ಯುವ 'ಎಕ್ಕ' ಅಖಾಡಕ್ಕೆ ಡೆಡ್ಲಿ ಹೀರೊ ಎಂಟ್ರಿ; ರೋಹಿತ್ ಪದಕಿ ಮಾಸ್ಟರ್ ಪ್ಲ್ಯಾನ್

ಟೈಟಲ್‌ನಿಂದಲೇ 'ಎಕ್ಕ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಚಿತ್ರ ನಿರ್ಮಾಣ ಮಾಡುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಯುವರಾಜ್‌ಕುಮಾರ್ ಮತ್ತೊಮ್ಮೆ ಆಕ್ಷನ್ ಹೀರೊ ಆಗಿ ಅಬ್ಬರಿಸಲು ಬರ್ತಿದ್ದಾರೆ.

ಕಳೆದ ವರ್ಷ ರಾಜ್ಯೋತ್ಸವ ಸಂಭ್ರಮದಲ್ಲಿ 'ಎಕ್ಕ' ಸಿನಿಮಾ ಘೋಷಣೆ ಆಗಿತ್ತು. ನವೆಂಬರ್ ಕೊನೆಗೆ ಚಿತ್ರ ಸೆಟ್ಟೇರಿತ್ತು. ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ನಟಿಸುತ್ತಿದ್ದಾರೆ. 'ರತ್ನನ್ ಪ್ರಪಂಚ' ಬಳಿಕ 'ಉತ್ತರಕಾಂಡ' ಸಿನಿಮಾ ಆರಂಭಿಸಿದ್ದ ರೋಹಿತ್ ಪದಕಿ ಅದನ್ನು ಪಕ್ಕಕ್ಕಿಟ್ಟು 'ಎಕ್ಕ' ಚಿತ್ರ ಕೈಗೆತ್ತಿಕೊಂಡಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ.

Deadly Aditya on board Yuva Rajkumar-starrer Ekka

ಜೂನ್ 6ರಂದು 'ಎಕ್ಕ' ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಲಾಗಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್ ಪ್ಲ್ಯಾನ್ ಮಾಡಲಾಗ್ತುದೆ. ಅತುಲ್ ಕುಲಕರ್ಣಿ, ರಾಹುಲ್ ದೇವ್ ಶೆಟ್ಟಿ, ಶೃತಿ ಕೃಷ್ಣ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಡೆಡ್ಲಿ ಆದಿತ್ಯ ತಂಡವನ್ನು ಸೇರಿಕೊಂಡಿದ್ದಾರೆ.

ಹೌದು ನಟ ಡೆಡ್ಲಿ ಆದಿತ್ಯಾ ಕೂಡ 'ಎಕ್ಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಪದಕಿ ತಮ್ಮ ಸಿನಿಮಾಗಳಲ್ಲಿ ಪ್ರತಿ ಪಾತ್ರವನ್ನು ಚೆನ್ನಾಗಿ ಡಿಸೈನ್ ಮಾಡುತ್ತಾರೆ. ಇದೀಗ ಆದಿತ್ಯ ಅವರಿಗೂ ಒಂದೊಳ್ಳೆ ಪಾತ್ರ ಸಿದ್ಧವಾಗಿದ್ದು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಕಳೆದ ವರ್ಷ '5D' ಹಾಗೂ 'ಕಾಂಗರೂ' ಎಂಬ ಚಿತ್ರಗಳಲ್ಲಿ ಅವರು ನಟಿಸಿದ್ದರು. ಆದರೆ ದೊಡ್ಡ ಸಕ್ಸಸ್ ಸಿಕ್ಕಿರಲಿಲ್ಲ.

Deadly Aditya on board Yuva Rajkumar-starrer Ekka

20 ವರ್ಷಗಳ ಹಿಂದೆ ಆದಿತ್ಯ ಚಿತ್ರರಂಗ ಪ್ರವೇಶಿಸಿದರು. 'ಡೆಡ್ಲಿ ಸೋಮ' ಬಿಟ್ಟರೆ ಅವರ ಕರಿಯರ್‌ನಲ್ಲಿ ಯಾವುದೇ ಸಿನಿಮಾ ದೊಡ್ಡದಾಗಿ ಸಕ್ಸಸ್ ಆಗಲಿಲ್ಲ. ಇವತ್ತಿಗೂ ಡೆಡ್ಲಿ ಆದಿತ್ಯ ಅಂತ್ಲೇ ಜನ ಗುರ್ತಿಸುತ್ತಿದ್ದಾರೆ. ಈ ಬಾರಿ ಯುವ ರಾಜ್‌ಕುಮಾರ್ ಚಿತ್ರದಲ್ಲಿ ಯಾವ ರೀತಿಯ ಪಾತ್ರ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅವರು ಚಿತ್ರತಂಡ ಸೇರಿಕೊಂಡಿರುವ 'ಎಕ್ಕ' ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಭರ್ಜರಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಇತ್ತೀಚೆಗೆ ನಡೆದಿದೆ. ಇನ್ನು 'ಎಕ್ಕ' ತಂಡ ಬಿಡುವಿನ ವೇಳೆ ಕ್ರಿಕೆಟ್ ಆಡಿ ಸಂಭ್ರಮಿಸಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಸ್ವತಃ ಯುವ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ 'ಎಕ್ಕ ಮಾರ್ ಮಾರ್' ಸಾಂಗ್ ರಿಲೀಸ್ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಯುವರಾಜ್‌ಕುಮಾರ್, ನಿರ್ದೇಶಕ ರೋಹಿತ್ ಪದಕಿ, ನಿರ್ಮಾಪಕ ಕಾರ್ತಿಕ್ ಗೌಡ ಕ್ರಿಕೆಟ್ ಆಡಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಆನಂದ್ ಆಡಿಯೋ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.

ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಚಿತ್ರದ ಮೂಲಕ ಅಣ್ಣಾವ್ರ ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲ ಪ್ರಯತ್ನದಲ್ಲೇ ಡ್ಯಾನ್ಸ್, ಸ್ಟಂಟ್ಸ್ ಮೂಲಕ ಮೋಡಿ ಮಾಡಿದ್ದರು. ಹಾಗಾಗಿ ಎರಡನೇ ಚಿತ್ರದಲ್ಲಿ ಕೂಡ ಮಾಸ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ. ಶಿವಾಜಿನಗರದಲ್ಲಿ ಫೋಟೊಶೂಟ್ ನಡೆಸಿ ಸಿನಿಮಾ ಘೋಷಣೆ ಮಾಡಲಾಗಿತ್ತು. ಇದೀಗ ಸಿನಿಮಾ ಚಿತ್ರೀಕರಣ ಅರ್ಧ ಮುಗಿದಿದೆ.

'ಎಕ್ಕ' ಬಳಿಕ ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಯುವರಾಜ್‌ಕುಮಾರ್ ನಟಿಸಲಿದ್ದಾರೆ. ಚಿತ್ರಕ್ಕೆ 'ಕಾಗೆ ಬಂಗಾರ' ಭಾಗ- 3 ಎಂಬ ಟೈಟಲ್ ಫಿಕ್ಸ್ ಆಗಿದೆ. ಆ ಚಿತ್ರವನ್ನು ಪಿಆರ್‌ಕೆ ಜೊತೆ ಸೇರಿ ಜಯಣ್ಣ ನಿರ್ಮಾಣ ಮಾಡಲಿದ್ದಾರೆ. ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ನಟಿಸಲಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ವಿರಾಟ್ ಆ ಚಿತ್ರಕ್ಕೆ ನಾಯಕಿ ಆಗ್ತಾರೆ ಎನ್ನಲಾಗಿತ್ತು. ಆದರೆ ಈಗ ಯುವ ಹೆಸರು ಕೇಳಿಬರ್ತಿದೆ.

More from Filmibeat

English summary
Star Kannada Actor is playing crucial role in Yuvarajkumar starrer Ekka
Read more about: ekka aditya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X