ಲಾಂಚ್ ಆಯ್ತು 'ನಾಗಿಣಿ' ದೀಪಿಕಾ ದಾಸ್ ಹೊಸ ಸಿನಿಮಾ
'ನಾಗಿಣಿ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ದೀಪಿಕಾ ದಾಸ್ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅವರ 'ಚೌಕಟ್ಟು' ಚಿತ್ರದ ಮುಹೂರ್ತ ಇಂದು ನಡೆದಿದೆ.
ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಲಯದಲ್ಲಿ ಸಿನಿಮಾ ಲಾಂಚ್ ಆಗಿದೆ. ಈ ಕಾರ್ಯಕ್ರಮದಲ್ಲಿ ಗೀತ ರಚನೆಗಾರ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ವಿ ನಾಗೇಂದ್ರ ಪ್ರಸಾದ್ ಭಾಗಿಯಾಗಿದ್ದು, ಕ್ಲಾಪ್ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದರು.
'ಚೌಕಟ್ಟು' ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾ ಆಗಿದ್ದು, ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಇರಲಿವೆಯಂತೆ. ದೀಪಿಕಾ ದಾಸ್ ಹಾಗೂ 'ನಾಗಿಣಿ' ಧಾರಾವಾಹಿಯಲ್ಲಿ ರುದ್ರನ ಪಾತ್ರ ನಿರ್ವಹಿಸುತ್ತಿರುವ ಅರುಣ್ ಕುಮಾರ್ ಒಂದೊಂದು ಕ್ಯಾರೆಕ್ಟರ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರವನ್ನು ಸಂದೀಪ್ ಕೊಟೆಯಾನ್ ನಿರ್ದೇಶನ ಮಾಡುತ್ತಿದ್ದು, ಲಿ ಕೆ ಹೆಚ್ ದಾಸ್ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಮಂಜುನಾಥ್ ನಿರ್ಮಾಣದ ಸಿನಿಮಾಗೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
English summary
Kannada actress Deepika Das new kannada film 'Chowkattu' launched today. Deepika is making her acting debut in the movie.


Click it and Unblock the Notifications