ಡೆವಿಲ್ VS 45 VS K47 : ಡಿಸೆಂಬರ್ ರಣರಂಗದಿಂದ ಯಾರಾದರೂ ಹಿಂದೆ ಸರಿಯುತ್ತಾರಾ ? ಮುಂದಡಿ ಇಡುತ್ತಾರಾ ?

ಸಾಮಾನ್ಯವಾಗಿ ಬೇರೆ ಭಾಷೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಸ್ಟಾರ್‌ಗಳ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುವುದು ಅಪರೂಪ. ಅಲ್ಲೊಮ್ಮೆ.. ಇಲ್ಲೊಮ್ಮೆ.. ಮಾತ್ರ ಜಿದ್ದಿಗೆ ಬಿದ್ದು ಕೆಲವರು ಈ ಹಿಂದೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಅಂದುಕೊಂಡ ಫಲಿತಾಂಶ ಸಿಕ್ಕಿದ್ದು ಕಡಿಮೆ. ಹೀಗಾಗಿಯೇ ಒಟ್ಟಿಗೆ ಸ್ಟಾರ್‌ಗಳ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಅಥವಾ ಒಂದು ದೊಡ್ಡ ಚಿತ್ರ ತೆರೆಗೆ ಬಂದ ಒಂದು ವಾರದ..

ಆಚೀಚೆ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡಿದರೆ ಆಗ ನಷ್ಟವಾಗುವುದು ಚಿತ್ರರಂಗಕ್ಕೆನೇ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಾರೆ. ಇನ್ನು ಒಂದು ವಾರದ ಅಂತರದಲ್ಲಿ ಅಥವಾ ಒಂದೇ ದಿನ ಸ್ಟಾರ್‌ಗಳ ಚಿತ್ರ ಬಿಡುಗಡೆಯಾದರೆ ಪ್ರೇಕ್ಷಕರು ಕೂಡ ಗೊಂದಲಕ್ಕೀಡಾಗುತ್ತಾರೆ. ಆದರೂ ಕೂಡ.. ಈ ಸಾಹಸವನ್ನು ಆಗಾಗ ಮಾಡಲಾಗುತ್ತೆ. ಇದಕ್ಕೆ ಸದ್ಯದ ಬೆಳವಣಿಗೆ ಉದಾಹರಣೆ.

December s High-Stakes Clash Devil vs 45 vs Sudeep s New Film

ಹೌದು, ದರ್ಶನ್ ಜೈಲಿನಲ್ಲಿದ್ದರೂ ಕೂಡ ಇಂದು (ಆಗಸ್ಟ್ 24) ದರ್ಶನ್ ಅವರ ಅಭಿಮಾನಿಗಳಲ್ಲೊಂದು ಖುಷಿ ಇದೆ. ಅದಕ್ಕೆ ಕಾರಣ ಒಂದು ''ಡೆವಿಲ್'' ಚಿತ್ರದ ಹಾಡಾದರೆ ಮತ್ತೊಂದು ಚಿತ್ರದ ಬಿಡುಗಡೆಯ ದಿನಾಂಕ.

ತಮ್ಮ ನೆಚ್ಚಿನ ನಾಯಕನ ಚಿತ್ರ ಈ ಡಿಸೆಂಬರ್ 12ಕ್ಕೆ ಬೆಳ್ಳಿತೆರೆಯಲ್ಲಿ ಧಗಧಗಿಸಲಿದೆ ಎಂಬ ಸುದ್ದಿ ಹೊರ ಬಂದ ಮರು ಕ್ಷಣದಿಂದ ದರ್ಶನ್ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ರಿಲೀಸ್ ಪೋಸ್ಟರ್ ಮತ್ತು ಹಾಡು ಶೇರ್ ಮಾಡಿಕೊಂಡು ತಮ್ಮ ಅಭಿಮಾನದ ಪ್ರದರ್ಶನ ಮಾಡುತ್ತಿದ್ದಾರೆ.

ಆದರೆ ಇದೇ ಸಮಯದಲ್ಲಿ ಈ ಕೊನೆ ಕ್ಷಣದ ಸರ್ಕಸ್ ಕನ್ನಡ ಚಿತ್ರರಂಗಕ್ಕೆ ಮುಳುವಾಗುತ್ತಾ ಎನ್ನುವ ಚಿಂತೆ ಕೂಡ ಈಗ ಗಾಂಧಿನಗರದಲ್ಲಿ ಹಲವರನ್ನು ಕಾಡುತ್ತಿದೆ.

ಹೌದು, ಅಸಲಿಗೆ ಇದೇ ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ ''45'' ತೆರೆಗೆ ಬರುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಈ ಕುರಿತು ಘೋ‍ಷಣೆಯನ್ನು ಕೂಡ ಮಾಡಲಾಗಿದೆ.

December s High-Stakes Clash Devil vs 45 vs Sudeep s New Film

ಮತ್ತೊಂದು ಕಡೆ ಕಿಚ್ಚ ಸುದೀಪ್ ತಮ್ಮ ''ಮ್ಯಾಕ್ಸ್'' ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆ ಮತ್ತೊಂದು ಚಿತ್ರವನ್ನು ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಸದ್ಯ ಭರದಿಂದ ನಡೆಯುತ್ತಿದ್ದು ಸುದೀಪ್ ಕೂಡ ತಮ್ಮ ಈ ಚಿತ್ರವನ್ನು ಇದೇ ಡಿಸೆಂಬರ್‌ನಲ್ಲಿ ತೆರೆಗೆ ತರುವ ಯೋಚನೆ ಮಾಡಿದ್ದಾರೆ. ಆ ಯೋಜನೆಯಡಿಯೇ ಚಿತ್ರೀಕರಣ ಮಾಡುತ್ತಿದ್ದಾರೆ.

ಈ ಹಿನ್ನೆಲೆ.. ಕೇವಲ ಒಂದೊಂದು ವಾರದ ಅಂತರದಲ್ಲಿ ಈ ಮೂರು ದೊಡ್ಡ ಚಿತ್ರಗಳು ಒಟ್ಟಿಗೆ ತೆರೆಗೆ ಬಂದರೆ ಹೇಗೆ ? ಎನ್ನುವ ಯಕ್ಷ ಪ್ರಶ್ನೆ ಸದ್ಯಕ್ಕೆ ಹಲವರಲ್ಲಿದೆ.ಒಂದು ವೇಳೆ ಮೂರು ವಾರದ ಅಂತರದಲ್ಲಿ ಈ ಮೂರು ಚಿತ್ರಗಳು ತೆರೆಗೆ ಬಂದರೆ ವ್ಯಾಪಾರ ವಹಿವಾಟಿನ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇದೆ. ''ಡೆವಿಲ್'' ಮತ್ತು ''45'' ಚಿತ್ರತಂಡ ಸದ್ಯ ಮುಂದಡಿ ಅಥವಾ ಹಿಂದಡಿ ಇಡುವುದು ಅನುಮಾನವಾದ ಹಿನ್ನೆಲೆ ಸುದೀಪ್ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಕ್ಕೂಡುತ್ತಾರಾ ? ಎನ್ನುವ ಕುತೂಹಲ ಕೂಡ ಈಗ ಮನೆ ಮಾಡಿದೆ.

ಇನ್ನುಳಿದಂತೆ ''ಡೆವಿಲ್'' ಚಿತ್ರಕ್ಕೆ ನಿರ್ದೇಶಕ ಮಿಲನಾ ಪ್ರಕಾಶ್ ಅವರೇ ನಿರ್ಮಾಣ ಮಾಡಿದ್ದಾರೆ. ''ಸರಿಗಮಪ'' ಸಂಸ್ಥೆ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಇನ್ನು ''45'' ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಡಿ ಈ ಚಿತ್ರ ತೆರೆಗೆ ಬರಲಿದೆ. ಸುದೀಪ್ ಚಿತ್ರವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.

More from Filmibeat

English summary
Three major films are set to collide this December. Get the details on the highly anticipated releases of 'Devil' on Dec 12 and '45' and Sudeep's new movie on Dec 25.
Read more about: star war sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X