'ನಾಗಿಣಿ' ದೀಪಿಕಾ ದಾಸ್ ಜೊತೆ ಅಭಿನಯಿಸೋ ಅವಕಾಶ
'ನಾಗಿಣಿ' ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಧಾರಾವಾಹಿ 'ನಾಗಿಣಿ'. ಆರಂಭದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿರುವ ಸೀರಿಯಲ್. ಧಾರಾವಾಹಿ ಕಥೆ ಮಾತ್ರವಲ್ಲದೆ ಕಲಾವಿದರ ಬಗ್ಗೆಗೂ ಪ್ರಶಂಸೆಗಳು ಕೇಳಿಬಂದಿತ್ತು.
ಧಾರಾವಾಹಿಗಾಗಿ ಸೀರಿಯಲ್ ನ ನಾಯಕ ನಟಿ ದೀಪಿಕಾ ದಾಸ್ ಬೋಲ್ಡ್ ಆಗಿ ಫೋಟೋ ಶೂಟ್ ಕೂಡ ಮಾಡಿಸಿದ್ದರು. ಈ ಬಗ್ಗೆಯೂ ಸಾಕಷ್ಟು ಸುದ್ದಿ ಆಗಿತ್ತು. ತೆರೆ ಮೇಲೆ ನಾಗಿಣಿ ನೋಡಿ ಖುಷಿ ಪಟ್ಟಿರುವ ಪ್ರೇಕ್ಷಕರಿಗೆ ಈಗ 'ನಾಗಿಣಿ' ಜೊತೆ ಅಭಿನಯ ಮಾಡುವ ಅವಕಾಶ ಸಿಗುತ್ತಿದೆ.
ಹೌದು ನಾಗಿಣಿ ದೀಪಿಕಾ ದಾಸ್ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಆ ಸಿನಿಮಾದಲ್ಲಿ ದೀಪಿಕಾ ಜೊತೆ ಆಕ್ಟ್ ಮಾಡಲು ನಿಮಗೂ ಚಾನ್ಸ್ ಸಿಗುತ್ತೆ. ಹಾಗಾದರೆ ಆ ಸಿನಿಮಾ ಯಾವುದು? ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳುವುದು ಹೇಗೆ? ಈ ಎಲ್ಲಾ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಸಿನಿಮಾ ನಾಯಕಿಯಾಗಿ ದೀಪಿಕಾ ದಾಸ್
'ನಾಗಿಣಿ' ಧಾರಾವಾಹಿಯ ನಟಿ ದೀಪಿಕಾ ದಾಸ್ ಸಿನಿಮಾದ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ. ಸೆಟ್ಟೇರಲು ಸಿದ್ದವಾಗಿರುವ 'ಚೌಕಟ್ಟು' ಎನ್ನುವ ಚಿತ್ರದಲ್ಲಿ ದೀಪಿಕಾ ಆಕ್ಟ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ನೀವು ಕೂಡ ಅಭಿನಯ ಮಾಡಬಹುದು
'ಚೌಕಟ್ಟು' ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾ ಆಗಿದ್ದು ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಇರಲಿವೆಯಂತೆ. ದೀಪಿಕಾ ದಾಸ್ ಹಾಗೂ ನಾಗಿಣಿ ಧಾರಾವಾಹಿಯಲ್ಲಿ ರುದ್ರನ ಪಾತ್ರ ನಿರ್ವಹಿಸುತ್ತಿರುವ ಅರುಣ್ ಕುಮಾರ್ ಒಂದೊಂದು ಕ್ಯಾರೆಕ್ಟರ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ವಾರ ನಡೆಯಲಿ ಆಡಿಷನ್
ಇದೇ ತಿಂಗಳು ಅಂದರೆ ಸೆಪ್ಟಂಬರ್ 9 ರಂದು ಚೌಕಟ್ಟು ಸಿನಿಮಾದ ಕಲಾವಿದರಿಗಾಗಿ ಆಡಿಷನ್ ನಡೆಯುತ್ತಿದ್ದು ಆಸಕ್ತಿ ಇರುವವರು ಭಾಗವಹಿಸಬಹುದಾಗಿದೆ. ಆಡಿಷನ್ ನಲ್ಲಿ ಆಯ್ಕೆ ಆದರೆ ನಾಗಿಣಿ ದೀಪಿಕಾ ದಾಸ್ ಜೊತೆ ಅಭಿನಯ ಮಾಡಬಹುದಾಗಿದೆ.

ಚಿತ್ರೀಕರಣಕ್ಕೆ ಸಿದ್ದತೆ
ಚೌಕಟ್ಟು ಸಿನಿಮಾವನ್ನು ಸಂದೀಪ್ ಕೊಟೆಯಾನ್ ನಿರ್ದೇಶನ ಮಾಡುತ್ತಿದ್ದು ಲಿ ಕೆ ಹೆಚ್ ದಾಸ್ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಮಂಜುನಾಥ್ ನಿರ್ಮಾಣದ ಸಿನಿಮಾಗೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್ 19 ರಂದು ಚಿತ್ರದ ಮುಹೂರ್ತ ಮಾಡಿ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ.


Click it and Unblock the Notifications











