For Quick Alerts
  ALLOW NOTIFICATIONS  
  For Daily Alerts

  ಎಲ್ಲಿದ್ದಾರೆ? ಹೇಗಿದ್ದಾರೆ? 'ಸಾರಥಿ'ಯ ಸುಂದರಿ ದೀಪಾ ಸನ್ನಿಧಿ

  By Pavithra
  |
  ಸಾರಥಿ ಸುಂದರಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ..? | Filmibeat Kannada

  ದೀಪಾ ಸನ್ನಿಧಿ 'ಸಾರಥಿ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಸುಂದರಿ. ಅಭಿನಯಿಸಿದ ಮೊದಲ ಚಿತ್ರದಲ್ಲೇ ಯಶಸ್ಸು ಗಿಟ್ಟಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಉಳಿದುಕೊಳ್ಳುವ ಎಲ್ಲಾ ಸೂಚನೆಯನ್ನು ಕೊಟ್ಟವರು.

  ಆರಂಭದಲ್ಲೇ ಸ್ಟಾರ್ ಜೊತೆಗೆ ತೆರೆ ಹಂಚಿಕೊಂಡ ದೀಪಾ ಸನ್ನಿಧಿ, ತಮ್ಮ ಎರಡನೇ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಭಿನಯ ಮಾಡಿದ್ರು. ಒಂದರ ನಂತರ ಒಂದಂತೆ ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಹೀಗೆ ದೀಪಾ ಕನ್ನಡ ಸ್ಟಾರ್ ನಟರ ಜೊತೆಯಲ್ಲಿಯೇ ಅವಕಾಶ ಗಿಟ್ಟಿಸಿಕೊಂಡರು.

  ಅನೀಶ್-ದೀಪಾ ಸನ್ನಿಧಿ ಜೋಡಿಯ 'ಮಾಂಜಾ' ಶುರು ಅನೀಶ್-ದೀಪಾ ಸನ್ನಿಧಿ ಜೋಡಿಯ 'ಮಾಂಜಾ' ಶುರು

  ಕಳೆದ ವರ್ಷ ಬಿಡುಗಡೆ ಆದ ಮಲ್ಟಿ ಸ್ಟಾರರ್ ಸಿನಿಮಾ 'ಚೌಕ'ದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ದೀಪಾ ಸನ್ನಿಧಿ ಮತ್ತೆ ಯಾವುದೇ ಚಿತ್ರದಲ್ಲಿ ಅಭಿನಯಿಸಿಲ್ಲ. ಅಷ್ಟೇ ಅಲ್ಲದೆ ಯಾವ ಸಿನಿಮಾಗೂ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿಲ್ಲ.ಹಾಗಾದರೆ ದೀಪಾ ಸನ್ನಿದಿ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಚಂದ್ರನ ಬಣ್ಣದ ಬೆಡಗಿ ದೀಪಾ ಸನ್ನಿಧಿ

  ಚಂದ್ರನ ಬಣ್ಣದ ಬೆಡಗಿ ದೀಪಾ ಸನ್ನಿಧಿ

  ದೀಪಾ ಸನ್ನಿಧಿ..ತನ್ನ ಸೌಂದರ್ಯ ಹಾಗೂ ಮುದ್ದಾದ ಮಾತಿನಿಂದಲೇ ಅಭಿಮಾನಿಗಳ ನಿದ್ದೆ ಕದ್ದ ನಟಿ. ಚಿತ್ರರಂಗಕ್ಕೆ ಬಂದ ಆರು ವರ್ಷಗಳಲ್ಲಿ ಸ್ಟಾರ್ ನಟರ ಜೊತೆಯಲ್ಲೇ ತೆರೆ ಹಂಚಿಕೊಂಡ ದೀಪಾ ಸನ್ನಿಧಿ ಸದ್ಯ ಒಂದು ವರ್ಷದಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

  ಇನ್ ಸ್ಟಾಗ್ರಾಂನಲ್ಲಿ ದೀಪಾ ಫೋಟೋಗಳು

  ಇನ್ ಸ್ಟಾಗ್ರಾಂನಲ್ಲಿ ದೀಪಾ ಫೋಟೋಗಳು

  ಯಾವುದೇ ಸಿನಿಮಾ ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ದೀಪಾ ಸನ್ನಿಧಿ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಗೊಂದು ಹೀಗೊಂದು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

  ಉತ್ತಮ ಕಥೆ ಮಾತ್ರ ಆಯ್ಕೆ

  ಉತ್ತಮ ಕಥೆ ಮಾತ್ರ ಆಯ್ಕೆ

  'ಚೌಕ' ಸಿನಿಮಾ ನಂತರ ನಟಿ ದೀಪಾ ಸನ್ನಿಧಿ ಯಾವುದೇ ಚಿತ್ರದಲ್ಲಿ ಅಭಿನಯ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹಾಗಂತ ಅವಕಾಶಗಳು ಬಂದಿಲ್ಲ ಅಂತ ಅಲ್ಲ. ಯಾಕೆಂದರೆ ಸಾಕಷ್ಟು ಕಥೆಗಳನ್ನು ಕೇಳಿರುವ ದೀಪಾ ಸನ್ನಿಧಿ ಉತ್ತಮ ಪಾತ್ರ ಹಾಗೂ ಕಥೆಗಾಗಿ ಕಾದಿದ್ದಾರಂತೆ.

  ವಿದ್ಯಾಭ್ಯಾಸದತ್ತ ಗಮನ

  ವಿದ್ಯಾಭ್ಯಾಸದತ್ತ ಗಮನ

  ಚಿತ್ರೀಕರಣವಿಲ್ಲದೆ ಬಿಡುವಿರುವ ದೀಪಾ ಸನ್ನಿಧಿ ತಮ್ಮ ಸಮಯವನ್ನು ಹಾಳು ಮಾಡುತ್ತಿಲ್ಲ. ಅರ್ಧಕ್ಕೆ ಬಿಟ್ಟ ವಿದ್ಯಾಭ್ಯಾಸವನ್ನು ಸಂಪೂರ್ಣ ಮಾಡುತ್ತಿದ್ದಾರೆ. ಆಗಾಗ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

  English summary
  Kannada actress Deepa Sannidhi has been busy her higher studies. So recently Deepa Sannidhi have not been accepted any new movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X