿ ಮಾಡುವ ಪ್ಲಾನ್ ಇದೆಯಂತೆ.

'ಅಂಬಾರಿ', 'ಅದ್ದೂರಿ' ಖ್ಯಾತಿಯ ನಿರ್ದೇಶಕ ಎ.ಪಿ.ಅರ್ಜುನ್ ಈಗ 'ಕಿಸ್' ಸಿನಿಮಾ ಮಾಡುತ್ತಿದ್ದಾರೆ. ವಿರಾಟ್ ಮತ್ತು ಶ್ರೀ ಲೀಲಾ ನಾಯಕ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರಿಬ್ಬರ ಮೊದಲ ಸಿನಿಮಾ ಆಗಿದೆ. ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿದೆ. ಈ ಹಿಂದೆ ಚಿತ್ರದ ಟೀಸರ್ ಅನ್ನು ನಟ ಯಶ್ ಬಿಡುಗಡೆ ಮಾಡಿದ್ದು, ಟೀಸರ್ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಉಳಿದಂತೆ ವಿ.ಹರಿಕೃಷ್ಣ ಸಂಗೀತ, ರವಿವರ್ಮ ಸಾಹಸ ನಿರ್ದೇಶನ ಮತ್ತು ವಿ.ರವಿಕುಮಾರ್ 'ಕಿಸ್' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications











