2018ನೇ ವರ್ಷದ 'ರೈಸಿಂಗ್ ಸ್ಟಾರ್' ಪಟ್ಟ ಯಾರಿಗೆ ಸಿಗಬೇಕು?

2018ನೇ ವರ್ಷ ಹೊಸ ಪ್ರತಿಭೆಗಳಿಗೆ ಹೇಳಿಕೊಳ್ಳುವಂತಿರಲಿಲ್ಲ. 210ಕ್ಕೂ ಅಧಿಕ ಚಿತ್ರಗಳು ಬಂದ್ರು, ಅದರಲ್ಲಿ ಹೊಸಬರ ಸಿನಿಮಾಗಳೇ ಹೆಚ್ಚಿದೆ. ಆದ್ರೆ, ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಅಲ್ಲೊಂದು ಇಲ್ಲೊಂದು ಹಿಟ್ ಬಾರಿಸಿತು. ಸಿನಿಮಾ ಚೆನ್ನಾಗಿಲ್ಲ ಅಂದ್ರು, ಕೆಲವು ನಟ-ನಟಿಯರು ಪ್ರೇಕ್ಷಕರ ಕಣ್ಣಿಗೆ ಬಿದ್ದರು.

ತಮ್ಮ ಪ್ರತಿಭೆಯಿಂದ, ಪರವಾಗಿಲ್ಲ ಇವರಿಗೆ ಸ್ಯಾಂಡಲ್ ವುಡ್ ನಲ್ಲಿ ಫ್ಯೂಚರ್ ಇದೆ ಎಂದು ಮಾತನಾಡಿಕೊಳ್ಳವಂತೆ ಗಮನ ಸೆಳೆದರು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ನಟರು ಚಂದನವನಕ್ಕೆ ಕಾಲಿಡ್ತಿದ್ದಾರೆ. ಈ ವರ್ಷವೂ ಅಂತಹ ನಟರು ಬಂದಿದ್ದಾರೆ. ಅದರಲ್ಲಿ ಮನಸ್ಸಿನಲ್ಲಿ ಉಳಿಯುವುದು ಕೆಲವರು ಮಾತ್ರ.

ಅದೇ ರೀತಿ ಈ ವರ್ಷ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯುವ ನಟರು, ನವ ನಾಯಕ ನಟರ ಬಗ್ಗೆ ಒಂದು ರೌಂಡ್ ನೋಡಿ ಬರೋಣ.....ಯಾವ ಸಿನಿಮಾದ ಮೂಲಕ ಯಾವ ಹೀರೋ ಇಂಡಸ್ಟ್ರಿಗೆ ಎಂಟ್ರಿ ಕೊಟ್ರು ಎಂದು ತಿಳಿಯಲು ಮುಂದೆ ಓದಿ....

ಡ್ಯಾನಿಶ್ ಸೇಠ್

ಡ್ಯಾನಿಶ್ ಸೇಠ್

ಟಿವಿ ಶೋಗಳ ಮೂಲಕ ಜನರನ್ನ ರಂಜಿಸುತ್ತಿದ್ದ ಡ್ಯಾನಿಶ್ ಸೇಠ್ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ರು. ಚೊಚ್ಚಲ ಚಿತ್ರದಲ್ಲೇ ಗಮನಾರ್ಹ ಅಭಿನಯದ ಮಾಡಿದ ಡ್ಯಾನಿಶ್, ಚಂದನವನದಲ್ಲಿ ಭರವಸೆ ಮೂಡಿಸಿದ್ದಾರೆ.

ನವೀನ್ ಶಂಕರ್

ನವೀನ್ ಶಂಕರ್

ಈ ವರ್ಷ ಸದ್ದು ಮಾಡಿದ ಚಿತ್ರಗಳ ಪೈಕಿ 'ಗುಳ್ಟು' ಚಿತ್ರವೂ ಒಂದು. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನವೀನ್ ಶಂಕರ್, ಸಿನಿಪ್ರೇಕ್ಷಕರ ಗಮನ ಸೆಳೆದರು. ನವೀನ್ ಮೇಲೂ ಹೊಸದೊಂದು ಭರವಸೆ ಮೂಡಿದೆ.

ಪ್ರಣಮ್ ದೇವರಾಜ್

ಪ್ರಣಮ್ ದೇವರಾಜ್

ದೇವರಾಜ್ ಅವರ ಎರಡನೇ ಪುತ್ರ ಪ್ರಣಮ್ ಈ ವರ್ಷ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ರು. ತೆಲುಗಿನ ಹಿಟ್ ಸಿನಿಮಾ 'ಕುಮಾರಿ 21ಎಫ್' ಚಿತ್ರವನ್ನ ಅದೇ ಹೆಸರಿನಲ್ಲಿ ಕನ್ನಡಕ್ಕೆ ರೀಮೇಕ್ ಮಾಡಿದ್ರು. ಆದ್ರೆ, ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ. ಬಟ್, ನಟ ಪ್ರಣಮ್ ಮೋಡಿ ಮಾಡಿದ್ರು.

ಶ್ರೀಮಹಾದೇವ್

ಶ್ರೀಮಹಾದೇವ್

ನಟಿ ಮೇಘನಾ ರಾಜ್, ತಿಲಕ್ ಅಭಿನಯಿಸಿದ್ದ 'ಇರುವುದೆಲ್ಲವ ಬಿಟ್ಟು' ಚಿತ್ರದ ಮೂಲಕ ಯುವ ನಟ ಶ್ರೀಮಹಾದೇವ್ ಗಮನ ಸೆಳೆದರು. ಡ್ಯಾನ್ಸ್, ಆಕ್ಟಿಂಗ್, ಲುಕ್ ಎಲ್ಲದರಲ್ಲಿಯೂ ಮಹಾದೇವ್ ಸೈ ಎನಿಸಿಕೊಂಡಿದ್ದರು. ಇವರ ಮೇಲೆಯೂ ನಿರೀಕ್ಷೆ ಇದೆ.

ಪ್ರಥಮ್

ಪ್ರಥಮ್

ಬಿಗ್ ಬಾಸ್ ಗೆದ್ದು ಬಂದಿದ್ದ ಪ್ರಥಮ್, ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದರು. ಬಟ್, ಚೊಚ್ಚಲ ಸಿನಿಮಾ ರಿಲೀಸ್ ಆಗಿದ್ದು ಇದೇ ವರ್ಷ. ಪ್ರಥಮ್ ಅಭಿನಯಿಸಿದ್ದ 'ದೇವ್ರಂಥ ಮನುಷ್ಯ'ದ ಮೂಲಕ ಪ್ರಥಮ್ ನಟನಾಗಿ ಎಂಟ್ರಿ ಕೊಟ್ಟರು.

ಪ್ರಖ್ಯಾತ್

ಪ್ರಖ್ಯಾತ್

ಸ್ಟಾರ್ ನಟರ ಚಿತ್ರಗಳ ಮಧ್ಯೆ ಸೈಲೆಂಟ್ ಆಗಿ ಆಕರ್ಷಣೆ ಮಾಡಿದ್ದ ಸಿನಿಮಾ 'ನಡುವೆ ಅಂತರವಿರಲಿ'. ಐಶಾನಿ ಶೆಟ್ಟಿ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಪ್ರಖ್ಯಾತ್ ನಾಯಕನಾಗಿದ್ದರು. ಇವರಿಗೆ ಇದು ಮೊದಲ ಸಿನಿಮಾ. ಇವರುಗಳ ಪೈಕಿ ವರ್ಷದ ರೈಸಿಂಗ್ ಸ್ಟಾರ್ ಪಟ್ಟ ಯಾರಿಗೆ ನೀಡಬಹುದು ಎಂದು ಕಾಮೆಂಟ್ ಮೂಲಕ ತಿಳಿಸಿ...

More from Filmibeat

English summary
2018 witnessed many newcomers entering Sandalwood. Among those here is the list of Talented New Actor who made promising entry into Sandalwood in 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X