ವಿಡಿಯೋ : 'ಡಾಟರ್ ಆಫ್ ಪಾರ್ವತಮ್ಮ' ಟ್ರೇಲರ್
ನಟಿ ಹರಿಪ್ರಿಯಾ ಲುಕ್ ಮೂಲಕ ಗಮನ ಸೆಳೆದಿದ್ದ 'ಡಾಟರ್ ಆಫ್ ಪಾರ್ವತಮ್ಮ' ಟ್ರೇಲರ್ ಬಿಡುಗಡೆಯಾಗಿದೆ. ಪಿ ಆರ್ ಕೆ ಯೂ ಟ್ಯೂಬ್ ಚಾನಲ್ ನಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಯಾವುದೇ ಪಾತ್ರ ನೀಡಿದರೂ ಅದನ್ನು ತುಂಬ ಚೆನ್ನಾಗಿ ನಿಭಾಯಿಸುತ್ತಿರುವ ಹರಿಪ್ರಿಯಾ ಈಗ ಮತ್ತೆ ತಮ್ಮ ನಟನೆ ಮೂಲಕ ಇಷ್ಟ ಆಗುತ್ತಿದ್ದಾರೆ. ಸಿನಿಮಾದಲ್ಲಿ ಅವರು ವೈದೇಹಿ ಎಂಬ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಖಡಕ್ ಆಫೀಸರ್ ಆಗಿ ಟ್ರೇಲರ್ ನಲ್ಲಿ ಹರಿಪ್ರಿಯಾ ಮಿಂಚಿದ್ದಾರೆ. ಅವರ ಫೈಟ್ ಹಾಗೂ ಡೈಲಾಗ್ ಮಾಸ್ ಆಗಿವೆ. ಸಿನಿಮಾ ಮೇಕಿಂಗ್ ಸ್ಟೈಲ್ ಹಾಗೂ ಕ್ಯಾಮರಾ ವರ್ಕ್ ಗಮನ ಸೆಳೆಯುತ್ತಿದೆ. ಮಿಧುನ್ ಮುಕುಂದನ್ ಮ್ಯೂಸಿಕ್ ಡಿಫರೆಂಟ್ ಆಗಿದೆ.

ಒಂದು ಸಾವು ಸಂಬವಿಸಿದ್ದು, ಅದು ಕೊಲೆಯೋ ಆತ್ಮಹತ್ಯೆಯೇ ಎಂದು ನಾಯಕ ನಟಿ ಪತ್ತೆ ಹಚ್ಚುತ್ತಾಳೆ. ಈ ಘಟನೆಯ ಸುತ್ತ ಸಿನಿಮಾ ಇರುತ್ತದೆ ಎನ್ನುವುದು ಟ್ರೇಲರ್ ನಲ್ಲಿ ತಿಳಿಯುತ್ತಿದೆ.
ಹರಿಪ್ರಿಯಾ ನಟನೆಯ 25ನೇ ಸಿನಿಮಾ ಇದಾಗಿದೆ. ಹರಿಪ್ರಿಯಾಗೆ ತಾಯಿಯಾಗಿ ಸುಮಲತಾ ನಟಿಸಿದ್ದಾರೆ. ಶಂಕರ್ ಜಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, 'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ಮೇ 24 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.


Click it and Unblock the Notifications











