For Quick Alerts
  ALLOW NOTIFICATIONS  
  For Daily Alerts

  ಆಸ್ಟ್ರೇಲಿಯಾದ ಕಿರುಚಿತ್ರ ಸ್ಪರ್ಧೆಯ ಟಾಪ್ 20ಯಲ್ಲಿ ಕನ್ನಡಿಗನ ಚಿತ್ರ

  By Mahesh
  |

  ಒತ್ತಡ ಮತ್ತು ಅದರಿಂದ ಬರುವ ತೀವ್ರ ತಲೆನೋವಿಗೆ ಒಳಗಾಗಿ ತಮ್ಮನ್ನೆ ತಾವು ಕಳೆದುಕೊಂಡವರು ಹಲವಾರು ಜನ. ಈ ಒತ್ತಡದಿಂದ ಬರುವ ತಲೆನೋವು ತುಂಬಾ ಅಸಹನೀಯ, ಹೊರಬರಬೇಕೆಂಬ ಅಭಿಲಾಷೆ ಎಷ್ಟೇ ಇದ್ದರೂ, ಅಭಿಲಾಷೆ ಇದ್ದ ಮಾತ್ರಕ್ಕೆ ಹೊರಬರಲು ಆಗುವುದಿಲ್ಲ. ಇಂಥ ಸನ್ನಿವೇಶದಲ್ಲಿ ನಮ್ಮ ಸಹಾಯಕ್ಕೆ ಬರುವುದು ಧ್ಯಾನ.

  ಧ್ಯಾನದಿಂದ ಒತ್ತಡ ಮತ್ತದರ ತೀವ್ರ ತಲೆನೋವಿನಿಂದ ಮುಕ್ತಿ ಪಡೆಯ ಬಹುದು ಎಂದು ಒಂದು ಕಿರುಚಿತ್ರ "ಡಿ-ಸ್ಟ್ರೆಸ್ಸ್" ನ ಮೂಲಕ ಬೈಟೂ ಕಾಫಿ ಫಿಲ್ಮ್ಸ್ -ನ ಭರತ್ ಬಾಳೆ ಮನೆ ತೋರಿಸಿದ್ದಾರೆ.

  ಅವರಿಗೆ ಸಾಥ್ ಕೊಟ್ಟಿದ್ದು ಮನ್ಮೌಜಿ ಫಿಲ್ಮ್ಸ್ , ಮುಖ್ಯ ಭೂಮಿಕೆಯಲ್ಲಿರುವುದು ಅಮೇರಿಕಾದ ಆಂಡ್ರ್ಯೂ ಕಾರ್ಟರ್ ಮತ್ತು ತಂತ್ರಜ್ಞರು ಅನಿವಾಸಿ ಭಾರತೀಯರು.

  ಈ ಕಿರುಚಿತ್ರವನ್ನು American Migraine Foundation and American Headache Society ಯ ಒಂದು ಸ್ಫರ್ಧೆಗೆ ಮಾಡಲಾಗಿತ್ತು. ಕೇವಲ ನಾಲ್ಕು ಘಂಟೆಗಳ ಚಿತ್ರೀಕರಣ ಮತ್ತು ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ತಯಾರಾದ ಕಿರುಚಿತ್ರ. ಅಮೇರಿಕಾದ ಇಂಡಿಯಾನಾದ ಕೋಲಂಬಸ್-ನಲ್ಲಿ ಚಿತ್ರೀಕರಿಸಿಲಾಗಿದೆ.

  ಈಗ ಇದೇ ಕಿರುಚಿತ್ರ ವಿಶ್ವದ ಅತಿದೊಡ್ಡ ಕಿರುಚಿತ್ರ ಸ್ಫರ್ಧೆ My Rode Reel - 2018 (Australia) ದಲ್ಲಿ ಸ್ಫರ್ಧಿಸುತ್ತಿದೆ. ಒಂದು ಸಾವಿರದ ಐನೂರಕ್ಕೂ ಹೆಚ್ಚು ಕಿರುಚಿತ್ರಗಳ ಪೈಪೋಟಿ ನಡುವೆ ಟಾಪ್ 20ರೊಳಗೆ ಭರತ್ ನಿರ್ದೇಶನದ ಚಿತ್ರ ಆಯ್ಕೆಯಾಗಿದೆ.

  ಕನ್ನಡಿಗ ಭರತ್ ಬಾಳೆಮನೆ ಅವರ ನಿರ್ದೇಶನದ ಕಿರುಚಿತ್ರ ಇಷ್ಟವಾದರೆ, ದಯವಿಟ್ಟು rode ಡಾಟ್ ಕಾಮ್ ವೆಬ್ ತಾಣಾಕ್ಕೆ ಹೋಗಿ myrodereel ಅಡಿಯಲ್ಲಿ 5239 ಸಂಖ್ಯೆಯ De-stress ಕಿರುಚಿತ್ರ ನೋಡಿ ಮತ ಹಾಕಿ, ಬೆಂಬಲಿಸಿ

  English summary
  De-Stress Short Film by Bharat Balemane has made entry in to top -20in in "Rode Reel" international short film festival.This is among 1500+ short films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X