'ಚಕ್ರವರ್ತಿ' ಚಿತ್ರಕ್ಕೆ ಹೊಸ ನಾಯಕಿ ಬಂದರು.! ಯಾರವರು.?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಹೊಸ ಸಿನಿಮಾ 'ಚಕ್ರವರ್ತಿ' ಇಂದ ನಾಯಕಿ ಅಂಜಲಿ ಕಿಕ್ ಔಟ್ ಆಗಿರುವ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವು ಓದಿದ್ರಿ.
ಕಾಲಿವುಡ್ ಹಾಗೂ ಟಾಲಿವುಡ್ ನ ಖ್ಯಾತ ನಟಿ ಅಂಜಲಿ 'ಚಕ್ರವರ್ತಿ' ಚಿತ್ರದ ಮೊದಲ ದಿನದ ಶೂಟಿಂಗ್ ಗೆ ತಡವಾಗಿ ಬಂದಿದ್ದರು. ಅವರು ಪ್ರೊಫೆಶನಲ್ ಆರ್ಟಿಸ್ಟ್ ಅಲ್ಲ, ಅವರಿಗೆ ಟೈಮ್ ಸೆನ್ಸ್ ಇಲ್ಲ ಎಂಬ ಕಾರಣ ಕೊಟ್ಟು 'ಚಕ್ರವರ್ತಿ' ಚಿತ್ರತಂಡ ಗೇಟ್ ಪಾಸ್ ನೀಡಿತ್ತು. ['ಚಕ್ರವರ್ತಿ'ಯಿಂದ ನಾಯಕಿ ಅಂಜಲಿ ಕಿಕ್ ಔಟ್.! ಅಸಲಿ ಕಾರಣ ಬಹಿರಂಗ.!]
ನಟಿ ಅಂಜಲಿ ಜಾಗಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದ 'ಚಕ್ರವರ್ತಿ' ತಂಡಕ್ಕೆ ಕಡೆಗೂ 'ಕನ್ನಡತಿ' ಸಿಕ್ಕಿದ್ದಾರೆ. ಯಾರವರು? ಅಂತ ತಿಳಿಯುವ ಕುತೂಹಲ ನಿಮ್ಗೆ ಇದ್ಯಾ.? ಹಾಗಾದ್ರೆ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ, ನಿಮಗೆ ಗೊತ್ತಾಗಲಿದೆ....

ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ.!
'ಚಕ್ರವರ್ತಿ' ಚಿತ್ರದ ಹೊಸ ಹೀರೋಯಿನ್ ಯಾರು ಅಂತ ಗೊತ್ತಾದರೆ, 'ದಾಸ' ದರ್ಶನ್ ಅಭಿಮಾನಿಗಳು ಖುಷಿ ಪಡುವುದು ಖಂಡಿತ. [ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!]

ಆ ಹೀರೋಯಿನ್ 'ಇವರೇ'.!
'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಜೊತೆ ಡ್ಯುಯೆಟ್ ಹಾಡಲು ಸೆಲೆಕ್ಟ್ ಆಗಿರುವ ಬೆಡಗಿ ಬೇರಾರೂ ಅಲ್ಲ, ಕನ್ನಡದ ಹುಡುಗಿ ದೀಪಾ ಸನ್ನಿಧಿ. [ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಬಾಕ್ಸಾಫೀಸ್ 'ಚಕ್ರವರ್ತಿ'ಗೆ ಪೂಜೆ]

ಮತ್ತೆ ಒಂದಾದ 'ಸಾರಥಿ' ಜೋಡಿ.!
ಚಿಕ್ಕಮಗಳೂರು ಬೆಡಗಿ ದೀಪಾ ಸನ್ನಿಧಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದೇ 'ಸಾರಥಿ' ಚಿತ್ರದ ಮೂಲಕ. ಸೂಪರ್ ಹಿಟ್ ಆದ 'ಸಾರಥಿ' ಚಿತ್ರದಲ್ಲಿ ದರ್ಶನ್ ಜೊತೆಯಾಗಿದ್ದ ದೀಪಾ ಸನ್ನಿಧಿ ಈಗ 'ಚಕ್ರವರ್ತಿ' ಚಿತ್ರದಲ್ಲೂ ದರ್ಶನ್ ಜೊತೆ ಮರ ಸುತ್ತಲಿದ್ದಾರೆ.

'ಸ್ಟಾರ್ ಹೀರೋಯಿನ್' ದೀಪಾ ಸನ್ನಿಧಿ
'ಸಾರಥಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ, 'ಪರಮಾತ್ಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ, 'ಜಾನು' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ, 'ಸಕ್ಕರೆ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಮಿಂಚಿದ ದೀಪಾ ಸನ್ನಿಧಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಹೀರೋಯಿನ್ ಅಂತಲೇ ಖ್ಯಾತಿ.

ಕಾಲಿವುಡ್ ನಲ್ಲೂ ದೀಪಾ ಫೇಮಸ್
ಕಾಲಿವುಡ್ ನಲ್ಲಿ 'ಎನಕ್ಕುಳ್ ಒರುವನ್' ಹಾಗೂ 'ಯಾಚ್ಚನ್' ಸಿನಿಮಾಗಳಲ್ಲಿ ದೀಪಾ ಸನ್ನಿಧಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್.!
ಅತ್ತ ಕಾಲಿವುಡ್ ನಲ್ಲೇ ಬಿಜಿಯಾಗಿದ್ದ ದೀಪಾ ಸನ್ನಿಧಿ, ಈಗ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರುವುದು ಮತ್ತದೇ ದರ್ಶನ್ ಚಿತ್ರದ ಮೂಲಕ.

ದೀಪಾ ಸನ್ನಿಧಿ ಏನನ್ನುತ್ತಾರೆ.?
''ದರ್ಶನ್ ಸರ್ ಜೊತೆ ಮತ್ತೊಮ್ಮೆ ನಟಿಸುವ ಚಾನ್ಸ್ ಸಿಕ್ಕಿರುವುದು ತುಂಬಾ ಖುಷಿ ಆಗಿದೆ. 'ಸಾರಥಿ' ಸಿನಿಮಾ ಟೈಮ್ ನಲ್ಲಿ ನನಗೆ ಆಕ್ಟಿಂಗ್ ಗೊತ್ತಿರ್ಲಿಲ್ಲ. ಇಡೀ ತಂಡ ನನಗೆ ಸಪೋರ್ಟ್ ಮಾಡ್ತು. ಈಗ ಮತ್ತೆ ನನಗೆ ಅವಕಾಶ ನೀಡಿದ್ದಾರೆ. ಇದಕ್ಕಿಂತ ಖುಷಿ ಏನಿದೆ'' ಎನ್ನುತ್ತಾರೆ ದೀಪಾ ಸನ್ನಿಧಿ.

'ಚಕ್ರವರ್ತಿ' ಚಿತ್ರದ ಬಗ್ಗೆ.....
'ಚಕ್ರವರ್ತಿ' ಚಿತ್ರದ ಮೂಲಕ ಚಿಂತನ್ ಚೊಚ್ಚಲ ಬಾರಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ದರ್ಶನ್ ಆಪ್ತ ಅಣಜಿ ನಾಗರಾಜ್ 'ಚಕ್ರವರ್ತಿ' ನಿರ್ಮಾಪಕ. ಜೂನ್ 3 ರಿಂದ 'ಚಕ್ರವರ್ತಿ' ಶೂಟಿಂಗ್ ಶುರುವಾಗಲಿದೆ.


Click it and Unblock the Notifications











