For Quick Alerts
  ALLOW NOTIFICATIONS  
  For Daily Alerts

  ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾದ ದೀಪಿಕಾ ಪಡುಕೋಣೆ ತಂದೆ

  |

  ಭಾರತದ ಖ್ಯಾತ ಬ್ಯಾಡ್‌ಮಿಂಟನ್‌ ಕ್ರೀಡಾಪಟು, ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಪ್ರಕಾಶ್ ಪಡುಕೋಣೆ ಮಾತ್ರವೇ ಅಲ್ಲದೆ ಪತ್ನಿ ಉಜ್ವಲಾ ಹಾಗೂ ಎರಡನೇ ಮಗಳು ಅನಿಶಾ ಪಡುಕೋಣೆ ಸಹ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಆದರೆ ಪ್ರಕಾಶ್ ಪಡುಕೋಣೆ ಮಾತ್ರವೇ ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಪ್ರಕಾಶ್ ಪಡುಕೋಣೆ ಆಪ್ತಮಿತ್ರ ವಿಮಲ್ ಕುಮಾರ್ ಮಾಧ್ಯಮಗಳಿಗೆ ಹೇಳಿರುವಂತೆ, 'ಕಳೆದ ವಾರವೇ ಪ್ರಕಾಶ್ ಪಡುಕೋಣೆ ಅವರ ಕುಟುಂಬಕ್ಕೆ ಕೋವಿಡ್ ಪಾಸಿಟಿವ್ ಆಗಿತ್ತು. ಮೂವರೂ ಸಹ ಮನೆಯಲ್ಲಿಯೇ ಐಸೋಲೇಟ್ ಆಗಿದ್ದರು. ಆದರೆ ಪ್ರಕಾಶ್ ಪಡುಕೋಣೆಗೆ ಜ್ವರ ತೀವ್ರವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಪ್ರಕಾಶ್ ಪಡುಕೋಣೆ ಅವರ ಆರೋಗ್ಯದಲ್ಲಿ ತುಸು ಸುಧಾರಣೆ ಆಗಿದ್ದು ಜ್ವರದ ಹೊರತಾಗಿ ಇನ್ನಾವುದೇ ರೋಗ ಲಕ್ಷಣಗಳು ಇಲ್ಲ ಹಾಗಾಗಿ ಅವರನ್ನು ಶೀಘ್ರವಾಗಿ ಡಿಸ್‌ಚಾರ್ಜ್ ಮಾಡಲಾಗುವುದು ಎಂದಿದ್ದಾರೆ ವಿಮಲ್ ಕುಮಾರ್.

  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರುಗಳು ಕಳೆದ ತಿಂಗಳಷ್ಟೆ ಬೆಂಗಳೂರಿಗೆ ಬಂದು ಪೋಷಕರನ್ನು ಭೇಟಿ ಆಗಿದ್ದರು. ತಂದೆಯ ಅನಾರೋಗ್ಯದ ಬಗ್ಗೆ ದೀಪಿಕಾ ಪಡುಕೋಣೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

  ಸುಳ್ಳು ಸುದ್ದಿಯನ್ನು ನಂಬಬೇಡಿ ನನಗೇನೂ ಆಗಿಲ್ಲ ಎಂದ ನಟ ಅನಿರುದ್ಧ್ | Filmibeat Kannada

  ಪ್ರಕಾಶ್ ಪಡುಕೋಣೆ ಅವರು ವಿಶ್ವ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ಬ್ಯಾಡ್‌ಮಿಂಟನ್ ಪಟುವಾಗಿದ್ದಾರೆ.

  English summary
  Actress Deepika Padukone's father Prakash Padukone admitted to hospital after testing COVID 19 positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X