For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ಮನೆ ಖರೀದಿಸಿದ ದೀಪಿಕಾ ಪಡುಕೋಣೆ: ಬೆಲೆ ಬಹು ದುಬಾರಿ

  |

  ನಟಿ ದೀಪಿಕಾ ಪಡುಕೋಣೆ ಬಾಲಿವುಡ್‌ನ ಬ್ಯುಸಿ ನಟಿ. ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಸಹ ಹೌದು ದೀಪಿಕಾ ಪಡುಕೋಣೆ.

  ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ನಟಿ ದೀಪಿಕಾ ಪಡುಕೋಣೆ ಮೂಲತಃ ಉಡುಪಿ ಜಿಲ್ಲೆಯ ಪಡುಕೋಣೆಯವರು. ದೀಪಿಕಾ ಪಡುಕೋಣೆ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ ದೀಪಿಕಾರ ಪೋಷಕರಾದ ಪ್ರಕಾಶ್ ಪಡುಕೋಣೆ ಮತ್ತು ಉಜ್ಜಲ ಪಡುಕೋಣೆ ಈಗಲೂ ಬೆಂಗಳೂರಿನಲ್ಲಿಯೇ ಇದ್ದಾರೆ.

  ಆದರೆ ದೀಪಿಕಾ ಪಡುಕೋಣೆ ಇತ್ತೀಚೆಗೆ ಬೆಂಗಳೂರಿನಲ್ಲಿ ದುಬಾರಿ ಬೆಲೆಯ ಮನೆಯೊಂದನ್ನು ಖರೀದಿಸಿದ್ದಾರೆ. ಮುಂಬೈನಲ್ಲಿ ಈಗಾಗಲೇ ಐಶಾರಾಮಿ ಫ್ಲ್ಯಾಟ್ ಹೊಂದಿರುವ ದೀಪಿಕಾ, ಬೆಂಗಳೂರಿನಲ್ಲಿ ಮನೆ ಖರೀದಿಸಿರುವುದು ಕುತೂಹಲ ಮೂಡಿಸಿದೆ.

  ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗಂಗಾನಗರದ ಎಂಬಸಿ ಅಪಾರ್ಟ್‌ಮೆಂಟ್‌ನಲ್ಲಿ ದೀಪಿಕಾ ಪಡೊಕೋಣೆ ಫ್ಲ್ಯಾಟ್‌ ಒಂದನ್ನು ಖರೀದಿಸಿದ್ದಾರೆ. 26 ಅಂತಸ್ತಿನ ಐಶಾರಾಮಿ ಅಪಾರ್ಟ್‌ಮೆಂಟ್ ಇದಾಗಿದ್ದು 22ನೇ ಫ್ಲೋರ್‌ನಲ್ಲಿ ಮನೆ ಖರೀದಿಸಿದ್ದಾರೆ ದೀಪಿಕಾ.

  ದೀಪಿಕಾ, ಬೆಂಗಳೂರಿನ ಈ ಹೊಸ ಮನೆಗೆ ಏಳು ಕೋಟಿ ರು ಹಣ ನೀಡಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಈ ಮನೆ ತಾವು ಇರಲು ಖರೀದಿಸಿದ್ದಾರೆಯೇ ಅಥವಾ ಪೋಷಕರಿಗಾಗಿ ಖರೀದಿಸಿದ್ದಾರೆಯೇ ತಿಳಿದು ಬಂದಿಲ್ಲ. ಪ್ರಸ್ತುತ ದೀಪಿಕಾ ಪಡುಕೋಣೆ ಪೋಷಕರು ಮತ್ತು ಸಹೋದರಿ ಜೆಸಿ ನಗರದ ಮನೆಯಲ್ಲಿ ವಾಸವಿದ್ದಾರೆ. ಈ ಹಿಂದೆ ಅವರು ಕೋರಮಂಗಲದಲ್ಲಿ ವಾಸವಿದ್ದರು.

  ದೀಪಿಕಾ ಪಡುಕೋಣೆ ಮುಂಬೈನಲ್ಲಿಯೂ ದುಬಾರಿ ಮನೆಯನ್ನು ಹೊಂದಿದ್ದಾರೆ. ಮುಂಬೈನ ಪ್ರತಿಷ್ಠಿತ ಪ್ರಭಾದೇವಿ ಅಪಾರ್ಟ್‌ಮೆಂಟ್‌ನಲ್ಲಿ 4 ಕೋಣೆಯ ಐಶಾರಾಮಿ ಮನೆ ಖರೀದಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅವರ ತಂದೆ ಪ್ರಕಾಶ್ ಪಡುಕೋಣೆ ಹೆಸರಲ್ಲಿ ಈ ಮನೆ ನೊಂದಣಿ ಆಗಿದೆ.

  2010ರಲ್ಲಿಯೇ ದೀಪಿಕಾ ಪಡುಕೋಣೆ 16 ಕೋಟಿ ರುಪಾಯಿಗಳಿಗೆ ಪ್ರಭಾದೇವಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಿದರು. 22ನೇ ಅಂತಸ್ತಿನಲ್ಲಿರುವ ಈ ಮನೆ 2700 ಚದರ ಅಡಿಗಳದ್ದಾಗಿದ್ದು, ದೀಪಿಕಾ ಪಡುಕೋಣೆಯ ಇಚ್ಛೆಯ ಅನುಸಾರ ಒಳಾಂಗಣ ವಿನ್ಯಾಸವನ್ನು ಮಾಡಲಾಗಿದೆ. ಈ ಮನೆಯಲ್ಲಿ ಬಹುಕಾಲ ಬಾಡಿಗೆಗೆ ನೀಡಲಾಗಿತ್ತು. 2018ರಲ್ಲಿ ದೀಪಿಕಾ, ರಣ್ವೀರ್ ಸಿಂಗ್ ವಿವಾಹದ ಬಳಿಕ ಇದೇ ಮನೆಗೆ ಶಿಫ್ಟ್ ಆದರು.

  English summary
  Actress Deepika Padukone bought new luxurious house in Bengaluru. New house is in Ganganagar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X