ಡಾ.ರಾಜ್ ಕುಮಾರ್ ಹೋಟೆಲ್ ಗೆ ದಶಕದ ಸಂಭ್ರಮ
ಗಾಂಧಿನಗರದಲ್ಲಿರುವ ಡಾ.ರಾಜ್ ಇಂಟರ್ ನ್ಯಾಷನಲ್ ಹೋಟೆಲ್ ಹತ್ತು ವರ್ಷಗಳನ್ನ ಪೂರೈಸಿದೆ. 11ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಡಾ.ರಾಜ್ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್ ನವೀಕರಣಗೊಂಡಿದ್ದು, ಇಂದು ಮರು ಉದ್ಘಾಟನಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಡಾ. ರಾಜ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ದೈವಿಕ್ ರೆಸ್ಟೋರೆಂಟ್ ಪ್ರಾರಂಭ ಮಾಡಲಾಗುತ್ತಿದೆ. ಸತ್ಯನಾರಾಯಣ ಪೂಜೆ ಮೂಲಕ ಡಾ.ರಾಜ್ ಕುಮಾರ್ ಇಂಟರ್ ನ್ಯಾಷನಲ್ ನಲ್ಲಿ ದೈವಿಕ್ ರೆಸ್ಟೋರೆಂಟ್ ಗೆ ಚಾಲನೆ ನೀಡಲಾಯ್ತು.

ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ರಾಜ್ ಸಹೋದರಿ ನಾಗಮ್ಮ, ಚಿನ್ನೇಗೌಡ್ರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಡಾ.ರಾಜ್ ಹಾಗು ಕಾಪು ವಾಸುದೇವ ಶೆಟ್ಟಿ ಅವರ ಸಹಭಾಗಿತ್ವದೊಂದಿಗೆ ನಡೆದುಕೊಂಡು ಬಂದಿರುವ ಹೋಟೆಲ್ ಇನ್ನು ಮುಂದೆ ಮತ್ತಷ್ಟು ವಿಶೇಷತೆಯೊಂದಿಗೆ ಗ್ರಾಹಕರಿಗೆ ಆಥಿತ್ಯ ನೀಡಲಿದೆ.

English summary
Dr.Rajkumar International Hotel completes 10 years. ದಶಕದ ಸಂಭ್ರಮದಲ್ಲಿ ಡಾ ರಾಜ್ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್.
dr rajkumar shiva rajkumar puneeth rajkumar bengaluru ಪುನೀತ್ ರಾಜ್ ಕುಮಾರ್ ಶಿವರಾಜ್ ಕುಮಾರ್ ಡಾ ರಾಜ್ ಕುಮಾರ್ ಬೆಂಗಳೂರು


Click it and Unblock the Notifications