'ಡೆವಿಲ್' To 'ವೃಷಭ'; ಡಿಸೆಂಬರ್ ರಿಲೀಸ್ ಚಿತ್ರಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ
ನೋಡ್ತಾ ನೋಡ್ತಾ 2025ರ ವರ್ಷ ಮುಗಿದೇ ಹೋಯ್ತು. ಡಿಸೆಂಬರ್ ಮೊದಲ ವಾರ ಆರಂಭವಾಗಿದೆ. ಈ ವರ್ಷ ಸಾಕಷ್ಟು ಹಿಟ್ ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿದೆ. ವರ್ಷದ ಕೊನೆಗೆ ಕ್ರಿಸ್‌ಮಸ್ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಾಕ್ಸಾಫೀಸ್ ಅಖಾಡಕ್ಕೆ ಇಳಿಯುತ್ತಿವೆ.
ವರ್ಷದ ಕೊನೆ ತಿಂಗಳಲ್ಲಿ ಕನ್ನಡದ 3 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಪೈಪೋಟಿ ನಡೀತಿದೆ. ಡಿಸೆಂಬರ್ 11ಕ್ಕೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆ ಆಗಲಿದೆ. 25ರಂದು ಸುದೀಪ್ ನಟನೆಯ ಮಾರ್ಕ್ ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ತೆರೆಗಪ್ಪಳಿಸಲು ಅಣಿಯಾಗುತ್ತಿದೆ. ಇನ್ನುಳಿದಂತೆ ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್‌ನಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ.

ಅಖಂಡ-2
ಡಿಸೆಂಬರ್ ಮೊದಲ ವಾರವೇ ಬಾಲಕೃಷ್ಣ ನಟನೆಯ 'ಅಖಂಡ-2' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗ್ತಿದೆ. ಬೋಯಪಾಟಿ ಶ್ರೀನು ನಿರ್ದೇಶನದ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. 4 ವರ್ಷಗಳ ಹಿಂದೆ ಡಿಸೆಂಬರ್ ಮೊದಲ ವಾರವೇ 'ಅಖಂಡ' ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಉತ್ತರ ಭಾರತದಲ್ಲಿ ಕೂಡ ಸಿನಿಮಾ ಸದ್ದು ಮಾಡಿತ್ತು. ಸೀಕ್ವೆಲ್‌ನಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ.
ಧುರಂಧರ್
ಈ ವಾರವೇ ಬಾಲಿವುಡ್ ಸಿನಿಮಾ 'ಧುರಂಧರ್' ತೆರೆಗೆ ಬರ್ತಿದೆ. ಇತ್ತೀಚೆಗೆ ಬಂದಿದ್ದ ಚಿತ್ರದ ಟ್ರೈಲರ್ ಸೂಪರ್ ಹಿಟ್ ಆಗಿತ್ತು. ಆದಿತ್ಯ ದಾರ್ ನಿರ್ದೇಶನದ ಈಸ ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ರಣ್‌ವೀರ್ ಸಿಂಗ್, ಸಂಜಯ್ ದತ್, ಮಾಧವನ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಇದು. ಪ್ರಕಾಶ್ ನಿರ್ದೇಶಿಸಿ, ನಿರ್ಮಿಸಿರುವ 'ಡೆವಿಲ್' ಚಿತ್ರದಲ್ಲಿ ದರ್ಶನ್ ಹಾಗೂ ರಚನಾ ರೈ ನಟಿಸಿದ್ದಾರೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಅಭಿಮಾನಿಗಳು ಒತ್ತಾಯದ ಮೇರೆಗೆ ಒಂದು ದಿನ ಮುನ್ನವೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ದರ್ಶನ್ ಜೈಲಿನಲ್ಲಿದ್ದು ಅವರ ಅನುಪಸ್ಥತಿಯಲ್ಲೇ ಸಿನಿಮಾ ತೆರೆಗೆ ಬರಲಿದೆ. ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಅವತಾರ್- 3
ಹಾಲಿವುಡ್ ಸೂಪರ್ ಹಿಟ್ ಸರಣಿ ಸಿನಿಮಾ 'ಅವತಾರ್- 3' ಡಿಸೆಂಬರ್ 19ಕ್ಕೆ ತೆರೆಗೆ ಬರ್ತಿದೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಎಪಿಕ್ ಸೈನ್ಸ್ ಫಿಕ್ಷನ್ ಸಿನಿಮಾ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗಲಿದೆ. ಸರಣಿಯ 3ನೇ ಚಿತ್ರಕ್ಕೆ 'ಅವತಾರ್: ಫೈರ್ & ಹ್ಯಾಷ್' ಎಂದು ಟೈಟಲ್ ಫಿಕ್ಸ್ ಆಗಿದೆ.

ಮಾರ್ಕ್ ಹಾಗೂ 45
ಕ್ರಿಸ್‌ಮಸ್ ಸಂಭ್ರಮದಲ್ಲಿ ಕನ್ನಡದ 'ಮಾರ್ಕ್' ಹಾಗೂ '45' ಚಿತ್ರಗಳು ಒಟ್ಟೊಟ್ಟಿಗೆ ತೆರೆಗಪ್ಪಳಿಸಲಿವೆ. 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲಿ 'ಮಾರ್ಕ್' ಚಿತ್ರ ಬರ್ತಿರೋದು ವಿಶೇಷ. ಇನ್ನು ಶಿವಣ್ಣ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45' ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ.
ವೃಷಭ
ಕ್ರಿಸ್‌ಮಸ್ ಸಂಭ್ರಮದಲ್ಲೇ ಮಲಯಾಳಂನ 'ವೃಷಭ' ಚಿತ್ರ ಬಿಡುಗಡೆಗೆ ಅಣಿಯಾಗಿದೆ. ಮೋಹನ್ ಲಾಲ್ ನಟನೆಯ ಚಿತ್ರಕ್ಕೆ ಕನ್ನಡ ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಪದೇ ಪದೆ ರಿಲೀಸ್ ಡೇಟ್ ಬದಲಿಸಿ ಕೊನೆಗೆ ಡಿಸೆಂಬರ್ 25ಕ್ಕೆ ತೆರೆಗೆ ತರುತ್ತಿದ್ದಾರೆ.
ಇನ್ನುಳಿದಂತೆ ಕನ್ನಡದ 'ಪೀಟು', 'ಸರಳ ಸುಬ್ಬರಾವ್' ತೆಲುಗಿನ 'ಮೊಗ್ಲಿ', 'ಶಂಬಾಲ', 'ಚಾಂಪಿಯನ್' ಅದೇ ರೀತಿ ತಮಿಳಿನ 'ಅಂಗಾಮಲ್', 'ಲಾಕ್‌ಡೌನ್', 'ವಾ ವಾಥಿಯಾರ್', 'ಲವ್ ಇನ್ಸುರೆನ್ಸ್ ಕಂಪೆನಿ', 'ರೆಟ್ಟ ತಲಾ' ಹಾಗೂ ಮಲಯಾಳಂನ 'ಕಲಾಮ್ ಕವಲ್', 'ಕಜುರಾಹೊ ಡ್ರೀಮ್ಸ್', 'ಭ ಭ ಬ' ಮತ್ತು 'ಸರ್ವಂ ಮಾಯ' ಸಿನಿಮಾಗಳು ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ. ಇನ್ನು ಬಾಲಿವುಡ್‌ನ 'ಕಿಸ್ ಕಿಸ್ ಕೊ ಪ್ಯಾರ್ ಕರೂನ್-2', 'ಇಕ್ಕಿಸ್' ಹಾಗೂ 'ತು ಮೆರಿ ಮೇನ್ ತೆರಾ ಮೈನ್ ತೆರಾ ತು ಮೇರಿ' ಚಿತ್ರಗಳು ಲಿಸ್ಟ್‌ನಲ್ಲಿದೆ.


Click it and Unblock the Notifications











