ಮೇ 23ಕ್ಕೆ ಫಲಿತಾಂಶ, ಮೇ 24ಕ್ಕೆ ಸುಮಲತಾ ಸಿನಿಮಾ ರಿಲೀಸ್

Recommended Video

ಮೇ ತಿಂಗಳಲ್ಲಿ ಎರಡು ಫಲಿತಾಂಶಕ್ಕೆ ಕಾಯಬೇಕಿದೆ ಸುಮಲತಾ

ಮೇ 23ಕ್ಕಾಗಿ ಇಡಿ ದೇಶವೇ ಕಾಯುತ್ತಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಆ ದಿನ ಪ್ರಕಟವಾಗಲಿದೆ. ದೇಶದ ಪ್ರಧಾನಮಂತ್ರಿ ಯಾರಾಗಲಿದ್ದಾರೆ ಎಂಬುದು ಆ ದಿನ ಗೊತ್ತಾಗಲಿದೆ. ಅದಕ್ಕಿಂತ ಹೆಚ್ಚು ಸದ್ದು ಮಾಡಿರುವ ಮಂಡ್ಯದ ಹಣೆ ಬರಹ ಬಹಿರಂಗವಾಗಲಿದೆ.

ಮಂಡ್ಯ ಲೋಕಸಭೆ ಅಖಾಡದಲ್ಲಿ ಸುಮಲತಾ ಮತ್ತು ನಿಖಿಲ್ ಕುಮಾರ್ ಸ್ಪರ್ಧಿಸಿದ್ದು, ಇಬ್ಬರಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ ಎಂಬುದು ತೀರಾ ಕುತೂಹಲ ಮೂಡಿಸಿದೆ.

ಮೇ 23ಕ್ಕೆ ಫಲಿತಾಂಶ ಪ್ರಕಟವಾದರೆ, ಮೇ 24ರಂದು ಸುಮಲತಾ ಅಭಿನಯದ ಸಿನಿಮಾ ತೆರೆಕಾಣುತ್ತಿದೆ. ಹೌದು, ಹರಿಪ್ರಿಯಾ ಮತ್ತು ಸುಮಲತಾ ಅಭಿನಯದ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ಮೇ 24 ರಂದು ಬಿಡುಗಡೆಯಾಗುತ್ತಿದೆ.

ಅಂದ್ಹಾಗೆ, ಈ ಸಿನಿಮಾ ಹರಿಪ್ರಿಯಾ ಅವರ 25ನೇ ಚಿತ್ರ. ಹೀಗಾಗಿ, ಸ್ವಲ್ಪ ನಿರೀಕ್ಷೆ ಹೆಚ್ಚಾಗಿಯೇ ಇದೆ. ಇನ್ನು ಫಲಿತಾಂಶದ ಮರುದಿನವೇ ಸಿನಿಮಾ ಬರ್ತಿರೋದು ಅಂಬಿ ಕುಟುಂಬದ ಅಭಿಮಾನಿಗಳಿಗೂ ವಿಶೇಷವೆನಿಸಿಕೊಂಡಿದೆ.

Daughter of parvathamma release on may 24th

ಶಂಕರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕೆ ಎಂ ಶಶಿಧರ್, ವಿಜಯಲಕ್ಷ್ಮಿ, ಕೃಷ್ಣೇಗೌಡ ಬಂಡವಾಳ ಹಾಕಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ.

ಇದೊಂದು ಕ್ರೈಂ ಸುತ್ತ ನಡೆಯುವ ಕಥೆಯಾಗಿದ್ದು, ಹರಿಪ್ರಿಯಾ ಇದರಲ್ಲಿ ವೈದೇಹಿ ಎಂಬ ಹೆಸರಿನ ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹರಿಪ್ರಿಯಾ ಅವರ ತಾಯಿ ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada actress sumalatha and haripriya starrer Daughter of parvathamma movie will release on may 24th. its 25th movie of haripriya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X