For Quick Alerts
  ALLOW NOTIFICATIONS  
  For Daily Alerts

  ಫೆ.14 ನಂತರವಾದ್ರೂ ಪ್ರೇಮ ಮಳೆ ಶುರುವಾಗುತ್ತಾ?

  By Rajendra
  |

  ಆರ್ ಚಂದ್ರು ನಿರ್ದೇಶನದ 'ಬ್ರಹ್ಮ' ಯಶಸ್ಸಿನ ಟ್ರ್ಯಾಕ್ ನಲ್ಲಿದೆ. ಚಂದ್ರು ಯೋಚನೆ ಈಗೇನಿದ್ದರೂ ಮುಂದಿನ ಸಿನಿಮಾ ಬಗ್ಗೆ. ಶಿವಣ್ಣ ಜೊತೆಗಿನ 'ಬಾದ್ ಷಾ' ಸಿನಿಮಾಗೆ ಇನ್ನೂ ಟೈಮಿದೆ. ಸದ್ಯ ತನ್ನದೇ ಪ್ರೊಡಕ್ಷನ್ ನಲ್ಲಿ ಬರ್ತಿರೋ 'ಮಳೆ' ಸಿನಿಮಾಗೆ ತನ್ನ ಶಿಷ್ಯ ತೇಜಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ 'ಬ್ರಹ್ಮ'ನನ್ನ ತೆರೆಗೆ ತರೋ ಕಾರಣದಿಂದ ನಿಂತುಹೋಗಿತ್ತು.

  ಇಷ್ಟಕ್ಕೂ ಈ 'ಮಳೆ' ಸಿನಿಮಾ ಬಗ್ಗೆ ಬಹಳಾ ಮಾತ್ನಾಡಬೇಕು ಅನ್ನಿಸೋದು ಆ ಟೈಟಲ್ ಗೆ ಇರೋ ಪವರ್ನಿಂದಾನೇ. ಸ್ಯಾಂಡಲ್ ವುಡ್ ನಲ್ಲಿ ಮಳೆಗೆ ದೊಡ್ಡ ತಾಕತ್ತಿದೆ. ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದು ಮಳೆ. ಈಗ ಈ ಮಳೆ ಮತ್ತೆ ಟೈಟಲ್ ಆಗಿದೆ ಅಂದ್ರೆ ಅದರ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ['ಮಳೆ'ಯಲ್ಲಿ ಪ್ರೇಮ್ ಕೊಡೆ ಹಿಡಿಯೋದು ಯಾರಿಗೆ?]

  ಆದ್ರೆ ಮಳೆಗೆ ಹೀರೋಯಿನ್ ಆಯ್ಕೆ ಕೂಡ ಆಗಿರಲಿಲ್ಲ. ಈಗ ಆಗಿದಿಯೋ ಇಲ್ವೋ ಗೊತ್ತಿಲ್ಲ. ಆದರೆ ಯೂತ್ ಫುಲ್ ಲವ್ ಸ್ಟೋರಿಯಾಗಿರೋ 'ಮಳೆ' ಪ್ರೇಮಿಗಳ ದಿನದಿಂದ ಓಪನಿಂಗ್ ತೊಗೊಂಡ್ರೆ ಸೂಪರ್.

  ಇನ್ನು ಸ್ಟೈಲಿಷ್ ಸ್ಟಾರ್ ಆಗಿ ಪ್ರೇಮ್ ಕಾಣಿಸಿಕೊಳ್ತಿರೋ ಸಿನಿಮಾಗೆ ಪೂರಕ ಅನ್ನೋ ಹಾಗೆ 'ಫೇರ್ ಅಂಡ್ ಲವ್ಲೀ' ಶೂಟಿಂಗ್ ಮುಗೀತಿದೆ. 'ಮಸ್ತ್ ಮೊಹಬ್ಬತ್' ಶೂಟಿಂಗ್ ಕೂಡ ವೇಗವಾಗಿ ನಡೀತಿದೆ. ಮಳೆಗಾಲದ ಹತ್ತಿರಕ್ಕಾದ್ರೂ 'ಮಳೆ' ಶುರುವಾಗುತ್ತೆ ಅನ್ನೋ ಆಶಯ ಚಿತ್ರಪ್ರೇಮಿಗಳದ್ದು. (ಒನ್ಇಂಡಿಯಾ ಕನ್ನಡ)

  English summary
  Stylish Star Prem's 'Male' shooting stalled because of producer R Chandru busy with his directional 'Brahma' movie with Upendra. Now it is said that the movie may start shooting after 14th February. The heroine also not finalized yet for Male.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X