'ಬಾಹುಬಲಿ 3'ಗೆ ಡೇವಿಡ್ ವಾರ್ನರ್ ಹೀರೋ ಅಂತೆ

'ಬಾಹುಬಲಿ' ಚಿತ್ರದ ಮೊದಲ ಮತ್ತು ಎರಡನೇ ಭಾಗ ಸೂಪರ್ ಹಿಟ್ ಆಗಿದೆ. ಆ ಸಿನಿಮಾ ಮುಗಿಸಿ 'ಆರ್ ಆರ್ ಆರ್' ಚಿತ್ರದಲ್ಲಿ ನಿರ್ದೇಶಕ ರಾಜಮೌಳಿ ಬ್ಯುಸಿ ಇದ್ದಾರೆ. ಆದರೆ. ಈಗ ಟಾಲಿವುಡ್ ನಲ್ಲಿ 'ಬಾಹುಬಲಿ 3' ಬಗ್ಗೆ ತಮಾಷೆಯ ಚರ್ಚೆಗಳು ನಡೆಯುತ್ತಿದೆ.

ಸದ್ಯ, ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು ಎಲ್ಲರೂ ಅದೇ ಗುಂಗಿನಲ್ಲಿ ಇದ್ದಾರೆ. ಈವರಗೆ ಹೈದರಾಬಾದ್ ಸನ್ ರೈಸರ್ಸ್ ತಂಡ ಮೂರು ಪಂದ್ಯಗಳನ್ನು ಆಡಿದ್ದು, ಎರಡು ಪಂದ್ಯಗಳಲ್ಲಿ ದೊಡ್ಡ ಜಯ ಸಾಧಿಸಿದೆ.

ಹೈದರಾಬಾದ್ ಸನ್ ರೈಸರ್ಸ್ ಗೆಲುವಿನಲ್ಲಿ ದೊಡ್ಡ ಪಾಲು ಹೋಗುವುದು ಆಟಗಾರ ಡೇವಿಡ್ ವಾರ್ನರ್ ಶ್ರಮಕ್ಕೆ. ವಾರ್ನರ್ ಬಿರುಸಿನ ಆಟ ತಂಡದ ದೊಡ್ಡ ಶಕ್ತಿಯಾಗಿದೆ ಮೂರು ಪಂದ್ಯಗಳಲ್ಲಿ ಅವರು ಒಟ್ಟು 254 ರನ್ ಬಾರಿಸಿದ್ದಾರೆ.

ವಾರ್ನರ್ ಆಟ ನೋಡಿದ ಸನ್ ರೈಸರ್ಸ್ ತಂಡ ಅವರನ್ನು ಬಾಹುಬಲಿಗೆ ಹೋಲಿಕೆ ಮಾಡಿದೆ. ಅದೇ ರೀತಿ ಡೇವಿಡ್ ವಾರ್ನರ್ ರ 'ಬಾಹುಬಲಿ 3' ಪೋಸ್ಟರ್ ಟ್ವೀಟ್ ಮಾಡಿದೆ.

david warners bahubali 3 movie poster

ಈ ಟ್ವೀಟ್ ಗೆ ಬಾಹುಬಲಿ ತಂಡ ಕೂಡ ಪ್ರತಿಕ್ರಿಯೆ ನೀಡಿದೆ. ಇಂದಿನ ಪಂದ್ಯಕ್ಕೆ ಶುಭ ಹಾರೈಸಿದೆ. ಡೇವಿಡ್ ವಾರ್ನರ್ ರ 'ಬಾಹುಬಲಿ 3' ಪೋಸ್ಟರ್ ಗಮನ ಸೆಳೆಯುತ್ತಿದೆ.

More from Filmibeat

English summary
Sunrisers Hyderabad player David Warner's 'Bahubali 3' movie poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X