ಕೆಆರ್‌ಜಿ ಕಾರ್ತಿಕ್, ಯೋಗಿ ಕಿಡ್ನಾಪ್; ಮಂಗಳ ಗ್ರಹದಲ್ಲೂ ಸಿನಿಮಾ ಬಿಡುಗಡೆಗೆ ಪಟ್ಟು!

ಟೈಟಲ್ ನೋಡಿ ಕನ್‌ಫ್ಯೂಸ್ ಆಗಬೇಡಿ. ಈ ವಾರ ಕನ್ನಡದ 5 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಅದರಲ್ಲಿ ದೀಪಕ್ ಸುಬ್ರಮಣ್ಯ ನಟನೆಯ 'ಮಿಸ್ಟರ್ ರಾಣಿ' ಸಿನಿಮಾ ಕೂಡ ಒಂದು. ದೀಪಕ್ ಲೇಡಿ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಇದು. ಕಿರುತೆರೆಯ 'ಲಕ್ಷ್ಮಿನಿವಾಸ' ಧಾರಾವಾಹಿಯಲ್ಲಿ ಸೈಕೊ ಜಯಂತ್ ಪಾತ್ರದಲ್ಲಿ ನಟಿಸಿ ದೀಪಕ್ ಗಮನ ಸೆಳೆದಿದ್ದಾರೆ.

ಮಧುಚಂದ್ರ ಎಂಬುವವರು 'ಮಿಸ್ಟರ್ ರಾಣಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ. ಚಿತ್ರದಲ್ಲಿ 40 ಲೇಡಿ ಗೆಟಪ್‌ಗಳಲ್ಲಿ ದೀಪಕ್ ಕಾಣಿಸಿಕೊಂಡಿದ್ದಾರೆ. ಹೀರೊ ಆಗಬೇಕು ಎನ್ನುವ ಕನಸು ಹೊತ್ತು ಚಿತ್ರರಂಗಕ್ಕೆ ಬರುವ ಯುವಕನೊಬ್ಬ ಅನಿವಾರ್ಯ ಕಾರಣಗಳಿಂದ ಲೇಡಿ ಗೆಟಪ್ ಹಾಕಿ ಹೀರೊಯಿನ್ ಆಗುತ್ತಾನೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ.

Deepak Subramanya s Mr Rani Funny promotional video goes viral

ಸದ್ಯ ಒಂದು ಫನ್ನಿ ವೀಡಿಯೋ ಮಾಡಿ ಚಿತ್ರತಂಡ ಚಿತ್ರದ ಪ್ರಮೋಷನ್ ಮಾಡುತ್ತಿದೆ. ಮಿಸ್ಟರ್ ರಾಣಿ ಚಿತ್ರಕ್ಕೆ ಮಂಗಳ ಗ್ರಹದಲ್ಲೂ ಬೇಡಿಕೆಯಿದೆ. ಅಲ್ಲಿನ ಏಲಿಯನ್‌ಗಳು ಸಿನಿಮಾ ನೋಡಬೇಕು ಎಂದು ಕಾಯುತ್ತಿವೆ. ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಹಾಗೂ ಯೋಗಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ. 'ಮಿಸ್ಟರ್ ರಾಣಿ' ಚಿತ್ರವನ್ನು ತಮ್ಮ ಗ್ರಹದಲ್ಲಿ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸುಳ್ಳು ಹೇಳಿ ಇಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಫನ್ನಿ ವೀಡಿಯೋ ಡಿಸೈನ್ ಮಾಡಿದ್ದಾರೆ.

ಈ ವಾರ ರಾಜ್ಯಾದ್ಯಂತ 'ಮಿಸ್ಟರ್ ರಾಣಿ' ಸಿನಿಮಾ ತೆರೆಗೆ ಬರಲಿದೆ. ಕ್ರೌಡ್ ಫಂಡಿಂಗ್ ಮೂಲಕ ಚಿತ್ರ ನಿರ್ಮಾಣಕ್ಕೆ ಹಣ ಹೊಂದಿಸಲಾಗಿದೆ. 180 ಜನ ಚಿತ್ರಕ್ಕೆ ಹಣ ಹೂಡಿದ್ದಾರೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ದೀಪಕ್ ಜೊತೆಗೆ ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪಾ ಪ್ರಭಾಕರ್, ಆನಂದ್ ನೀನಾಸಂ, ಲಕ್ಷ್ಮಿ ಕಾರಂತ್ ಚಿತ್ರದಲ್ಲಿ ನಟಿಸಿದ್ದಾರೆ.

ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಮಿಸ್ಟರ್ ರಾಣಿ' ಸಿನಿಮಾ ನಿರ್ಮಾಣವಾಗಿದೆ. ರವೀಂದ್ರನಾಥ್ ಛಾಯಾಗ್ರಹಣ ಹಾಗೂ ಜುಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳ ವಿತರಣೆ ಮಾಡುತ್ತಿದೆ. ಹೊಸ ಪ್ರತಿಭೆಗಳ ವಿಭಿನ್ನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದೆ. ಕಳೆದ 15ಕ್ಕೂ ಅಧಿಕ ಚಿತ್ರಗಳನ್ನು ಸಂಸ್ಥೆ ಬಿಡುಗಡೆ ಮಾಡಿತ್ತು.

ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿತ್ತು. ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಕೆಲ ಚಿತ್ರಗಳ ನಿರ್ಮಾಣಕ್ಕೂ ಸಂಸ್ಥೆ ಕೈ ಹಾಕಿದೆ. 'ಉತ್ತರಕಾಂಡ', 'ಎಕ್ಕ', 'ಮಾಂಗೋ ಪಚ್ಚ' ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುದೀಪ್ ನಿರ್ದೇಶಿಸಿ ನಟಿಸುವ ಚಿತ್ರಕ್ಕೂ ಹಣ ಹೂಡಲು ಸಂಸ್ಥೆ ಮುಂದಾಗಿದೆ. ಇದೀಗ ಮಿಸ್ಟರ್ ರಾಣಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಮುಂದಾಗಿದೆ. ಚಿತ್ರಕ್ಕಾಗಿ ಭರ್ಜರಿ ಪ್ರಚಾರ ಸಹ ಮಾಡಲಾಗುತ್ತಿದೆ. ಕಿರುತೆರೆಯಲ್ಲಿ ಜಯಂತ್ ಪಾತ್ರ ಮೆಚ್ಚಿರುವ ಕೆಲವರು ಸಿನಿಮಾ ನೋಡಲು ಕಾಯುತ್ತಿದ್ದಾರೆ.

More from Filmibeat

English summary
KRG studios bags the distribution rights for Mr Rani
Read more about: sandalwood kannada tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X