ಈ ವರ್ಷ ಸ್ಯಾಂಡಲ್ ವುಡ್ ಗೆ ಬಂದ ಬೆಳದಿಂಗಳ ಬಾಲೆಯರಿವರು

By Naveen

ಪ್ರತಿ ವರ್ಷ ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ನಟಿಯರು ಬರುತ್ತಾನೆ ಇರುತ್ತಾರೆ. ಅದೇ ರೀತಿ ಈ ವರ್ಷ ಕೂಡ ಅನೇಕ ಹೊಸ ಹೊಸ ನಟಿಯರು ಬೆಳ್ಳಿತೆರೆ ಮೇಲೆ ಪ್ರವೇಶ ಮಾಡಿದ್ದಾರೆ.

ಹೊಸ ಕನಸು ಇಟ್ಟುಕೊಂಡು, ನಾನು ನಟಿ ಆಗಬೇಕು ಎನ್ನುವ ಬಯಕೆಯಲ್ಲಿ ಅನೇಕರು ಸ್ಯಾಂಡಲ್ ವುಡ್ ಅಂಗಳಕ್ಕೆ ಬಲಗಾಲಿಟ್ಟು ಬರುತ್ತಾರೆ. ಆದರೆ ಅದರಲ್ಲಿ ಕೆಲವೇ ನಟಿಯರಿಗೆ ಮಾತ್ರ ಪ್ರೇಕ್ಷಕರು ಆರತಿ ಮಾಡಿ ಒಳಗೆ ಕರೆದುಕೊಳ್ಳುತ್ತಾರೆ. ಇನ್ನು 2017 ರಲ್ಲಿ ಕನ್ನಡದಲ್ಲಿ 200 ಸಿನಿಮಾಗಳು ಬಿಡುಗಡೆಯಾಗಿದೆ. ಇವುಗಳಲ್ಲಿ 15ಕ್ಕೂ ಹೆಚ್ಚು ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ನಟಿಯರ ಜೊತೆ ಮತ್ತೊಂದು ಕಡೆ ಪರಭಾಷೆಯ ದೊಡ್ಡ ನಟಿಯರು ಕೂಡ ಈ ವರ್ಷ ಚಂದನವನವನ್ನು ಪ್ರವೇಶ ಮಾಡಿದ್ದಾರೆ. ಮುಂದೆ ಓದಿ...

ಹಿತಾ ಚಂದ್ರಶೇಖರ್ (1/4 ಕೆಜಿ ಪ್ರೀತಿ )

ಹಿತಾ ಚಂದ್ರಶೇಖರ್ (1/4 ಕೆಜಿ ಪ್ರೀತಿ )

ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಈ ವರ್ಷ ಚಿತ್ರರಂಗಕ್ಕೆ ಬಂದರು. '1/4 ಕೆಜಿ ಪ್ರೀತಿ' ಸಿನಿಮಾದ ಮೂಲಕ ಹಿತಾ ನಾಯಕಿ ಆದರು. '1/4 ಕೆಜಿ ಪ್ರೀತಿ' ಸಿನಿಮಾ ದೊಡ್ಡ ಯಶಸ್ಸು ಪಡೆಯದಿದ್ದರು. ಹಿತಾ ಅವರಿಗೆ ಬೇರೆ ಬೇರೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದವು.

ಅಧಿತಿ ಪ್ರಭುದೇವ (ಧೈರ್ಯಂ)

ಅಧಿತಿ ಪ್ರಭುದೇವ (ಧೈರ್ಯಂ)

ಕಿರುತೆರೆಯ 'ನಾಗಕನ್ನಿಕೆ' ಧಾರಾವಾಹಿಯ ನಾಯಕಿ ಅಧಿತಿ ಪ್ರಭುದೇವ 'ಧೈರ್ಯಂ' ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರು. ಆಕಸ್ಮಿಕವಾಗಿ ಸಿಕ್ಕ ಮೊದಲ ಅವಕಾಶವನ್ನು ದಾವಣಗೆರೆಯ ಈ ಹುಡುಗಿ ಚೆನ್ನಾಗಿ ಬಳಸಿಕೊಂಡರು. ಮೊದಲ ಸಿನಿಮಾಲ್ಲಿಯೇ ತಮ್ಮ ನಟನೆ ಮೂಲಕ ಎಲ್ಲರ ಗಮನ ಸೆಳೆದರು.

ದಿವ್ಯ ಉರುಡುಗ (ಹುಲಿರಾಯ)

ದಿವ್ಯ ಉರುಡುಗ (ಹುಲಿರಾಯ)

ಮಲೆನಾಡ ಹುಡಗಿ ದಿವ್ಯ ಉರುಡುಗ 'ಹುಲಿರಾಯ' ಚಿತ್ರದ ಮೂಲಕ ತಮ್ಮ ಸಿನಿಕೆರಿಯರ್ ಶುರು ಮಾಡಿದರು. 'ಹುಲಿರಾಯ'ನ ಜಿಂಕೆ ಆಗಿ ಮುದ್ದುಮುದ್ದಾಗಿ ದಿವ್ಯ ತೆರೆ ಮೇಲೆ ಕಾಣಿಸಿಕೊಂಡಿದ್ದರು.

ಲತಾ ಹೆಗಡೆ (ಅತಿರಥ)

ಲತಾ ಹೆಗಡೆ (ಅತಿರಥ)

ನ್ಯೂಜಿಲ್ಯಾಂಡ್ ಬೆಡಗಿ ಕನ್ನಡತಿ ಲತಾ ಹೆಗಡೆಗೆ 'ಅತಿರಥ' ಮೊದಲ ಸಿನಿಮಾವಾಗಿತ್ತು. ಈ ಚಿತ್ರದಲ್ಲಿ ನಟ ಚೇತನ್ ಜೊತೆ ಲತಾ ನಟಿಸಿದ್ದರು. ತಮ್ಮ ಲುಕ್ ಮತ್ತು ನಟನೆ ಎರಡರಲ್ಲಿಯೂ ಸೈ ಎನಿಸಿಕೊಂಡ ಈಕೆ ಸದ್ಯ ವಿನಯ್ ರಾಜ್ ಕುಮಾರ್ ಜೊತೆ ನಟಿಸುತ್ತಿದ್ದಾರೆ.

ಸೃಷ್ಟಿ ಪಾಟೀಲ್ (ಹ್ಯಾಪಿ ನ್ಯೂ ಹಿಯರ್)

ಸೃಷ್ಟಿ ಪಾಟೀಲ್ (ಹ್ಯಾಪಿ ನ್ಯೂ ಹಿಯರ್)

ನಟ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ತಂದೆಯ ರೀತಿ ಚಿತ್ರರಂಗದಲ್ಲಿ ಹೆಸರು ಮಾಡುವ ಕನಸು ಹೊತ್ತು ಬಂದರು. 'ಹ್ಯಾಪಿ ನ್ಯೂ ಹಿಯರ್' ಸಿನಿಮಾದಲ್ಲಿ ಸೃಷ್ಟಿ ನಾಯಕಿ ಆಗಿದ್ದರು. ಆದರೆ ಈ ಸಿನಿಮಾ ಹೆಚ್ಚು ದಿನ ಚಿತ್ರಮಂದಿರದಲ್ಲಿ ಇರಲಿಲ್ಲ. ಜನ ಕೂಡ ಸಿನಿಮಾದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ರಂಜನಿ ರಘುವನ್ (ರಾಜಹಂಸ)

ರಂಜನಿ ರಘುವನ್ (ರಾಜಹಂಸ)

ಕನ್ನಡ ಟಿವಿ ಜಗತ್ತಿನ ಟಿ.ಆರ್.ಪಿ ಕ್ವೀನ್ 'ಪುಟ್ಟಗೌರಿ ಮದುವೆ' ಖ್ಯಾತಿಯ ನಟಿ ರಂಜನಿ ರಘುವನ್ 'ರಾಜಹಂಸ' ಏರಿ ಗಾಂಧಿನಗರಕ್ಕೆ ಬಂದರು. ಆದರೆ ಸಣ್ಣ ಪರದೆಯಲ್ಲಿ ನಡೆದ ರಂಜನಿ ಮ್ಯಾಜಿಕ್ ಇಲ್ಲಿ ಕೆಲಸ ಮಾಡಲಿಲ್ಲ.

ಅಮಲಾ ಪೌಲ್ (ಹೆಬ್ಬುಲಿ)

ಅಮಲಾ ಪೌಲ್ (ಹೆಬ್ಬುಲಿ)

ಕನ್ನಡದ ನಟಿಯರ ಜೊತೆಗೆ ಪರಭಾಷೆಯ ದೊಡ್ಡ ದೊಡ್ಡ ನಟಿಯರು ಈ ವರ್ಷ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿ ಅಮಲಾ ಪೌಲ್ ನಟಿಸಿದ್ದರು. ಹುಲಿ ಘರ್ಜನೆ ಜೊತೆ ಅಮಲಾ ಪೌಲ್ ಅಮಲು ಸೇರಿ 'ಹೆಬ್ಬುಲಿ' ಹಿಟ್ ಆಯ್ತು.

ಪ್ರಿಯಾ ಆನಂದ್ (ರಾಜಕುಮಾರ)

ಪ್ರಿಯಾ ಆನಂದ್ (ರಾಜಕುಮಾರ)

'ರಾಜಕುಮಾರ' ಪುನೀತ್ ರಾಜ್ ಕುಮಾರ್ ಗೆ ರಾಜಕುಮಾರಿ ಆಗಿದ್ದು ಪ್ರಿಯಾ ಆನಂದ್. ಬಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಸಿನಿಮಾ ಮಾಡಿದ್ದ ಪ್ರಿಯಾ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಿದರು. ಪ್ರಿಯಾ ಆನಂದ್ ಅವರ ಮೊದಲ ಸಿನಿಮಾನೇ ನೂರು ದಿನ ಪೂರೈಸಿತು.

ರಿಂಕು ರಾಜ್ ಗುರು (ಮನಸು ಮಲ್ಲಿಗೆ)

ರಿಂಕು ರಾಜ್ ಗುರು (ಮನಸು ಮಲ್ಲಿಗೆ)

ರಿಂಕು ರಾಜ್ ಗುರು ಮರಾಠಿಯ 'ಸೈರಾಟ್' ಸಿನಿಮಾದ ಮೂಲಕ ದೇಶಾದ್ಯಂತ ಹೆಸರು ಮಾಡಿದ ನಟಿ. ಮರಾಠಿಯ ಈ ಸೂಪರ್ ಹಿಟ್ ಸಿನಿಮಾ 'ಮನಸು ಮಲ್ಲಿಗೆ'ಯಾಗಿ ಕನ್ನಡಕ್ಕೆ ಬಂತು. ಈ ಚಿತ್ರದ ಜೊತೆಗೆ ರಿಕ್ಕು ಕೂಡ ಕನ್ನಡಕ್ಕೆ ಬಂದರು.

ಉಳಿದ ನಾಯಕಿಯರು

ಉಳಿದ ನಾಯಕಿಯರು

ಈ ನಟಿಯರ ಜೊತೆಗೆ 'ರೋಗ್' ಚಿತ್ರದ ಮೂಲಕ ಮನಾರಾ ಚೋಪ್ರಾ, ಏಂಜಲ್ 'ಶ್ರೀ ಕಂಠ' ಮೂಲಕ ಚಾಂದಿನಿ, 'ಸನ್ ಆಫ್ ಬಂಗಾರದ ಮನುಷ್ಯ' ಮೂಲಕ ವಿದ್ಯಾ ಪ್ರದೀಪ್ ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡಿದರು.

More from Filmibeat

English summary
2017 witnessed many newcomers entering Sandalwood. Among those here is the list of Talented New Actress who made promising entry into Sandalwood in 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X