ದುಬೈ ಟ್ರಿಪ್‌ನಲ್ಲಿ ಕ್ರಿಸ್ ಗೇಲ್ ಜತೆಗಿನ ಫೋಟೊ ಹಂಚಿಕೊಂಡ ದೀಪಿಕಾ ದಾಸ್; ಕಾಮೆಂಟ್ ಆಫ್ ಮಾಡಿದ್ದೇಕೆ?

2014ರಲ್ಲಿ ಬಿಡುಗಡೆಗೊಂಡ ಸ್ಯಾಮುವೆಲ್ ಟೋನಿ ನಿರ್ದೇಶನದ ದೂದ್ ಸಾಗರ್ ಸಿನಿಮಾ ಮೂಲಕ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ದೀಪಿಕಾ ದಾಸ್ ಬಳಿಕ ತೆಲುಗಿ ಏ ಮನಸೇ ಚಿತ್ರದಲ್ಲಿಯೂ ನಟಿಸಿದ್ದರು. ಹೀಗೆ ಕೆಲ ಚಿತ್ರಗಳಲ್ಲಿ ಬಣ್ಣ ಹಚ್ಚುವ ಅವಕಾಶ ಸಿಕ್ಕರೂ ಸಹ ದೀಪಿಕಾ ದಾಸ್ ಹೆಚ್ಚು ಖ್ಯಾತಿಯನ್ನು ಪಡೆದದ್ದು ನಾಗಿಣಿ ಸೀರಿಯಲ್ ಮೂಲಕ.

ಈ ಧಾರಾವಾಹಿಯಲ್ಲಿ ನಾಗಿಣಿ ಪಾತ್ರದಲ್ಲಿ ಮಿಂಚಿದ್ದ ದೀಪಿಕಾ ದಾಸ್ ಜನಪ್ರಿಯತೆ ಗಳಿಸಿದ್ದರು. ಹೀಗೆ ನಾಗಿಣಿ ಧಾರಾವಾಹಿಯಲ್ಲಿ ಮಿಂಚಿ ಖ್ಯಾತಿಯನ್ನು ಗಳಿಸಿದ ಕಾರಣದಿಂದಾಗಿಯೇ ದೀಪಿಕಾ ದಾಸ್ ಕನ್ನಡದ ಜನಪ್ರಿಯ ಮನರಂಜನಾ ರಿಯಾಲಿಟಿ ಶೋ ಬಿಗ್ ಬಾಸ್‌ಗೂ ಸಹ ಸ್ಪರ್ಧಿಯಾಗಿ ಎಂಟ್ರಿ ಕೊಡುವ ಅವಕಾಶವನ್ನು ಎರಡೆರಡು ಬಾರಿ ಗಿಟ್ಟಿಸಿಕೊಂಡಿದ್ದರು.

ಕಳೆದ ವರ್ಷ ನಡೆದ ಒಂಬತ್ತನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಸಹ ಸ್ಪರ್ಧಿಯಾಗಿ ಭಾಗವಹಿಸಿದ್ದ ದೀಪಿಕಾ ದಾಸ್ ಸದ್ಯ ವಿದೇಶಿ ಪ್ರವಾಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹೌದು, ದುಬೈ ಪ್ರವಾಸ ಕೈಗೊಂಡಿರುವ ದೀಪಿಕಾ ದಾಸ್ ತಮ್ಮ ಪ್ರವಾಸದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಪ್ರವಾಸದಲ್ಲಿ ಕ್ರಿಸ್ ಗೇಲ್ ಅವರನ್ನೂ ಸಹ ಭೇಟಿಯಾಗಿರುವ ದೀಪಿಕಾ ದಾಸ್ ಗೇಲ್ ಜತೆಗೆ ಫೋಟೊಗೆ ಪೋಸ್ ಕೊಟ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೊಗಳನ್ನೂ ಸಹ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳು ವೈರಲ್ ಆಗಿವೆ.

ಅನಿರೀಕ್ಷಿತ ಭೇಟಿಯಂತೆ

ಅನಿರೀಕ್ಷಿತ ಭೇಟಿಯಂತೆ

ದೀಪಿಕಾ ದಾಸ್ ಕ್ರಿಸ್ ಗೇಲ್ ಜತೆ ಕ್ಲಿಕ್ಕಿಸಿಕೊಂಡ ಮೂರು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು 'ದಟ್ಸ್ ಎ ಗೇಲ್ ಮೂಮೆಂಟ್. ಅತಿ ಅನಿರೀಕ್ಷಿತ ಭೇಟಿ, ನಮ್ಮ ಆರ್‌ಸಿಬಿ ದಿನಗಳು ನೆನಪಾದವು, ಆರ್‌ಸಿಬಿ ಫ್ಯಾನ್ ಗರ್ಲ್' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದೀಪಿಕಾ ದಾಸ್ ದುಬೈ ಪ್ರವಾಸದಲ್ಲಿ ಇರುವ ವೇಳೆ ಗೇಲ್ ಅನಿರೀಕ್ಷಿತವಾಗಿ ಸಿಕ್ಕರು ಎಂಬುದನ್ನು ತಿಳಿಸಿದ್ದು ಫೋಟೊ ನೋಡಿದ ಕೂಡಲೇ ಭೇಟಿ ಹಿಂದಿನ ಕಥೆ ಏನು ಎಂದು ಕೇಳುವವರಿಗೆ ಮೊದಲೇ ಉತ್ತರವನ್ನು ನೀಡಿಬಿಟ್ಟಿದ್ದಾರೆ.

ಕಾಮೆಂಟ್ ಆಫ್ ಮಾಡಿದ್ದೇಕೆ?

ಕಾಮೆಂಟ್ ಆಫ್ ಮಾಡಿದ್ದೇಕೆ?

ಇನ್ನು ದೀಪಿಕಾ ದಾಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೊಗೆ ನೆಟ್ಟಿಗರು ಕಾಮೆಂಟ್ ಮಾಡಲು ಇರುವ ಆಯ್ಕೆಯನ್ನೇ ರದ್ದುಗೊಳಿಸಿಬಿಟ್ಟಿದ್ದಾರೆ. ಹೌದು, ಈ ಫೋಟೊಗಳನ್ನು ನೆಟ್ಟಿಗರು ಲೈಕ್ ಮಾಡಬಹುದೇ ಹೊರತು ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಕೆಲ ನೆಟ್ಟಿಗರು ಈ ಫೋಟೊಗೆ ಅಸಂಬದ್ಧ ಹಾಗೂ ಅಸಹ್ಯಕರವಾದ ಕಾಮೆಂಟ್ ಹಾಕುತ್ತಾರೆ ಎಂಬ ಕಾರಣದಿಂದಾಗಿ ದೀಪಿಕಾ ದಾಸ್ ಮುನ್ನೆಚ್ಚರಿಕೆ ವಹಿಸಿ ಈ ರೀತಿ ಕಾಮೆಂಟ್ ಆಫ್ ಮಾಡಿರಬಹುದು. ಇನ್ಸ್ಟಾಗ್ರಾಮ್‌ನಲ್ಲಿ ಕಾಮೆಂಟ್ ಆಫ್ ಮಾಡಿರುವ ದೀಪಿಕಾ ದಾಸ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕಾಮೆಂಟ್ ಆನ್ ಮಾಡಿ ಇಟ್ಟಿದ್ದು, ಅಲ್ಲಿ ಈ ಫೋಟೊಗಳಿಗೆ ಕೆಲ ಅಶ್ಲೀಲ ಕಾಮೆಂಟ್‌ಗಳು ಬಂದಿವೆ.

ಕೆಟ್ಟ ಕಾಮೆಂಟ್ ಮಾಡುವುದೇಕೆ?

ಕೆಟ್ಟ ಕಾಮೆಂಟ್ ಮಾಡುವುದೇಕೆ?

ವಿದೇಶ ಪ್ರವಾಸದಲ್ಲಿ ತೊಡಗಿರುವ ಸಂದರ್ಭದಲ್ಲಿ ಕ್ರಿಸ್ ಗೇಲ್ ರೀತಿಯ ಗ್ಲೋಬರ್ ಕ್ರಿಕೆಟ್ ಸ್ಟಾರ್ ಸಿಕ್ಕರೆ ಯಾರಾದರೂ ಸಹ ಫೋಟೊ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ಕಾಮನ್. ದೀಪಿಕಾ ದಾಸ್ ಸಹ ಅದನ್ನೇ ಮಾಡಿದ್ದಾರೆ. ಹೀಗೆ ತನ್ನ ನೆಚ್ಚಿನ ಕ್ರಿಕೆಟರ್‌ ಜತೆ ನಟಿಯರು ಫೋಟೊಗೆ ಪೋಸ್ ಕೊಟ್ಟರೆ ಕೆಟ್ಟ ಕಾಮೆಂಟ್ ಮಾಡುವಂತದ್ದು ಏನಿರುತ್ತೋ ದೇವರೇ ಬಲ್ಲ..

More from Filmibeat

English summary
Deepika Das met cricketer Chris Gayle in Dubai and shared the pictures. Take a look
Read more about: deepika das actress ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X