twitter
    For Quick Alerts
    ALLOW NOTIFICATIONS  
    For Daily Alerts

    ರಕ್ಷಿತ್ ನಂತ್ರ ಲಹರಿ ಕಂಪನಿ ವಿರುದ್ದ ಸಿಡಿದೆದ್ದ ದಯಾಳ್

    By Pavithra
    |

    Recommended Video

    ಲಹರಿ ಸಂಸ್ಥೆಯ ವಿರುದ್ಧ ದಯಾಳ್ ಕಿಡಿ...!! | FIlmibeat Kannada

    ಯಾವುದೇ ಸಿನಿಮಾ ಹಾಡುಗಳನ್ನ ಮತ್ತೊಂದು ಚಿತ್ರದಲ್ಲಿ ಮರು ಬಳಕೆ ಮಾಡಿಕೊಳ್ಳಬೇಕಾದರೆ ಈ ಹಿಂದೆ ಆ ಹಾಡಿನ ಹಕ್ಕನ್ನು ಖರೀದಿ ಮಾಡಿರುವ ಆಡಿಯೋ ಕಂಪನಿ ಬಳಿ ಅನುಮತಿ ಪಡೆದುಕೊಳ್ಳುವುದು ಪದ್ದತಿ. ಆದರೆ ಒಂದೆರೆಡು ಸಾಲುಗಳನ್ನ ಬಳಸಿಕೊಂಡರೆ ಸಾಕು ಅದು ದೊಡ್ಡ ಅಪರಾಧ ಎನ್ನುವಂತೆ ನಡೆದುಕೊಳ್ಳುವುದು ಎಷ್ಟು ಸರಿ.

    ಕರಾಳ ರಾತ್ರಿಯಲ್ಲಿ ಒಂದಾದ ಜೆಕೆ, ವೈಷ್ಣವಿ, ಅನುಪಮ ಗೌಡ ಕರಾಳ ರಾತ್ರಿಯಲ್ಲಿ ಒಂದಾದ ಜೆಕೆ, ವೈಷ್ಣವಿ, ಅನುಪಮ ಗೌಡ

    ಈ ಮಾತನ್ನು ಕೆಲವು ವರ್ಷಗಳ ಹಿಂದೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಲಹರಿ ಆಡಿಯೋ ಕಂಪನಿ ವಿರುದ್ದವಾಗಿ ಹೇಳಿಕೆ ಕೊಟ್ಟಿದ್ದರು. ಕಿರಿಕ್ ಪಾರ್ಟಿ ಸಿನಿಮಾದಲ್ಲಿ 'ಶಾಂತಿ ಕ್ರಾಂತಿ' ಚಿತ್ರದ ಟ್ಯೂನ್ ಬಳಸಿಕೊಳ್ಳಲಾಗಿದೆ ಎಂದು ಲಹರಿ ವೇಲು ಕೋರ್ಟ್ ಮೆಟ್ಟಿಲು ಏರಿದ್ದರು. ಈಗ ಅದೇ ಸಾಲಿನಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಹಜ್ಜೆ ಹಾಕಿದ್ದಾರೆ.

    ದಯಾಳ್ ಹಾಗೂ ಲಹರಿ ಸಂಸ್ಥೆ ಮಧ್ಯೆ ವಿವಾದ ಶುರುವಾಗಿದೆ. ದಯಾಳ್ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ ಆ ಕರಾಳ ರಾತ್ರಿ ಸಿನಿಮಾ ವಿಚಾರವಾಗಿ ವಿವಾದ ಶುರುವಾಗಿದ್ದು ಈ ಬಗ್ಗೆ ದಯಾಳ್ ನ್ಯಾಯಕ್ಕಾಗಿ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.

    ಲಹರಿ ಸಂಸ್ಥೆ ವಿರುದ್ದ ದಯಾಳ್ ದೂರು

    'ಆ ಕರಾಳ ರಾತ್ರಿ' ಸಿನಿಮಾದಲ್ಲಿ ಮಂಕು ತಿಮ್ಮನ ಕಗ್ಗ ಹಾಡನ್ನು ಬಳಸಿಕೊಳ್ಳಲಾಗಿದೆ. ಮಂಕು ತಿಮ್ಮನ ಕಗ್ಗದ ಹಕ್ಕು ಸಂಪೂರ್ಣವಾಗಿ ಲಹರಿ ಸಂಸ್ಥೆಯದ್ದು ಸಿನಿಮಾಗೆ ಅನುಮತಿ ಇಲ್ಲದೆ ಬಳಸಿಕೊಂಡಿರುವುದು ತಪ್ಪು ಎಂದು ಲಹರಿ ಸಂಸ್ಥೆಯ ಆನಂದ್ ದೂರುತಿದ್ದಾರೆ. ಎಂದು ನಿರ್ದೇಶಕ ದಯಾಳ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

    ಸಿಡಿದೆದ್ದ ದಯಾಳ್ ಪದ್ಮನಾಬ್

    ಸಿಡಿದೆದ್ದ ದಯಾಳ್ ಪದ್ಮನಾಬ್

    ನಿರ್ದೇಶಕ ದಯಾಳ್ ಪದ್ಮನಾಬ್ ಅವರಿಗೆ ಲಹರಿ ಸಂಸ್ಥೆಯಿಂದ ಅನುಮತಿ ಇಲ್ಲದೆ ಹಾಡುಗಳನ್ನ ಬಳಸಿಕೊಂಡಿದ್ದೀರಾ ಎಂದು ಕರೆ ಬಂದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಹಕ್ಕು ನಿಮ್ಮ ಬಳಿ ಇರುವುದಕ್ಕೆ ಏನು ಸಾಕ್ಷಿ ಇದೆ ಎನ್ನುವುದನ್ನು ಕಳುಹಿಸಿಕೊಡಿ ಎಂದು ಕೇಳಿದ್ದಾರೆ. ನಂತರ ಲಹರಿ ಸಂಸ್ಥೆಯಿಂದ ಮಂಕು ತಮ್ಮನ ಕಗ್ಗ ಸಿಡಿ ಕವರ್ ಫೋಟೋವನ್ನು ಕಳುಹಿಸಿಕೊಟ್ಟಿದೆ.

    ದೂರು ನೀಡದ ದಯಾಳ್

    ದೂರು ನೀಡದ ದಯಾಳ್

    ಸದ್ಯ ಇದೇ ವಿಚಾರವಾಗಿ ನಿರ್ದೇಶಕ ದಯಾಳ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ನಮ್ಮ ಆಡಿಯೋ ಬಳಸಿದ್ದೀರಾ ಎಂದು ಸುಮ್ಮನೆ ಸಮಸ್ಯೆ ಮಾಡುತ್ತಿದ್ದಾರೆ. ದಯಮಾಡಿ ಈ ವಿಚಾರದ ಬಗ್ಗೆ ಗಮನ ಹರಿಸಿ ಎಂದಿದ್ದಾರೆ.

    ದಯಾಳ್ ಜೊತೆ ಕೈ ಜೋಡಿಸಿದ ರಕ್ಷಿತ್

    ದಯಾಳ್ ಜೊತೆ ಕೈ ಜೋಡಿಸಿದ ರಕ್ಷಿತ್

    ರಕ್ಷಿತ್ ಶೆಟ್ಟಿ ಎದುರಿಸಿದ ಪರಿಸ್ಥಿತಿಯನ್ನೇ ಇಂದು ನಿರ್ದೇಶಕ ದಯಾಳ್ ಅನುಭವಿಸುತ್ತಿದ್ದಾರೆ. ರಕ್ಷಿತ್ ಕೂಡ ದಯಾಳ್ ಮಾಡುತ್ತಿರುವ ಹೋರಾಟ ಸರಿಯಾಗಿದೆ ಎಂದಿದ್ದಾರೆ. ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ ಎನ್ನುವುದನ್ನು ತಿಳಿದ ತಕ್ಷಣ ಲಹರಿ ಸಂಸ್ಥೆಯಿಂದ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರಂತೆ. ಆದರೆ ದಯಾಳ್ ಪದ್ಮನಾಭನ್ ಈ ರೀತಿಯ ಸಮಸ್ಯೆ ಮತ್ತೆ ಯಾರಿಗೂ ಆಗಬಾರದು ಎನ್ನುವ ನಿಟ್ಟಿನಲ್ಲಿ ಲಹರಿ ಸಂಸ್ಥೆ ಕ್ಷಮಾಪಣ ಪತ್ರ ಬರೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಕರಾಳ ರಾತ್ರಿಯಲ್ಲಿ ಒಂದಾದ ಜೆಕೆ, ವೈಷ್ಣವಿ, ಅನುಪಮ ಗೌಡಕರಾಳ ರಾತ್ರಿಯಲ್ಲಿ ಒಂದಾದ ಜೆಕೆ, ವೈಷ್ಣವಿ, ಅನುಪಮ ಗೌಡ

    English summary
    Kannada director Dayal Padmanabhan filed a complaint against Lahari audio company at Film Chamber of Commerce. The Lahari audio company has accused Dayal of using song lines without permission.
    Saturday, June 23, 2018, 11:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X