»   » ಈ ತಿಂಡಿ ತಿನ್ನೋಕೆ ಮಲ್ಲೇಶ್ವರಂಗೆ ಬಂದಿದ್ದರಂತೆ ದೀಪಿಕಾ ಪಡುಕೋಣೆ.!

ಈ ತಿಂಡಿ ತಿನ್ನೋಕೆ ಮಲ್ಲೇಶ್ವರಂಗೆ ಬಂದಿದ್ದರಂತೆ ದೀಪಿಕಾ ಪಡುಕೋಣೆ.!

Posted By:
Subscribe to Filmibeat Kannada

ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿಕೊಂಡಿರುವ ನಟಿ. ದೀಪಿಕಾ ತಮ್ಮ ಸಿನಿ ಕರಿಯರ್ ಆರಂಭಿಸಿದ್ದೇ ಕನ್ನಡ ಚಿತ್ರರಂಗದಿಂದ ಎನ್ನುವುದು ವಿಶೇಷ.

ದೀಪಿಕಾ ಪಡುಕೋಣೆ ಎಷ್ಟೇ ಎತ್ತರಕ್ಕೆ ಹೋದರು, ಕರ್ನಾಟಕ ಅದರಲ್ಲೂ ಬೆಂಗಳೂರನ್ನ ಮರೆಯುವುದಿಲ್ಲ. ಯಾಕಂದ್ರೆ, ತಮ್ಮ ಚಿತ್ರಗಳ ಪ್ರಮೋಷನ್ ಗಾಗಿ ಆಗಾಗ ಸಿಲಿಕಾನ್ ಸಿಟಿಗೆ ಬಂದು ಹೋಗುತ್ತಿರುತ್ತಾರೆ. ಹೀಗಿರುವಾಗ, ಇದೀಗ, ದೀಪಿಕಾಳ ಒಂದು ಫೋಟೋ ವೈರಲ್ ಆಗಿದೆ.

ಮಾಡೆಲ್ ಆಗಿದ್ದ ದೀಪಿಕಾ ಪಡುಕೋಣೆ 'No.1' ನಾಯಕಿಯಾಗಲು 'ಆ' ನಟಿ ಕಾರಣ.!

deepika padukone eat idli vada in malleswaram

ಬೆಂಗಳೂರಿನ ಮಲೇಶ್ವರಂನಲ್ಲಿರುವ ವೀಣಾ ಸ್ಟೋರ್ ಮಾಲೀಕರ ಜೊತೆ ದೀಪಿಕಾ ಪಡುಕೋಣೆ ಫೋಟೋ ತೆಗೆಸಿಕೊಂಡಿರುವುದು. ಈ ಫೋಟೋ ಹಿಂದಿನ ಕಹಾನಿ ಹುಡುಕಿದಾಗ ಗೊತ್ತಾಗಿದ್ದು ಏನಪ್ಪಾ ಅಂದ್ರೆ, ದೀಪಿಕಾ ಮಲ್ಲೇಶ್ವರಂನಲ್ಲಿ ಇಡ್ಲಿ-ವಡಾ ತಿನ್ನೋಕೆ ಬಂದಿದ್ದರಂತೆ.

ದೀಪಿಕಾ ಸಂಭಾವನೆ ಮುಂದೆ ಬಾಲಿವುಡ್ ಸ್ಟಾರ್ ನಟರು ಡಮ್ಮಿ ಆಗೋದ್ರು.!

ಹೌದು, ದೀಪಿಕಾ ಬೆಳ್ಳಂಬೆಳಗ್ಗೆ ಆರು ಮೂವತ್ತಕ್ಕೆ ಇವರ ಹೋಟೆಲ್​ಗೆ ಬಂದು ಇಡ್ಲಿ ವಡೆ ತಿಂದು ಹೋಗಿದ್ದಾರಂತೆ. ಅದೇ ಖುಷಿಯಲ್ಲಿ ಮಾಲೀಕ ಪ್ರದೀಪ್ ಜೊತೆ ಒಂದು ಸೆಲ್ಫಿಗೆ ಫೋಸ್ ಕೊಟ್ಟು ಹೋಗಿದ್ದಾರೆ.

ಅಂದ್ಹಾಗೆ, ಮಲ್ಲೇಶ್ವರಂನಲ್ಲಿ ದೀಪಿಕಾ ಪಡುಕೋಣೆ ಅವರ ಮನೆ ಇದ್ದು, ಬೆಂಗಳೂರಿಗೆ ಬಂದಾಗ ಈ ಹೋಟೆಲ್ ಗೆ ಬರುತ್ತಿರುತ್ತಾರಂತೆ.

English summary
Bollywood actress deepika padukone was visit to 'Veena Stores' in Malleswaram at Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada