For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ಕಾಲ್‌ ಮಾಡಿ ಸುದೀಪ್ ಬಾಡಿಗಾರ್ಡ್‌ ಜೊತೆ ಮಾತನಾಡಿದ ದೀಪಿಕಾ ಪಡುಕೋಣೆ!

  |

  ನಟ ಸುದೀಪ್‌ ಅವರ ಬಾಡಿಗಾರ್ಡ್‌ ಸಹ ಈಗ ಸೆಲೆಬ್ರಿಟಿಯೇ. ಕಿಚ್ಚ ಕಿರಣ್ ಎಂದು ಹೆಸರಾಗಿರುವ ಸುದೀಪ್‌ರ ಬಾಡಿಗಾರ್ಡ್‌, ಸುದೀಪ್‌ಗೆ ಸಹೋದರನಿದ್ದಂತೆ.

  ವಿಡಿಯೋ ಕಾಲ್‌ನಲ್ಲಿ ನಟಿ ದೀಪಿಕಾ ಪಡುಕೋಣೆ, ಕಿಚ್ಚ ಕಿರಣ್ ಜೊತೆ ಕನ್ನಡದಲ್ಲಿಯೇ ಮಾತುಕತೆ

  ಕಿಚ್ಚ ಸುದೀಪ್ ಅವರ ಬಗ್ಗೆ ಅಪಾರ ಗೌರವ, ಅಭಿಮಾನ, ಪ್ರೀತಿ ಹೊಂದಿರುವ ಕಿಚ್ಚ ಕಿರಣ್‌ಗೆ ನಟಿ ದೀಪಿಕಾ ಪಡುಕೋಣೆ ಎಂದರೂ ಸಹ ಬಹಳ ಇಷ್ಟ.

  ಎರಡು ದಿನದ ಹಿಂದೆ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್ ಮ್ಮ '83' ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ನಟ ಕಿಚ್ಚ ಸುದೀಪ್, '83' ಸಿನಿಮಾವನ್ನು ಕರ್ನಾಟಕದಲ್ಲಿ ಪ್ರೆಸೆಂಟ್ ಮಾಡುತ್ತಿರುವ ಕಾರಣ ಸುದೀಪ್ ಸಹ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಯಾಗಿದ್ದರು. ಆದರೆ ಕಾರ್ಯಕ್ರಮಕ್ಕೆ ನಟಿ ದೀಪಿಕಾ ಪಡುಕೋಣೆ ಗೈರಾಗಿದ್ದರು.

  ಕಿಚ್ಚ ಕಿರಣ್, ತಮ್ಮ ದೀಪಿಕಾ ಅಭಿಮಾನದ ಬಗ್ಗೆ ನಟ ರಣ್ವೀರ್ ಸಿಂಗ್‌ ಬಳಿ ಹೇಳಿಕೊಂಡಾಗ ಕೂಡಲೇ ರಣ್ವೀರ್ ಸಿಂಗ್ ಅವರು ದೀಪಿಕಾ ಪಡುಕೋಣೆಗೆ ವಿಡಿಯೋ ಕರೆ ಮಾಡಿ, ಕಿಚ್ಚ ಕಿರಣ್ ಅವರೊಟ್ಟಿಗೆ ಮಾತನಾಡಿಸಿದ್ದಾರೆ.

  ವಿಡಿಯೋ ಕಾಲ್‌ನಲ್ಲಿ ನಟಿ ದೀಪಿಕಾ ಪಡುಕೋಣೆ, ಕಿಚ್ಚ ಕಿರಣ್ ಜೊತೆ ಕನ್ನಡದಲ್ಲಿಯೇ ಮಾತನಾಡಿದರಂತೆ. ಕಿಚ್ಚ ಕಿರಣ್ ಕೈ ಮೇಲಿರುವ ದೀಪಿಕಾ ಪಡುಕೋಣೆ ಹಚ್ಚೆಯನ್ನು ಸಹ ದೀಪಿಕಾ ಪಡುಕೋಣೆಗೆ ತೋರಿಸಿದ್ದಾರೆ. 'ನಿಮ್ಮ ಹೆಸರೇನು? ನೀವು ಏನು ಮಾಡುತ್ತಿದ್ದೀರಿ?'' ಇನ್ನಿತರೆ ವಿಷಯಗಳನ್ನು ದೀಪಿಕಾ ಪಡುಕೋಣೆ ಅವರು ಕಿಚ್ಚ ಕಿರಣ್ ಬಳಿ ಕೇಳಿ ತಿಳಿದುಕೊಂಡಿದ್ದಾರೆ. ಕಿರಣ್ ಸಹ, ತಾವು ಕಿಚ್ಚ ಸುದೀಪ್ ಅವರ ವೈಯಕ್ತಿಕ ಬಾಡಿಗಾರ್ಡ್ ಎಂದು ತಮ್ಮ ಪರಿಚಯವನ್ನು ದೀಪಿಕಾ ಬಳಿ ಹೇಳಿ ಕೊಂಡಿದ್ದಾರೆ. ಈ ಸಮಯ ನಟ ಸುದೀಪ್ ಸಹ ಅಲ್ಲಿಯೇ ಹಾಜರಿದ್ದು, ದೀಪಿಕಾ ಪಡುಕೋಣೆ ಅವರಿಗೆ ಹಾಯ್ ಹೇಳಿದ್ದಾರೆ.

  ಕಿಚ್ಚ ಕಿರಣ್ ಅಥವಾ ಸಾಯಿ ಕಿರಣ್, ಸುದೀಪ್‌ ಅವರಿಗೆ ಬಹಳ ಆತ್ಮೀಯ. ಖಾಸಗಿ ಬಾಡಿಗಾರ್ಡ್ ಆಗಿದ್ದರೂ ಸಹ ಕಿಚ್ಚ ಕಿರಣ್, ಸುದೀಪ್‌ಗೆ ಸಹೋದರನಿದ್ದಂತೆ. ಹಾಗಾಗಿಯೇ ಅವರಿಗಾಗಿ ದೀಪಿಕಾ ಪಡುಕೋಣೆಗೆ ಕರೆ ಮಾಡುವಂತೆ ರಣ್ವೀರ್‌ಗೆ ಕೇಳಿದ್ದಾರೆ. ರಣ್ವೀರ್ ಸಹ ಕ್ಷಣ ಮಾತ್ರದಲ್ಲಿ ಕಿರಣ್ ಅವರ ಕನಸನ್ನು ನನಸು ಮಾಡಿದ್ದಾರೆ.

  ಕೆಲ ದಿನಗಳ ಹಿಂದೆ ಕಿಚ್ಚ ಕಿರಣ್ ಹುಟ್ಟುಹಬ್ಬ ಇದ್ದಾಗಲೂ ಸಹ ಸುದೀಪ್ ಅವರ ಸ್ವತಃ ತಮ್ಮ ಕೈಯಾರ ಅಡುಗೆ ಮಾಡಿ ಅದರಲ್ಲಿಯೂ ವಿಶೇಷವಾಗಿ ಬಿರಿಯಾನಿ ಮಾಡಿ ಕಿರಣ್‌ಗೆ ಹಾಗೂ ಅವರ ಮನೆಯವರಿಗೆ ಕೊಟ್ಟಿದ್ದರು.

  ಕಿರಣ್ ಮಾತ್ರವಲ್ಲ ತಮ್ಮ ಡ್ರೈವರ್‌ ವಿಶ್ವ ಅವರನ್ನೂ ಸಹ ಸುದೀಪ್ ಸ್ವಂತ ಮನೆಯವರಂತೆ ನೋಡಿಕೊಳ್ಳುತ್ತಾರೆ. ವಿಶ್ವ ಹುಟ್ಟುಹಬ್ಬಕ್ಕೆ ಬೈಕ್ ಒಂದನ್ನು ಉಡುಗೊರೆಯಾಗಿ ಸುದೀಪ್ ನೀಡಿದ್ದರು. ಕಿರಣ್‌ಗೂ ಬೈಕ್ ಒಂದನ್ನು ಸುದೀಪ್ ನೀಡಿದ್ದಾರೆ.

  ಇನ್ನು ರಣ್ವೀರ್ ಸಿಂಗ್ ನಟಿಸಿರುವ '83' ಸಿನಿಮಾವನ್ನು ಕರ್ನಾಟಕದಲ್ಲಿ ಸುದೀಪ್ ಪ್ರೆಸೆಂಟ್ ಮಾಡುತ್ತಿದ್ದಾರೆ. ವಿತರಣೆ ಸಹ ಅವರದ್ದೇ ಎನ್ನಲಾಗುತ್ತಿದೆ. '83' ಸಿನಿಮಾವು ಭಾರತ ಕ್ರಿಕೆಟ್ ತಂಡ 1983 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಕತೆಯನ್ನು ಹೊಂದಿದೆ. ಜೊತೆಗೆ ಕಪಿಲ್ ದೇವ್ ಅವರ ಜೀವನದ ಕತೆಯನ್ನು ಸಹ ಹೊಂದಿದೆ. ಕ್ರಿಕೆಟ್ ಪ್ರಿಯರಾಗಿರುವ ಹಾಗೂ ಕಪಿಲ್ ದೇವ್ ಬಗ್ಗೆ ಚಿಕ್ಕಂದಿನಿಂದಲೇ ಅಪಾರ ಪ್ರೀತಿ, ಅಭಿಮಾನ ಹೊಂದಿರುವ ಸುದೀಪ್ ಅದೇ ಕಾರಣಕ್ಕೆ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾವು ಡಿಸೆಂಬರ್ 24 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ದೀಪಿಕಾ ಪಡುಕೋಣೆ ಸಹ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಸಹ ನಿರ್ಮಾಣ ಸಹ ಮಾಡಿದ್ದಾರೆ.

  English summary
  Actress Deepika Padukone talks to Sudeep's personal body guard Kichcha Kiran through video call, talks with him in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion