Gandhada Gudi OTT : ಇಷ್ಟು ದಿನವಾದ್ರೂ ಪುನೀತ್ 'ಗಂಧದಗುಡಿ' ಓಟಿಟಿಗೆ ಬರದಿರಲು ಕಾರಣವೇನು? ಇದೆ ರಿ ರಿಲೀಸ್ ಪ್ಲಾನ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನಯ ಚಿತ್ರ ಗಂಧದಗುಡಿ ಕಳೆದ ವರ್ಷ ಅಕ್ಟೋಬರ್ 28ರಂದು ತೆರೆಕಂಡು ಜನರ ಮನಸ್ಸನ್ನು ಗೆಲ್ಲುವಲ್ಲಿ ಸಂಪೂರ್ಣ ಯಶಸ್ಸನ್ನು ಸಾಧಿಸಿತ್ತು. ಕರ್ನಾಟದಕ ಅರಣ್ಯ ಸಂಪತ್ತನ್ನು ಗಂಧದಗುಡಿ ಮೂಲಕ ತೋರಿಸಬೇಕು ಎಂಬ ಪುನೀತ್ ರಾಜ್‌ಕುಮಾರ್ ಅವರ ಆಸೆ ಅಚ್ಚುಕಟ್ಟಾಗಿ ನೆರವೇರಿತ್ತು.

ಲಾಕ್‌ಡೌನ್ ಸಮಯದಲ್ಲಿ ಶುರುವಾದ ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘವರ್ಷ ಅವರ ಕಾಡಿನ ಅಲೆದಾಟ ತೆರೆಯ ಮೇಲೆ ಪ್ರೇಕ್ಷಕನಿಗೆ ವಾವ್ ಎನ್ನುವ ಫೀಲ್ ಕೊಟ್ಟಿತ್ತು. ಪುನೀತ್ ಅಗಲಿಕೆಯ ನಂತರ ಬಿಡುಗಡೆಯಾದ ಅಪ್ಪು ಅವರ ಕೊನೆಯ ಚಿತ್ರ ಎಂಬ ಕಾರಣದಿಂದ ಹಾಗೂ ರಾಜ್ಯದ ವಿಶೇಷತೆಗಳನ್ನು ಅಚ್ಚುಕಟ್ಟಾಗಿ ತೋರಿಸಿದ ಕಾರಣದಿಂದ ಗಂಧದ ಗುಡಿ ಪ್ರತಿಯೊಬ್ಬ ಅಪ್ಪು ಅಭಿಮಾನಿಗೆ ಹಾಗೂ ಕನ್ನಡ ಸಿನಿ ರಸಿಕರಿಗೆ ಎಂದೂ ಮರೆಯಲಾಗದ ಒಂದು ಎಮೋಷನ್ ಆಗಿ ಉಳಿದುಕೊಂಡಿದೆ.

ಹೀಗೆ ಅಭೂತಪೂರ್ವ ಪ್ರಶಂಸೆಯನ್ನು ಪಡೆದುಕೊಂಡು ಜನಮಾನಸದಲ್ಲಿ ಬೇರೂರಿರುವ ಗಂಧದಗುಡಿ ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸಲೂ ಸಹ ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಹೌದು, ಗಂಧದ ಗುಡಿ ಚಿತ್ರದ ಓಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಖರೀದಿಸಿದ್ದು, ಚಿತ್ರ ಯಾವಾಗ ಓಟಿಟಿಗೆ ಬರಲಿದೆ ಎಂಬ ಕುತೂಹಲವಿದೆ. ಚಿತ್ರ ಬಿಡುಗಡೆಯಾಗಿ ಐವತ್ತು ದಿನಗಳು ಕಳೆದರೂ ಸಹ ಚಿತ್ರ ಓಟಿಟಿಯಲ್ಲಿ ಬಾರದಿರುವುದು ಸಿನಿ ರಸಿಕರಲ್ಲಿ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಇಷ್ಟು ದಿನಗಳಾದರೂ ಗಂಧದಗುಡಿ ಓಟಿಟಿಗೆ ಏಕೆ ಬಂದಿಲ್ಲ, ಏನಾದರೂ ಅಡೆತಡೆ ಇದೆಯಾ ಎಂಬ ಅನುಮಾನ ಸಹಜವಾಗಿ ಮೂಡಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಗಂಧದ ಗುಡಿ ಚಿತ್ರ ಓಟಿಟಿಗೆ ಬರದಿರಲು ಕಾರಣವೇನೆಂಬುದನ್ನು ಬಿಚ್ಚಿಟ್ಟಿದೆ.

ಓಟಿಟಿ ಬಿಡುಗಡೆ ವಿಳಂಬಕ್ಕೆ ಇದುವೇ ಕಾರಣ

ಓಟಿಟಿ ಬಿಡುಗಡೆ ವಿಳಂಬಕ್ಕೆ ಇದುವೇ ಕಾರಣ

ಗಂಧದ ಗುಡಿ ಚಿತ್ರ ಬಿಡುಗಡೆಯಾಗಿ ಐವತ್ತು ದಿನಗಳು ಕಳೆದರೂ ಸಹ ಓಟಿಟಿಯಲ್ಲಿ ಬಿಡುಗಡೆಯಾಗದಿರಲು ಕಾರಣ ಚಿತ್ರವನ್ನು ಮರು ಬಿಡುಗಡೆ ಮಾಡಲು ನಡೆಸಿರುವ ಚಿಂತನೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು, ಮುಂಬರುವ ಮಾರ್ಚ್ 17ರಂದು ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಗಂಧದಗುಡಿ ಚಿತ್ರವನ್ನು ಮರಳಿ ತೆರೆ ಮೇಲೆ ತಂದು ನಂತರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಜೇಮ್ಸ್ ಈ ವರ್ಷ ಗಂಧದಗುಡಿ

ಕಳೆದ ವರ್ಷ ಜೇಮ್ಸ್ ಈ ವರ್ಷ ಗಂಧದಗುಡಿ

ಇನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಚಿತ್ರವನ್ನು ಆತನ ಹುಟ್ಟುಹಬ್ಬದ ಪ್ರಯುಕ್ತ ವೀಕ್ಷಿಬೇಕೆಂಬ ಆಸೆ ಹಿಂದಿನಿಂದಲೂ ಇತ್ತು. ಆದರೆ ಅಪ್ಪು ಇದ್ದಾಗ ಅಭಿಮಾನಿಗಳ ಆಸೆ ಈಡೇರಲೇ ಇಲ್ಲ. ಇದು ಪುನೀತ್ ರಾಜ್‌ಕುಮಾರ್ ಅವರ ಆಸೆ ಕೂಡ ಆಗಿತ್ತು. ಹೀಗಾಗಿ ಅಪ್ಪು ಆಸೆಯಂತೆ ಕಳೆದ ವರ್ಷ ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಜೇಮ್ಸ್ ಚಿತ್ರವನ್ನು ಬಿಡುಗಡೆಗೊಳಿಸಲಾಗಿತ್ತು. ಅದೇ ರೀತಿ ಇದೀಗ ಪುನೀತ್ ರಾಜ್‌ಕುಮಾರ್ ನಟನೆಯ ಗಂಧದಗುಡಿ ಚಿತ್ರವನ್ನು ಹುಟ್ಟುಹಬ್ಬದ ಪ್ರಯುಕ್ತ ಮತ್ತೊಮ್ಮೆ ತೆರೆಮೇಲೆ ತರಲು ಸಿದ್ಧತೆ ನಡೆಸಲಾಗ್ತಿದೆ.

ವಿಂಟೇಜ್ ಚಿತ್ರಗಳೂ ಸಹ ಬಿಡುಗಡೆಯಾಗಬಹುದು

ವಿಂಟೇಜ್ ಚಿತ್ರಗಳೂ ಸಹ ಬಿಡುಗಡೆಯಾಗಬಹುದು

ಇನ್ನು ಗಂಧದ ಗುಡಿ ಮಾತ್ರವಲ್ಲದೇ ಪುನೀತ್ ರಾಜ್‌ಕುಮಾರ್ ನಟನೆಯ ವಿಂಟೇಜ್ ಚಿತ್ರಗಳೂ ಸಹ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಮರು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೌದು, ಅಪ್ಪು, ಜಾಕಿ, ಅರಸು ರೀತಿಯ ಚಿತ್ರಗಳನ್ನು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಮರುಬಿಡುಗಡೆ ಮಾಡಿ ಎಂಬ ಕೂಗು ಜೋರಾಗಿದ್ದು, ಯಾವುದಾದರೊಂದು ಚಿತ್ರವನ್ನು ಮರು ಬಿಡುಗಡೆ ಮಾಡಿ ಅಪ್ಪು ಅವರನ್ನು ಸಂಭ್ರಮಿಸುವುದು ಖಚಿತ.

More from Filmibeat

English summary
Delay in Puneeth's Gandhada Gudi OTT release as makers are planning to rerelease it. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X