ಚಿತ್ರರಂಗ ಸತ್ತು ಹೋಯ್ತು ಅಂತಾರೆ, ಅವರ ಹಬ್ಬದಲ್ಲಿ ಭಾಗಿಯಾಗೋಕೆ ಆಗಲ್ವಾ ? ಡಿಕೆಶಿ ಧಗಧಗ..!

ಭಾರತದಲ್ಲಿ ಎರಡು ರೀತಿಯ ವ್ಯವಸ್ಥೆಗಳಿವೆ. ವ್ಯವಸ್ಥೆಯನ್ನು ರನ್ ಮಾಡುವ ವ್ಯವಸ್ಥೆ ಒಂದಾದರೆ ವ್ಯವಸ್ಥೆಯಲ್ಲಿ ಬದುಕುವ ವ್ಯವಸ್ಥೆ ಇನ್ನೊಂದು. ವ್ಯವಸ್ಥೆಯಲ್ಲಿ ಬದುಕಿದರೆ ಯಾವುದು ಸಮಸ್ಯೆಯಾಗಲ್ಲ.

ಆದರೆ ಅದೇ ವ್ಯವಸ್ಥೆ ವಿರುದ್ದ ಹೋದರೆ ಅಥವಾ ಆ ವ್ಯವಸ್ಥೆಯ ಆತ್ಮಾಭಿಮಾನಕ್ಕೆ ಧಕ್ಕೆಯಾದರೆ ವ್ಯವಸ್ಥೆ ಕೆರಳುತ್ತೆ. ಬದುಕು ಅಸ್ತವಸ್ತ್ಯ ಮಾಡುವ ಬೆದರಿಕೆಯನ್ನೂ ಆ ಆ ವ್ಯವಸ್ಥೆ ಹಾಕುತ್ತೆ. ಇದಕ್ಕೆ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ನಿನ್ನೆ ಕನ್ನಡ ಚಿತ್ರರಂಗದ ತಾರೆಯರಿಗೆ ಹಾಕಿದ ಬೆದರಿಕೆ ಸದ್ಯದ ಉದಾಹರಣೆ.

DCM DK Shiva Kumar stands by his comments on Kannada cinema questions stars loyalty to the state

ಹೌದು ಎಲ್ಲಿರಿಗೆ ಗೊತ್ತಿರುವಂತೆ ನಿನ್ನೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಮೇಲೆ ಕೆಂಡ ಕಾರಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಬಂದು ನಟ್ಟು ಬೋಲ್ಟು ಎಂದೆಲ್ಲ ಮಾತನಾಡಿದ್ದಾರೆ. ಸಹಜವಾಗಿ ಡಿಸಿಎಂ ಅವರ ಈ ಹೇಳಿಕೆ ಕನ್ನಡ ಚಿತ್ರರಂಗದ ಅನೇಕ ತಾರೆಯರನ್ನು ಕೆರಳಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ನವರಸನಾಯಕ ಜಗ್ಗೇಶ್ ಸೇರಿ ಅನೇಕರು ಉತ್ತರ ನೀಡಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಡಿಕೆಶಿ ಅವರಿಗೆ ಪರೋಕ್ಷವಾಗಿ ತಿರುಗೇಟನ್ನು ನೀಡುತ್ತಿದ್ದಾರೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ಉಡುಪಿಯಲ್ಲಿ ನಿಮ್ಮ ಹೇಳಿಕೆಯಿಂದ ಚಿತ್ರರಂಗದ ಅನೇಕರು ನೊಂದು-ಬೆಂದು-ಕೋಪ ಮಾಡಿಕೊಂಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಧಗಧಗಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿನಿಮಾದವರು ಏನು ಬೇಕಾದರೂ ಮಾತನಾಡಲಿ ಆದರೆ ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳಿದ್ದೇನೆ ಎಂದಿದ್ದಾರೆ. ನಿನ್ನೆ ನಡೆದ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮ ನನ್ನದಾ ಎಂದು ಪ್ರಶ್ನೆ ಮಾಡಿರುವ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅವರದ್ದೇ ಬೆಂಬಲ ಇಲ್ಲ ಅಂದರೆ ಈ ಚಿತ್ರೋತ್ಸವವನ್ನು ಸರ್ಕಾರ ಯಾರಿಗೆ ಮಾಡುತ್ತಿದೆ ಎಂದಿದ್ದಾರೆ. ಯಾರಿಗಾಗಿ ಈ ಚಿತ್ರೋತ್ಸವವನ್ನು ಮಾಡಬೇಕು ಎಂದು ಕೇಳಿದ್ದಾರೆ.

ಅಶೋಕ್ ಏನಾದರೂ ಮಾತನಾಡಿಕೊಳ್ಳಲಿ ಫಿಲ್ಮ್‌ನವರು ಏನಾದರೂ ಮಾತನಾಡಿಕೊಳ್ಳಲಿ ಎಂದಿರುವ ಡಿಕೆಶಿ ಅವರು ಪ್ರತಿಭಟನೆಯಾದರೂ ಮಾಡಲಿ ಹೋರಾಟವಾದರೂ ಮಾಡಲಿ, ನಮ್ಮ ನೀರು, ನಮ್ಮ ಹಕ್ಕು, ನಮ್ಮ ನೆಲದ ವಿಚಾರಕ್ಕೆ ಬಂದಾಗ ಮೊದಲೆಲ್ಲ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಎಂದು ಹೇಳುತ್ತಿದ್ದವರು ಆ ನಂತರ ಯಾರು ಬರಲಿಲ್ಲ ಎಂದು ಗುಡುಗಿದ್ದಾರೆ.

ಮುಂದುವರೆದು ಪಾಪಾ ಪ್ರೇಮು ಬಂದು ಕೇಸ್ ಹಾಕಿಸಿಕೊಂಡ, ಇದೇ ಬಿಜೆಪಿಯವರು ಅವನ ಮೇಲೆ ಕೇಸ್ ಹಾಕಿದರು, ದುನಿಯಾ ವಿಜಯ್ ಮೇಲೆ ಕೇಸ್ ಹಾಕಿದರು, ನಮ್ಮ ಮೇಲೆ ಕೇಸ್ ಹಾಕಿಕೊಳ್ಳಲಿ ಸಾಧುಕೋಕಿಲಾ ಮೇಲೆ ಕೂಡ ಕೇಸ್ ಹಾಕಿದರು ಅರ್ಥ ಆಯ್ತಾ ಎಂದು ಹೇಳಿದ್ದಾರೆ. ಫಿಲ್ಮ್ ಇಂಡಸ್ಟ್ರೀ ಎಲ್ಲಾ ಸತ್ತೋಯ್ತು, ಥಿಯೇಟರ್‌ಗಳು ಮುಚ್ಚೋದ್ವು ಅಂತೆಲ್ಲ ಮಾತನಾಡ್ತಾರೆ, ನಮಗೆ ಊಟ ಇಲ್ಲ ಅಂತಾರೆ ಆದರೆ ಅವರ ಹಬ್ಬದಲ್ಲಿ ಅವರೇ ಭಾಗಿಯಾಗಲ್ಲ ಅಂತಾರೆ ಎಂದು ಕೆಂಡ ಕಾರಿದ್ದಾರೆ.

ಅಂದ್ಹಾಗೇ ನಿನ್ನೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕನ್ನಡ ಚಿತ್ರರಂಗದ ಹಲವರು ಹಾಜರಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಯಾರಿಗೆ ಹೇಗೆ ನಟ್ಟು ಬೋಲ್ಟ್‌ ಟೈಟ್‌ ಮಾಡಬೇಕು ಎನ್ನುವುದು ಗೊತ್ತಿದೆ ಎಂದು ಖಾರವಾಗಿ ಹೇಳಿದ್ದರು. ಡಿಕೆಶಿ ಅವರು ನೀಡಿದ ಈ ಹೇಳಿಕೆಗೆ ನವರಸನಾಯಕ ಜಗ್ಗೇಶ್ ಟ್ವಿಟ್ ಮಾಡುವ ಮೂಲಕ ಇಂದು ಉತ್ತರವನ್ನು ಕೂಡ ನೀಡಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X