twitter
    For Quick Alerts
    ALLOW NOTIFICATIONS  
    For Daily Alerts

    13 ದಿನಗಳ ಅಂತರದಲ್ಲಿ ಹರಿಪ್ರಿಯಾ ನಟನೆಯ 2 ಸಿನಿಮಾ ರಿಲೀಸ್

    |

    ನಟಿ ಹರಿಪ್ರಿಯಾ ಅಭಿನಯದ 'ಬೆಲ್ ಬಾಟಂ' ಸಿನಿಮಾ ಯಶಸ್ವಿಯಾಗಿ 75 ದಿನಗಳನ್ನು ಪೂರೈಸಿದೆ. ಈ ಸಿನಿಮಾದ ಗೆಲುವಿನ ಜೊತೆಗೆ ಹರಿಪ್ರಿಯಾ ಅಭಿಮಾನಿಗಳು ಮೇ ತಿಂಗಳಿನಲ್ಲಿ ಅವರ ಎರಡು ಸಿನಿಮಾಗಳನ್ನು ನೋಡಬಹುದಾಗಿದೆ.

    ವಿಡಿಯೋ : 'ಸೂಜಿದಾರ' ಸಿನಿಮಾದ ಎರಡನೇ ಹಾಡು ಕೇಳಿ ವಿಡಿಯೋ : 'ಸೂಜಿದಾರ' ಸಿನಿಮಾದ ಎರಡನೇ ಹಾಡು ಕೇಳಿ

    'ಡಾಟರ್ ಆಫ್ ಪಾರ್ವತಮ್ಮ' ಚಿತ್ರದ ಬಿಡುಗಡೆಯ ದಿನಾಂಕ ಮೇ 24ಕ್ಕೆ ನಿಗದಿಯಾಗಿತ್ತು. ಈಗ ಅವರ ಮತ್ತೊಂದು ಸಿನಿಮಾ 'ಸೂಜಿದಾರ' ಮೇ 10 ರಂದು ರಿಲೀಸ್ ಆಗುವ ವಿಷಯ ಹೊರಬಂದಿದೆ.

    ಈ ಎರಡೂ ಸಿನಿಮಾದ ಪೋಸ್ಟರ್ ಅನ್ನು ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿರುವ ಹರಿಪ್ರಿಯಾ ಬಿಡುಗಡೆಯ ದಿನಾಂಕವನ್ನು ತಿಳಿಸಿದ್ದಾರೆ.

    ಮೇ 23ಕ್ಕೆ ಫಲಿತಾಂಶ, ಮೇ 24ಕ್ಕೆ ಸುಮಲತಾ ಸಿನಿಮಾ ರಿಲೀಸ್ ಮೇ 23ಕ್ಕೆ ಫಲಿತಾಂಶ, ಮೇ 24ಕ್ಕೆ ಸುಮಲತಾ ಸಿನಿಮಾ ರಿಲೀಸ್

    ಈ ಎರಡು ಸಿನಿಮಾಗಳು ವಿಭಿನ್ನ ಕಥಾ ವಸ್ತುವನ್ನು ಹೊಂದಿದೆ. ವಿಶೇಷ ಎಂದರೆ, ಡಾಟರ್ ಆಫ್ ಪಾರ್ವತಮ್ಮ' ಹಾಗೂ 'ಸೂಜಿದಾರ' ಎರಡು ಕೂಡ ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರಗಳಲ್ಲಿ ಹರಿಪ್ರಿಯಾ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ.

    daughter of parvathamma and soojidara movies will be releasing on may

    'ಡಾಟರ್ ಆಫ್ ಪಾರ್ವತಮ್ಮ' ಹಾಗೂ 'ಸೂಜಿದಾರ' ಸಿನಿಮಾಗಳಲ್ಲಿ ಯಾವ ಚಿತ್ರ ಮೊದಲು ಬರುತ್ತದೆ ಎನ್ನುವ ನಿರೀಕ್ಷೆ ಇತ್ತು. ಇದೀಗ ಈ ಎರಡರ ಪೈಕಿ 'ಸೂಜಿದಾರ' ಮೊದಲು ಚಿತ್ರಮಂದಿರಕ್ಕೆ ಕಾಲಿಡುತ್ತಿದೆ.

    'ಸೂಜಿದಾರ' ಮೌನೇಶ್ ಬಡಿಗೇರ್ ನಿರ್ದೇಶನದ ಸಿನಿಮಾವಾಗಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿವೆ. ಯಶ್ ವಂತ್ ಶೆಟ್ಟಿ ಸಿನಿಮಾದ ನಾಯಕನಾಗಿದ್ದಾರೆ. ಸಚಿನ್ ಫಿಲ್ಮ್ಸ್ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ.

    English summary
    Kannada actress Haripriya starrer 'Daughter of Parvathamma' and Soojidara movies will be releasing on May.
    Friday, April 26, 2019, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X