For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಬೆಂಬಲಕ್ಕೆ ನಿಂತ ಸ್ನೇಹಿತ: 'ಡೆಡ್ಲಿ' ಆದಿತ್ಯ ಹೇಳಿದ್ದೇನು?

  |

  ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ವಿವಾದಕ್ಕೆ ಸಂಬಂಧಿಸಿದಂತೆ ನಟ 'ಡೆಡ್ಲಿ' ಆದಿತ್ಯ ಪ್ರತಿಕ್ರಿಯಿಸಿದ್ದಾರೆ. ದಾಸನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಆದಿತ್ಯ, 'ದರ್ಶನ್ ಪರ ನಾನು ಇದ್ದೇನೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ''ಇಂತಹ ಕಠಿಣ ಸಮಯದಲ್ಲಿ ನಿಮ್ಮೊಂದಿಗೆ ಯಾರು ನಿಲ್ಲುತ್ತಾರೋ ಅಥವಾ ನಿಲ್ಲುವುದಿಲ್ಲವೋ ನನಗೆ ಅದು ಬೇಕಾಗಿಲ್ಲ. ನಾನು ಎಂದಿಗೂ ನಿನ್ನ ಪರವಾಗಿ ಇರುತ್ತೇನೆ. ನಿಮ್ಮ ಸೆಲೆಬ್ರಿಟಿಗಳ ಬೆಂಬಲ ನಿಮಗಿದೆ ಎನ್ನುವುದು ನೆನಪಿಡಿ. ಲವ್ ಯೂ ದರ್ಶನ್ ತೂಗುದೀಪ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಸದಾ ನಿಮ್ಮ ಜೊತೆ ಇರ್ತೇವೆ'' ಎಂದು ಆದಿತ್ಯ ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವು ಕಲಾವಿದರು ನಟ ದರ್ಶನ್ ಪರವಾಗಿ ಬೆಂಬಲ ನೀಡಿದ್ದಾರೆ. ಯಾರೆಲ್ಲಾ? ಮುಂದೆ ಓದಿ...

  ಶಿವರಾಜ್ ಕೆ ಆರ್ ಪೇಟೆ ಬೆಂಬಲ

  ಶಿವರಾಜ್ ಕೆ ಆರ್ ಪೇಟೆ ಬೆಂಬಲ

  ''ನೇರ ನುಡಿ, ನೇರ ನಡೆ ರೂಢಿಸಿಕೊಂಡ ವ್ಯಕ್ತಿಯೊಬ್ಬರು ಈ ನಾಟಕೀಯ ಜಗತ್ತಿನಲ್ಲಿ, ತನ್ನ ರೀತಿಯಲ್ಲಿಯೇ ಬದುಕಬೇಕು ಎಂದು ಹೊರಟಾಗ ವಿವಾದಗಳು ಸುತ್ತಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೂ ಇಂತಹವುಗಳನ್ನೆಲ್ಲಾ ಎದುರಿಸಿ ನಿಲ್ಲೋ ಶಕ್ತಿ ದರ್ಶನ್ ಸರ್ ಗಿದೆ. ಅವರ ಅಸಂಖ್ಯಾ ಅಭಿಮಾನಿಗಳ ಹಾರೈಕೆಯು ಅವರೊಂದಿಗಿದೆ'' ಎಂದು ಹಾಸ್ಯಕಲಾವಿದ ಶಿವರಾಜ್ ಕೆಆರ್ ಪೇಟೆ ಬೆಂಬಲ ಸೂಚಿಸಿದ್ದರು.

  ಧನ್ವಿರ್ ಬಳಿಕ ದರ್ಶನ್ ಬೆಂಬಲಕ್ಕೆ ನಿಂತ ಮತ್ತೊಬ್ಬ ಖ್ಯಾತ ನಟಧನ್ವಿರ್ ಬಳಿಕ ದರ್ಶನ್ ಬೆಂಬಲಕ್ಕೆ ನಿಂತ ಮತ್ತೊಬ್ಬ ಖ್ಯಾತ ನಟ

  ಯುವ ನಟ ಧನ್ವೀರ್ ಸಾಥ್

  ಯುವ ನಟ ಧನ್ವೀರ್ ಸಾಥ್

  "ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್. ನಾನು ಚಿತ್ರೋದ್ಯಮಕ್ಕೆ ಬರುವ ಮೊದಲಿನಿಂದಲೂ ಡಿ ಬಾಸ್ ಅಭಿಮಾನಿ. ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಿಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ. ಇಂತಹ ನೂರಾರು ಗುಣಗಳಿರುವ ನನ್ನಂತ ಅಭಿಮಾನಿಗಳಿಗೆ ಸ್ಫೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್'' ಎಂದು ನಟ ಧನ್ವೀರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

  ಸಂಸದ ಪಿಸಿ ಮೋಹನ್ ಸಪೋರ್ಟ್

  ಸಂಸದ ಪಿಸಿ ಮೋಹನ್ ಸಪೋರ್ಟ್

  ''ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ-ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ. ಯಾವುದೇ ಆಧಾರವಿಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕಾಗಿ ನನ್ನ ವಿನಂತಿ'' ಎಂದು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಸಹ ನಟ ದರ್ಶನ್‌ಗೆ ಬೆಂಬಲ ಕೊಟ್ಟಿದ್ದಾರೆ.

  ದರ್ಶನ್ ಅವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗಲ್ಲ; ಡಿ ಬಾಸ್ ಪರ ನಿಂತ ಧನ್ವೀರ್ದರ್ಶನ್ ಅವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗಲ್ಲ; ಡಿ ಬಾಸ್ ಪರ ನಿಂತ ಧನ್ವೀರ್

  ದರ್ಶನ್ ಬೆಂಬಲಕ್ಕೆ ನಿಂತ ಜೀವದ ಗೆಳೆಯರು
  ವಿನೋದ್ ಪ್ರಭಾಕರ್ ಬೆಂಬಲ

  ವಿನೋದ್ ಪ್ರಭಾಕರ್ ಬೆಂಬಲ

  ಈ ವಿಚಾರದಲ್ಲಿ ನಟ ದರ್ಶನ್‌ಗೆ ಮೊದಲು ಬೆಂಬಲ ಕೊಟ್ಟಿದ್ದೇ ವಿನೋದ್ ಪ್ರಭಾಕರ್. ''ನಮ್ಮ ನಿಮ್ಮ ಪ್ರೀತಿಯ ''ಡಿ ಬಾಸ್'' ಬಗ್ಗೆ ಯಾರೇನು ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ. ದರ್ಶನ್ ತೂಗುದೀಪರಾಗಿ ಇಂಡಸ್ಟ್ರಿಗೆ ಬಂದವರನ್ನ ಇವತ್ತು ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಅಫೀಸ್ ಸುಲ್ತಾನ್, ಡಿ ಬಾಸ್ ಮಾಡಿರೋದು ಅವರ ಅಭಿಮಾನಿಗಳು. ಬರಿ ಅವರ ನಟನೆ ನೋಡಿ ಅಲ್ಲ, ಅವರ ವ್ಯಕ್ತಿತ್ವ, ಸಹಾಯ ಗುಣ ಇನ್ನೊಬ್ಬರನ್ನು ಪ್ರೋತ್ಸಾಹಿಸಿ ಬೆಳೆಸುವ ಮನಸು ನೋಡಿ. ಅವರ ಅಭಿಮಾನಿಗಳು ಅವತ್ತು ಇದ್ರೂ, ಇವತ್ತು ಇದರೆ, ಮುಂದೇನು ಇರ್ತಾರೆ. ಅವರನ್ನು ಇನ್ನೂ ಹತ್ತು ಪಟ್ಟು ಬೆಳೆಸುತ್ತಾರೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ'' ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದರು.

  English summary
  Deadly Aditya Supports Darshan on his ongoing Controversy with Indrajith and rs 25 cr loan fraud case. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X