ದರ್ಶನ್ ಮತ್ತು ಧನ್ವೀರ್ ಗೌಡ ಲಿಪ್ ಲಾಕ್ ವಿಡಿಯೋ ವೈರಲ್ ; ಕೆರಳಿ ಕೆಂಡವಾದ ಫ್ಯಾನ್ಸ್...!

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಪಡಬಾರದ ಕಷ್ಟವನ್ನೆಲ್ಲ ಪಡುತ್ತಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿ ಅಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ.

ಇನ್ನೂ ಇತ್ತ ದರ್ಶನ್ ಅವರಂತಹ ನಂಬರ್ 1 ಹೀರೋ ಸುಮ್ಮನೆ ಕೂತರೆ ಅವರಿಗೆ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ನಷ್ಟ ಗ್ಯಾರೆಂಟಿ ಎಂದು ಇವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್ ಜೈಲಿನಲ್ಲಿ ಆ ಕಡೆ ಏಕಾಂಗಿಯಾಗಿದ್ದರೆ ಈ ಕಡೆ ಅವರದ್ದೇ ಸೆಲೆಬ್ರಿಟಿಗಳು ಬೆಳ್ಳಿಪರದೆಯ ಮೇಲೆ ಕರಿಯ ಚಿತ್ರವನ್ನು ಇನ್ನೊಮ್ಮೆ ಕಣ್ತುಂಬಿಕೊಂಡು ಕೇಕೆ ಹೊಡೆಯಲು ಸಿದ್ಧವಾಗಿದ್ದಾರೆ. ಆದರೆ ಇದರ ನಡುವೆ ದರ್ಶನ್ ಮತ್ತು ಅವರ ಆಪ್ತ ಧನ್ವೀರ್ ಅವರ ಮಾನಹರಣ ಮಾಡುವ ಕೆಲಸವನ್ನೂ ಕೂಡ ಮಾಡಲಾಗುತ್ತಿದೆ. ದರ್ಶನ್ ಮತ್ತು ಧನ್ವೀರ್ ಅವರ ಡೀಪ್ ಫೇಕ್ ವಿಡಿಯೋ ಒಂದು ವೈರಲ್ ಆಗಿದೆ.

deepfake-video-of-darshan-and-dhanveer-gowda-goes-viral-on-social-media

ಹೌದು, ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ಇದೀಗ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯುತ್ತಮ ಗುಣಮಟ್ಟವನ್ನ ಹೊಂದಿರುವ ಈ ನಕಲಿ ವಿಡಿಯೋಗಳಿಂದ ಅನೇಕರು ಹೈರಾಣಾಗಿದ್ದಾರೆ. ದೂರು ಕೊಟ್ಟು ಸೆಲೆಬ್ರಿಟಿಗಳು ಸುಸ್ತಾಗಿದ್ದಾರೆ. ಆದರೂ ಇದಕ್ಕೆ ಕಡಿವಾಣ ಬಿದ್ದಿಲ್ಲ.

ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ದರ್ಶನ್ ಮತ್ತು ಧನ್ವೀರ್ ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಅಕ್ಕ-ಪಕ್ಕ ಕುಂತುಕೊಂಡಾಗ ತೆಗೆಯಲಾಗಿದ್ದ ಭಾವ ಚಿತ್ರ ಮತ್ತು ವಿಡಿಯೋಗಳನ್ನು ಕೆಲ ಕಿಡಿಗೇಡಿಗಳು ದುರುಪಯೋಗ ಮಾಡಿಕೊಂಡಿದ್ದಾರೆ. ಆರ್ಟಿಫಿಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ಎಡಿಟ್ ಮಾಡಿದ್ದಾರೆ.

deepfake-video-of-darshan-and-dhanveer-gowda-goes-viral-on-social-media

ಸಹಜವಾಗಿ ದರ್ಶನ್ ಮತ್ತು ಧನ್ವೀರ್ ಅವರ ಈ ವಿಡಿಯೋ ಎರಡು ಕಡೆಯ ಅಭಿಮಾನಿಗಳನ್ನು ಕೆರಳಿಸಿದೆ. ಈ ವಿಡಿಯೋ ಮಾಡಿದವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ದರ್ಶನ್ ಮತ್ತು ಧನ್ವೀರ್ ಅವರ ಅಭಿಮಾನಿ ಬಳಗ ಒತ್ತಾಯವನ್ನು ಮಾಡುತ್ತಿದೆ. ಈ ತರ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುವರ ಹೆಡೆಮುರಿ ಕಟ್ಟಬೇಕು ಎನ್ನುವ ಮಾತು ಕೂಡ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ವೈರಲ್ ಆದ ವಿಡಿಯೋ ಇಬ್ಬರ ಹೆಸರು ಹಾಳು ಮಾಡುವ ದೃಷ್ಟಿಯಿಂದ ಮಾಡಲಾದ ಕಾರಣ ಆ ವಿಡಿಯೋವನ್ನೂ ನಾವು ಇಲ್ಲಿ ಹಾಕಿಲ್ಲ ಅನ್ನುವುದು ನಿಮ್ಮ ಗಮನಕ್ಕಿರಲಿ.

ಅಂದ್ಹಾಗೇ ಡೀಪ್‌ ಫೇಕ್‌ ಟೆಕ್ನಾಲಜಿ ಕೃತಕ ಬುದ್ಧಿಮತ್ತೆಯ ಒಂದು ಭಾಗ. ಅಲ್ಗಾರಿದಮ್‌ಗಳ ಮೂಲಕ ಇನ್ನೊಬ್ಬರ ಮುಖಭಾವಗಳನ್ನು ಆಳಪದರಗಳಲ್ಲಿ ವಿಶ್ಲೇಷಿಸಿ, ನಕಲಿ ರಚನೆಗಳನ್ನು ಇದು ಮುಂದಿಡುತ್ತದೆ. ವ್ಯಕ್ತಿಯ ಮೂಲ ಮುಖ ಮತ್ತು ಧ್ವನಿಯನ್ನು ಬದಲಿಸಿ, ನೈಜ ಎಂಬಂಥ ವಿಡಿಯೋ ಮತ್ತು ಆಡಿಯೋಗಳನ್ನು ರಚಿಸುವ ಸಾಮರ್ಥ್ಯ ಇದಕ್ಕಿದೆ. ಮನರಂಜನೆ ಮತ್ತು ವಿಡಂಬನಾತ್ಮಕ ವಿಷಯ ರಚನೆಗಳಿಗೆ ಹುಟ್ಟಿಕೊಂಡ ಡೀಪ್‌ ಫೇಕ್‌, ಈಗ ತಪ್ಪು ಮಾಹಿತಿ ರವಾನೆ, ಚಾರಿತ್ರ್ಯ ಹರಣ, ರಾಜಕೀಯ ಅಪಪ್ರಚಾರ, ಬ್ಲ್ಯಾಕ್‌ಮೇಲ್‌ ವಿಚಾರಗಳಿಗೆ ದುರ್ಬಳಕೆಯಾಗುತ್ತಿದೆ.

deepfake-video-of-darshan-and-dhanveer-gowda-goes-viral-on-social-media

ಇನ್ನು ಡೀಪ್‌ ಫೇಕ್‌ಗಳನ್ನು ಹೆಚ್ಚಾಗಿ ಅಶ್ಲೀಲ ವಿಷಯವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಮಹಿಳೆಯರನ್ನು ಡಿಜಿಟಲ್ ಆಗಿ ವಿವಸ್ತ್ರಗೊಳಿಸಿ ಕಾಣಿಸುವ ಫೋಟೋ ಅಪ್ಲಿಕೇಶನ್‌ಗಳು ಯುರೋಪ್ ಮತ್ತು ಯುಎಸ್ ಸೇರಿದಂತೆ ಪ್ರಪಂಚದಾದ್ಯಂತ "ಸೆಕ್ಸ್‌ಟಾರ್ಶನ್" ರಾಕೆಟ್‌ಗಳನ್ನು ಉತ್ತೇಜಿಸಿವೆ. ಈ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರು ಇತರರನ್ನು ಡಿಜಿಟಲ್‌ ಆಗಿ ನಗ್ನಗೊಳಿಸುವುದು, ಅಥವಾ ಲೈಂಗಿಕವಾಗಿ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನುಸುವುದು ಸಾಧ್ಯವಿದೆ. ಮಹಿಳೆಯರೇ ಈ ಆಧುನಿಕ ಕುಖ್ಯಾತ AI ಪರಿಕರಗಳು ಮತ್ತು ಅಪ್ಲಿಕೇಶನ್‌ಗಳ ಗುರಿಯಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X