ದರ್ಶನ್ ಫ್ಯಾನ್ಸ್ Vs ಅಪ್ಪು ಫ್ಯಾನ್ಸ್; 'ಕದನ ವಿರಾಮ' ಘೋಷಣೆ!

ನಟ ದರ್ಶನ್ ನೀಡಿದ ಅದೊಂದು ಹೇಳಿಕೆ ಕಳೆದೆರಡು ದಿನಗಳಿಂದ ಭಾರೀ ರಾದ್ಧಾಂತವನ್ನೇ ಸೃಷ್ಟಿಸಿದೆ. ಪುನೀತ್ ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್‌ ನಡುವೆ ಗಲಾಟೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೀತಾನೆ ಇದೆ.

Recommended Video

Darshan Phone Call Audio Viral | Filmibeat Kannada

ತಮ್ಮ ನೆಚ್ಚಿನ ನಟನ ಪರ ವಹಿಸಿಕೊಂಡು ಮಾತನಾಡುವ ಭರದಲ್ಲಿ ದರ್ಶನ್ ಫ್ಯಾನ್ಸ್ ಪೇಜ್‌ನಲ್ಲಿ ಮಾಡಿದ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರಲ್ಲಿದ್ದ ಸಾಲುಗಳು ಅಪ್ಪು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಆ ಪೋಸ್ಟ್‌ಗೆ ಅದೇ ಪೇಜ್‌ನಲ್ಲಿ ಕ್ಷಮೆ ಕೇಳಲಾಗಿದೆ. ಇದು ಒಂದು ಮಟ್ಟಿಗೆ ಅಪ್ಪು ಫ್ಯಾನ್ಸ್‌ಗೆ ಸಮಾಧಾನ ತಂದಿರೋದು ಸುಳ್ಳಲ್ಲ.

ಅಪ್ಪು ಕುರಿತು ದರ್ಶನ್ ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಅಪ್ಪು ಫ್ಯಾನ್ಸ್ ಒತ್ತಾಯಿಸುತ್ತಲೇ ಇದ್ದಾರೆ. 'ಕ್ರಾಂತಿ' ಸಿನಿಮಾ ಬಹಿಷ್ಕರಿಸೋದಾಗಿಯೂ ಎಚ್ಚರಿಕೆ ನೀಡುತ್ತಿದ್ದಾರೆ. ನಮ್ಮ ಬಾಸ್‌ಗೆ ದೊಡ್ಮನೆ ಮೇಲೆ ಅಪ್ಪು ಸರ್ ಮೇಲೆ ಗೌರವ ಇದೆ. ಅವರು ತಪ್ಪಾಗಿ ಏನು ಮಾತನಾಡಿಲ್ಲ. ಅವರು ಕ್ಷಮೆ ಕೇಳುವ ಅವಶ್ಯಕತೆ ಕೂಡ ಇಲ್ಲ ಎಂದು ದರ್ಶನ್ ಫ್ಯಾನ್ಸ್ ವಾದಿಸುತ್ತಿದ್ದಾರೆ. ಕೆಲವರು ಬೀದಿಗಿಳಿದು ವಿಡಿಯೋ ಮಾಡಿ ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ರೆ, ಅದಕ್ಕೆ ದರ್ಶನ್ ಫ್ಯಾನ್ಸ್ ಕೂಡ ತಿರುಗೇಟು ಕೊಡುತ್ತಾ ಬರ್ತಿದ್ದಾರೆ.

ಅಪ್ಪು ಫ್ಯಾನ್ಸ್‌ನ ಕೆರಳಿಸಿದ್ದ ಪೋಸ್ಟ್!

ಅಪ್ಪು ಫ್ಯಾನ್ಸ್‌ನ ಕೆರಳಿಸಿದ್ದ ಪೋಸ್ಟ್!

ಒಂದ್ಕಡೆ ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದ್ದರೆ ಅತ್ತ ಫೇಸ್‌ಬುಕ್ ಪೇಜ್‌ವೊಂದರಲ್ಲಿ ಪೋಸ್ಟ್‌ ಭಾರೀ ವೈರಲ್ ಆಗಿತ್ತು. 'ಡಿ ಬಾಸ್ ಸೋಲ್ಜರ್ಸ್‌' ಹೆಸರಿನ ಆ ಪೇಜ್‌ ಅಪ್ಪು ಬಗ್ಗೆ ಪೋಸ್ಟ್ ಹಾಕಿತ್ತು. ಇದು ಅಪ್ಪು ಫ್ಯಾನ್ಸ್‌ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಕಷ್ಟು ಜನ ಪೇಜ್ ವಿರುದ್ಧ ರಿಪೋರ್ಟ್‌ ಕೂಡ ಮಾಡಿದ್ದರು.

ಕ್ಷಮೆ ಕೇಳಿ ಹೊಸ ಪೋಸ್ಟ್

ಕ್ಷಮೆ ಕೇಳಿ ಹೊಸ ಪೋಸ್ಟ್

ಸದ್ಯ ಅದೇ ಪೇಜ್‌ನಲ್ಲಿ ಕ್ಷಮೆ ಕೋರಿ ಹೊಸ ಪೋಸ್ಟ್ ಹಾಕಿದ್ದಾರೆ. "ಮೊನ್ನೆ ನಾವು ಹಾಕಿದ್ದ ಪೋಸ್ಟ್‌ನಿಂದ ಅಪ್ಪು ಸರ್ ಹಾಗೂ ಡಿ ಬಾಸ್ ಅವರಿಗೆ ಅವಮಾನ ಆಗಿದೆ. ಆದ್ದರಿಂದ ನಾವು ಅಪ್ಪು ಅವರಿಗೂ ಹಾಗೂ ಡಿ ಬಾಸ್ ಅವರಿಗೂ, ಹಾಗೂ ಕರ್ನಾಟಕ ಜನತೆಗೆ ಕ್ಷಮೆ ಯಾಚಿಸುತ್ತಿದ್ದೇವೆ. ಇನ್ನು ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಜವಾಬ್ದಾರಿಯಿಂದ ಇರುತ್ತೇವೆ" ಎಂದು ಪೋಸ್ಟ್ ಮಾಡಿದ್ದಾರೆ. ಈ ಬೆಳವಣಿಗೆ ಅಪ್ಪು ಫ್ಯಾನ್ಸ್‌ಗೆ ಕೊಂಚ ಸಮಾಧಾನ ತಂದಿದೆ.

ಇದು ದರ್ಶನ್ ಫ್ಯಾನ್ಸ್ ಪೇಜ್‌ ಅಲ್ವಾ?

ಇದು ದರ್ಶನ್ ಫ್ಯಾನ್ಸ್ ಪೇಜ್‌ ಅಲ್ವಾ?

ನಟ ದರ್ಶನ್ ಅಪ್ಪಟ ಅಭಿಮಾನಿಗಳ ಪ್ರಕಾರ 'ಡಿ ಬಾಸ್ ಸೋಲ್ಜರ್ಸ್‌' ಅಫೀಷಿಯಲ್ ದರ್ಶನ್ ಫ್ಯಾನ್ಸ್ ಪೇಜ್ ಅಲ್ಲ. ಯಾರೋ ಟ್ರೋಲರ್‌ಗಳು ಈ ರೀತಿ ದರ್ಶನ್‌ ಫೋಟೊ ಹಾಕಿಕೊಂಡು ಫ್ಯಾನ್ಸ್ ತರ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರಂತೆ. ಹಾಗಾಗಿ ಆ ಪೇಜ್‌ಗೂ ನಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ.

ದರ್ಶನ್‌ ವಿರುದ್ಧ ಮಸಲತ್ತು?

ದರ್ಶನ್‌ ವಿರುದ್ಧ ಮಸಲತ್ತು?

ದರ್ಶನ್‌ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೀತಿದೆ. ಪುನೀತ್ ಫ್ಯಾನ್ಸ್‌ನ ಕೆಲವು ಕಿಡಿಗೇಡಿಗಳು ಬೇಕು ಅಂತಲೇ ಎತ್ತಿಕಟ್ಟುತ್ತಿದ್ದಾರೆ. ದರ್ಶನ್ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಅನ್ನುವ ವಾದವೂ ಇದೆ. ನಟ ವಿನೋದ್ ಪ್ರಭಾಕರ್ ಕೂಡ ಮಾತನಾಡಿ ದರ್ಶನ್‌ ಅವರಿಗೆ ಅಪ್ಪು ಸರ್ ಮೇಲೆ ಅಪಾರ ಗೌರವ ಇದೆ. ಅವರ ಹೇಳಿಕೆಯನ್ನು ಬೇರೆ ರೀತಿ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.

More from Filmibeat

English summary
Dboss Soldiers Page Apologizes To Puneeth Fans Over Recent Post. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X