ಈ ವರ್ಷ ಎಂಟ್ರಿ ಕೊಟ್ಟ ನವನಟರಲ್ಲಿ ನಿಮ್ಮ ನೆಚ್ಚಿನ ಹೀರೋ ಯಾರು?
ಪ್ರತಿವರ್ಷ ಹಲವು ಯುವ ನಟ-ನಟಿಯರು ಚಿತ್ರರಂಗಕ್ಕೆ ಬರ್ತಾರೆ. ಅವರಲ್ಲಿ ಕೆಲವರು ಮಾತ್ರ ಯಶಸ್ಸು ಕಂಡು, ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ. ಮತ್ತೆ ಕೆಲವರು ಬಂದ ದಾರಿಗೆ ಸುಂಕವಿಲ್ಲವೆಂದು ನಾಪತ್ತೆ ಆಗುತ್ತಾರೆ.
ಈ ವರ್ಷವೂ ಹಲವು ಪ್ರತಿಭಾನ್ವಿತ ಯುವ ನಟರು ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಆದ್ರೆ, ಅವರಲ್ಲಿ ಸಕ್ಸಸ್ ಸಿಹಿ ಕಂಡಿದ್ದು ಬೆರಳಣಿಕೆಯ ತಾರೆಯರು.
ಹಾಗಿದ್ರೆ, 2017ರಲ್ಲಿ ಎಲ್ಲರ ಗಮನ ಸೆಳೆದ ನವನಟ ಯಾರು? ಯಾರ ಅಭಿನಯಕ್ಕೆ ಪ್ರೇಕ್ಷಕರು ಏನಂದ್ರು? ಯಾವ ಚಿತ್ರದ ಮೂಲಕ ಡೆಬ್ಯೂ ಮಾಡಿದರು ಎಂಬ ಮಾಹಿತಿ ಇಲ್ಲಿದೆ. ಮುಂದೆ ಓದಿ......

ನಿಶಾಂತ್
ದಕ್ಷಿಣ ಭಾರತದ ಖ್ಯಾತ ಖಳನಟ ಸತ್ಯ ಪ್ರಕಾಶ್ ಅವರ ಮಗ ನಿಶಾಂತ್ ಈ ವರ್ಷ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮರಾಠಿಯ 'ಸೈರಾಟ್' ಚಿತ್ರದ ಕನ್ನಡ ರೀಮೇಕ್ 'ಮನಸು ಮಲ್ಲಿಗೆ' ಚಿತ್ರದಲ್ಲಿ ನಾಯಕನಾಗುವ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಲಗ್ಗೆಯಿಟ್ಟರು. ಚೊಚ್ಚಲ ಚಿತ್ರದಲ್ಲಿ ತಮ್ಮ ಅಭಿನಯ ಮೂಲಕ ಗಮನ ಸೆಳೆದ ನಿಶಾಂತ್ ಹೊಸ ಭರವಸೆ ಮೂಡಿಸಿದ್ದಾರೆ.

ಇಶಾನ್
ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರದ ಮೂಲಕ ಇಶಾನ್ ನಾಯಕನಾಗಿ ಕನ್ನಡ ಇಂಡಸ್ಟ್ರಿಗೆ ಪರಿಚಯವಾದರು. ನಿರ್ಮಾಪಕ ಸಿ ಆರ್ ಮನೋಹರ್ ಅವರ ಸಹೋದರ ಇಶಾನ್. ಮೊದಲ ಸಿನಿಮಾದಲ್ಲಿ ರೊಮ್ಯಾಂಟಿಕ್ ಹೀರೋ ಇಮೇಜ್ ಹೊತ್ತು ಬಂದಿದ್ದ ಇಶಾನ್ ಗೆ ಗ್ರ್ಯಾಂಡ್ ವೆಲ್ ಕಮ್ ಸಿಕ್ಕಿತ್ತು.

ಮನೋರಂಜನ್
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಮೇಲೆ ಚಿತ್ರಪ್ರೇಮಿಗಳ ಕಣ್ಣು ಬಹಳ ವರ್ಷಗಳಿಂದ ಇತ್ತು. ಕೊನೆಗೆ ಈ ವರ್ಷ 'ಕ್ರೇಜಿಪುತ್ರ'ನ ಆಗಮನವಾಯಿತು. 'ಸಾಹೇಬ' ಚಿತ್ರದ ಮೂಲಕ ರವಿಮಾಮನ ಮಗ ಸ್ಯಾಂಡಲ್ ವುಡ್ ಗೆ ಪರಿಚಯ ಆಗಿದ್ದು, ಡ್ಯಾನ್ಸ್, ಅಭಿನಯ, ಫೈಟ್ ಎಲ್ಲದರಲ್ಲೂ ಮೆಚ್ಚುಗೆ ಗಳಿಸಿಕೊಂಡರು.

ರಾಜ್ ಬಿ ಶೆಟ್ಟಿ
ಈ ವರ್ಷ ಸರ್ಪ್ರೈಸ್ ಆಗಿ ಗುರುತಿಸಿಕೊಂಡ ನಟ ರಾಜ್ ಬಿ ಶೆಟ್ಟಿ. 'ಒಂದು ಮೊಟ್ಟೆಯ ಕಥೆ' ಎಂಬ ಸಿನಿಮಾ ಮೂಲಕ ಹೊಸ ಸ್ಟೈಲ್ ನಾಯಕ ಆಗಿ ಹೊರಹೊಮ್ಮಿದ ರಾಜ್ ಬಿ ಶೆಟ್ಟಿ ಚಂದನವನದಲ್ಲಿ ಮೋಡಿ ಮಾಡಿದರು. ನಟನೆ ಜೊತೆಗೆ ನಿರ್ದೇಶಕರಾಗಿಯೂ ಯಶಸ್ಸು ಕಂಡರು. ಇದೀಗ, ಮತ್ತಷ್ಟು ಆಫರ್ ಗಳು ರಾಜ್ ಬಿ ಶೆಟ್ಟಿ ಅವರನ್ನ ಹುಡುಕಿಕೊಂಡು ಬರ್ತಿದೆ.

ರಿಷಿ
ಸಿಂಪಲ್ ಸುನಿ ನಿರ್ದೇಶನದ 'ಆಪರೇಷನ್ ಆಲಮೇಲಮ್ಮ' ಚಿತ್ರದ ಮೂಲಕ ಕನ್ನಡ ಸಿನಿಲೋಕಕ್ಕೆ ಹೆಜ್ಜೆಯಿಟ್ಟ ನವ ನಟ ರಿಷಿ. ಒಳ್ಳೆ ಹೈಟು, ಒಳ್ಳೆ ಪರ್ಸನಾಲಿಟಿ ಹೊಂದಿರುವ ರಿಷಿ ಕಾಮಿಡಿ ಸಸ್ಪೆನ್ಸ್ ಸಿನಿಮಾ ಮೂಲಕ ಭರ್ಜರಿ ಎಂಟ್ರಿ ಪಡೆದುಕೊಂಡಿದ್ದಾರೆ. ಮೊದಲ ಚಿತ್ರದ ನಂತರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಬಾಲು ನಾಗೇಂದ್ರ
'ಹುಲಿರಾಯ' ಚಿತ್ರದ ಮೂಲಕ ಪ್ರತಿಭಾನ್ವಿತ ನಟ ನಾಯಕನಾಗಿ ಪರಿಚಯ ಆಗಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಟನಾಗಿ ಗುರುತಿಸಿಕೊಂಡಿದ್ದ ಬಾಲು ನಾಗೇಂದ್ರ, ನಾಯಕನಾಗಿ ಡೆಬ್ಯೂ ಮಾಡಿದ್ದಾರೆ. ಚೊಚ್ಚಲ ಚಿತ್ರದಲ್ಲಿ ಕನ್ನಡ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಇವರಷ್ಟೇ ಅಲ್ಲ, ಮತ್ತಷ್ಟು ಹೊಸ ಹೊಸ ಪ್ರತಿಭೆಗಳು ಈ ವರ್ಷ ಇಂಡಸ್ಟ್ರಿಗೆ ಬಂದು, ತಮ್ಮದೇ ಆದ ನಟನೆ ಮೂಲಕ ಗುರುತಿಸಿಕೊಂಡಿದ್ದಾರೆ.


Click it and Unblock the Notifications











