ಕೋಮಲ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಯಾರು: ಪೊಲೀಸರು ಹೇಳಿದ್ದೇನು?

Recommended Video

ಕೋಮಲ್ ಮೇಲೆ ಹಲ್ಲೆ..! ರಸ್ತೆಯಲ್ಲಿ ಎಳೆದಾಡಿ ಹೊಡೆದ ದುಷ್ಕರ್ಮಿ..?

ಚಿತ್ರ ನಟ ಕೋಮಲ್ ಮೇಲೆ ನಿನ್ನೆ (ಮಂಗಳವಾರ) ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಮಂತ್ರಿ ಮಾಲ್ ಬಳಿ ವ್ಯಕ್ತಿಯೊಬ್ಬ ಕೋಮಲ್ ಮೇಲೆ ಹಲ್ಲೆ ಮಾಡಿದ್ದು, ಈ ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಈ ಘಟನೆಯ ಬಗ್ಗೆ ಮಾತನಾಡಿರುವ ಡಿಸಿಪಿ ಶಶಿಕುಮಾರ್ ಹಲ್ಲೆ ಮಾಡಿರುವ ವ್ಯಕ್ತಿ ವಿಜಿ ಎಂದು ತಿಳಿಸಿದ್ದಾರೆ. ''ಈತ ಶ್ರೀರಾಮ್ ಪುರದ ನಿವಾಸಿಯಾಗಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತನ ಮೇಲೆ ಸದ್ಯ 307 ಕೇಸ್ ಅನ್ನು ದಾಖಲು ಮಾಡಲಾಗಿದೆ.'' ಎಂದು ಹೇಳಿದ್ದಾರೆ.

ಕುಡಿದ ಮತ್ತಿನಲ್ಲಿ ಇದ್ದ ವಿಜಿ ಉದ್ದೇಶಪೂರ್ವಕವಾಗಿಯೇ ಈ ಹಲ್ಲೆ ಮಾಡಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ತೋರುತ್ತಿದ್ದು, ತನಿಖೆಯ ಬಳಿಕ ಪೂರ್ಣ ಸತ್ಯ ಬಹಿರಂಗ ಆಗಲಿದೆ. ಟ್ರಾಫಿಕ್ಸ್ ನಲ್ಲಿ ಕಾರಿನಿಂದ ಪ್ರಚೋದನೆ ಮಾಡಿ, ಹಲ್ಲೆ ಮಾಡಲು ಮುಂದಾಗಿದ್ದು, ಬೇಕು ಅಂತಲೇ ಈ ರೀತಿ ಮಾಡಿದ್ದಾನೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.

DCP Shashikumar React About Komal Kumar Incident

ಈ ಘಟನೆಯ ಬಗ್ಗೆ ಸ್ವಷ್ಟನೆ ನೀಡಿರುವ ಕೋಮಲ್ "ಕಾರಿನಲ್ಲಿ ಮಗಳನ್ನು ಟ್ಯೂಷನ್ ಗೆ ಬಿಡಲು ಬಂದಿದ್ದೆ. ಕಾರಿನಲ್ಲಿ ಹೋಗುತ್ತಿರುವಾಗ ಹಿಂದೆಯಿಂದ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಾರು ಟಚ್ ಮಾಡುತ್ತಲೆ, ಕೆಟ್ಟ ಪದಗಳಿಂದ ಬೈಯುತ್ತ ಬಂದ. ನಂತರ ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಹಲ್ಲೆ ಮಾಡಿದ. ಬೇರೆ ಯಾರ ಮೇಲೂ ಅನುಮಾನ ಇಲ್ಲ.'' ಎಂದು ಕೋಮಲ್ ಹೇಳಿದ್ದಾರೆ.

ನಟ ಜಗ್ಗೇಶ್ ಕೂಡ ಈ ಬಗ್ಗೆ ಮಾತನಾಡಿದ್ದು, ಆ ವ್ಯಕ್ತಿ ಗಾಂಜಾ ಸೇವಿಸಿದ್ದ, ಜೊತೆಯಲ್ಲಿ ಹುಡುಗಿ ಇದ್ದಳು, ಮದ್ಯಪಾನ ಕೂಡ ಮಾಡಿದ್ದ'' ಎಂದು ಆರೋಪ ಮಾಡಿದ್ದಾರೆ.

More from Filmibeat

English summary
DCP Shashikumar react about Komal Kumar incident. Komal has attacked by unknown person at mantri square circle Yesterday (August 14th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X