For Quick Alerts
  ALLOW NOTIFICATIONS  
  For Daily Alerts

  ದೀಪಾವಳಿ ಹಬ್ಬದ ಪ್ರಯುಕ್ತ: ಸ್ಟಾರ್ ನಟಿಯರಿಂದ ಸ್ಪೆಷಲ್ ಶುಭಾಶಯ

  |

  ಹಬ್ಬಗಳು ಅಂದ್ರೆ ಸಿನಿಮಾ ಇಂಡಸ್ಟ್ರಿಗೆ ಒಂಥರಾ ವಿಶೇಷ. ಹಬ್ಬದ ಪ್ರಯುಕ್ತ ಸಿನಿಮಾ ಆರಂಭಿಸುವುದು, ಪೋಸ್ಟರ್, ಟೀಸರ್, ಟ್ರೈಲರ್ ಬಿಡುಗಡೆ ಮಾಡುವುದು, ಸಿನಿಮಾ ರಿಲೀಸ್ ಮಾಡುವುದು ಸಂಪ್ರದಾಯ.

  ಈಗ ದೀಪಾವಳಿ ಸಂಭ್ರಮವೂ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ. ಬೆಳಕಿನ ಹಬ್ಬದ ಪ್ರಯುಕ್ತ ಕನ್ನಡ ನಟಿಯರು ಸ್ಟೈಲಿಶ್ ಹಾಗೂ ಸಂಪ್ರದಾಯ ಕಾಸ್ಟ್ಯೂಮ್ ತೊಟ್ಟು ಮಿಂಚಿದ್ದಾರೆ. ಕೆಲವರು ಮನೆಯಲ್ಲಿ ಹಬ್ಬದ ಮಾಡಿರುವ ಫೋಟೋ ಕೂಡ ಶೇರ್ ಮಾಡಿದ್ದಾರೆ. ಹಾಗಿದ್ರೆ, ದೀಪಾವಳಿ ಹಬ್ಬದ ಸಡಗರ ಯಾರ ಮನೆಯಲ್ಲಿ ಹೇಗಿದೆ? ಮುಂದೆ ಓದಿ...

  ಪಟಾಕಿ ಸಿಡಿಸದೆ ಸಂಭ್ರಮಿಸಿ

  ಪಟಾಕಿ ಸಿಡಿಸದೆ ಸಂಭ್ರಮಿಸಿ

  ಕನ್ನಡದ ಯುವನಟಿ ಆಶಿಕಾ ರಂಗನಾಥ್ ಅವರು ದೀಪಾವಳಿ ಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ಪಟಾಕಿ ಸಿಡಿಸದೆ ಹಬ್ಬ ಮಾಡಿ, ಪರಿಸರ ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಪವನ್ ಒಡೆಯರ್ ನಿರ್ದೇಶನದ 'ರೇಮೊ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಭಟ್ಟರ 'ದನಕಾಯೋನು' ಸಿನಿಮಾ ನಟಿ ಜೊತೆ ಹಾರ್ದಿಕ್ ಪಾಂಡ್ಯ ಮದ್ವೆ!ಭಟ್ಟರ 'ದನಕಾಯೋನು' ಸಿನಿಮಾ ನಟಿ ಜೊತೆ ಹಾರ್ದಿಕ್ ಪಾಂಡ್ಯ ಮದ್ವೆ!

  ದೀಪವು ನಿನ್ನದೇ, ಗಾಳಿಯು ನಿನ್ನದೇ⁣

  ದೀಪವು ನಿನ್ನದೇ, ಗಾಳಿಯು ನಿನ್ನದೇ⁣

  ''ದೀಪವು ನಿನ್ನದೇ, ಗಾಳಿಯು ನಿನ್ನದೇ⁣ ಆರದಿರಲಿ ಬೆಳಕು... ⁣ದೀಪದಂತೆ ನಿಮ್ಮ ಬದುಕು ಯಾವಾಗಲು ಹೊಳೆಯುತ್ತಿರಲೆಂದು ಹಾರೈಸುತ... ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು'' ಎಂದು ನಟಿ ಅಮೂಲ್ಯ ವಿಶ್ ಮಾಡಿದ್ದಾರೆ. ಅಮೂಲ್ಯ ಅವರ ಕಂಬ್ಯಾಕ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  ಅದಿತಿ ಪ್ರಭುದೇವ

  ಅದಿತಿ ಪ್ರಭುದೇವ

  ಸದ್ಯ, ಕನ್ನಡ ಇಂಡಸ್ಟ್ರಿಯಲ್ಲಿ ಹೆಚ್ಚು ಬ್ಯುಸಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು ದೀಪಾವಳಿ ಹಬ್ಬಕ್ಕೆ ವಿಶ್ ಮಾಡಿದರು. ''ದೀಪಾವಳಿ ಹಬ್ಬದ ಶುಭಾಶಯಗಳು'' ಎಂದು ಸೀರೆ ತೊಟ್ಟಿರುವ ಫೋಟೋ ಶೇರ್ ಮಾಡಿದ್ದಾರೆ.

  ಮಲೆಯಾಳಂ ಸಂದರ್ಶನದಲ್ಲಿ ಕನ್ನಡ ಹಾಡು ಹಾಡಿದ ನಿತ್ಯಾ ಮೆನನ್ಮಲೆಯಾಳಂ ಸಂದರ್ಶನದಲ್ಲಿ ಕನ್ನಡ ಹಾಡು ಹಾಡಿದ ನಿತ್ಯಾ ಮೆನನ್

  ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ

  'ಸುರಕ್ಷಿತವಾಗಿ ಹಬ್ಬವನ್ನ ಆಚರಿಸಿ' ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ಪೊಗರು ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ, ಪರಭಾಷೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.

  ಮೇಘನಾ ಗಾಂವ್ಕರ್

  ಮೇಘನಾ ಗಾಂವ್ಕರ್

  ಕನ್ನಡ ನಟಿ ಮೇಘನಾ ಗಾಂವ್ಕರ್ ಅವರು ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಆ ಸಂಭ್ರಮದ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  English summary
  Deepavali Special: Rashmika mandanna, Amulya, Aditi prabhudeva, ashika ranganath wished for festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X