»   » ಶಿವರಾಜ್ ಕುಮಾರ್ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿರುವುದೇಕೆ?

ಶಿವರಾಜ್ ಕುಮಾರ್ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿರುವುದೇಕೆ?

Posted By:
Subscribe to Filmibeat Kannada

ಸದಾ ಲವಲವಿಕೆಯಿಂದ ಇರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರು ಸಿಕ್ಕಾಪಟ್ಟೆ ಅಪ್ ಸೆಟ್ ಆಗಿದ್ದಾರೆ. ಅದಕ್ಕೆ ಕಾರಣ ರಿಲೀಸ್ ಗೆ ರೆಡಿಯಾಗಿರುವ ಅವರ ಸಿನಿಮಾಗಳು.!

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆದ್ರೆ, ಯಾವಾಗ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ! [ಮುತ್ತುಲಕ್ಷ್ಮಿ ಹೊಸ ವರಸೆ, ಮತ್ತೆ ವರ್ಮಾ, ವೀರಪ್ಪನ್ ಗೆ ಕಂಟಕ.!]

ಶಿವರಾಜ್ ಕುಮಾರ್ ಪ್ಲಾನ್ ಮಾಡಿದ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗೆ ಒಂದು ಸಿನಿಮಾ ಬಿಡುಗಡೆ ಆಗಿ, ಇನ್ನೊಂದು ವರ್ಷಾಂತ್ಯದ ಹೊತ್ತಿಗೆ ತೆರೆಗೆ ಬರ್ಬೇಕಿತ್ತು.

ಆದ್ರೆ, ಈಗಿನ ಪರಿಸ್ಥಿತಿ ನೋಡಿದ್ರೆ, ಎರಡು ಸಿನಿಮಾಗಳು ಈ ವರ್ಷ ಬಿಡುಗಡೆ ಆಗುವುದು ಡೌಟು. ಮುಂದೆ ಓದಿ.....

ನಾನು ಕಾರಣ ಅಲ್ಲ!

''ಸಿನಿಮಾಗಳು ತಡವಾಗುತ್ತಿವೆ. ಅದಕ್ಕೆ ನಾನು ಕಾರಣನಲ್ಲ. ನನ್ನ ಕೆಲಸಗಳನ್ನು ನಾನು ಸರಿಯಾದ ಸಮಯಕ್ಕೆ ಮುಗಿಸಿಕೊಟ್ಟಿದ್ದೇನೆ. ಅವರು ಚಿತ್ರ ತಡ ಮಾಡಿದರೆ ಅದಕ್ಕೆ ನಾನು ಕಾರಣನಲ್ಲ'' - ಶಿವರಾಜ್ ಕುಮಾರ್

ತಡವೇಕೆ?

''ಕೇಳಿದರೆ ಏನೇನೋ ಕಾರಣಗಳು. ಅನಿಮಲ್ ಬೋರ್ಡ್, ಮತ್ತೊಂದು, ಇನ್ನೊಂದು ಅಂತಾರೆ. ಅನಿಮಲ್ ಬೋರ್ಡ್ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಂಚೆಯೇ ಅದಕ್ಕೆ ಬೇಕಾದ ಸರ್ಟಿಫಿಕೇಟ್ ಪಡೆಯಬೇಕು. ಅದು ಬಿಟ್ಟರೆ, ಸಿನಿಮಾ ತಡವಾಗುತ್ತಾ ಹೋಗುತ್ತದೆ'' - ಶಿವರಾಜ್ ಕುಮಾರ್

ನಾನೂ ತಡ ಮಾಡಬಹುದಲ್ವಾ?

''ನಾನೂ ಕೂಡ ಹಾಗೆ ಮಾಡಬಹುದಲ್ವಾ..ಬೆಳಗ್ಗೆ ಎದ್ದಾಗ ಲೇಟಾಯ್ತು ಅಂತ್ಹೇಳಿ ದಿನಾ ನಾನು 11 ಗಂಟೆಗೆ ಸೆಟ್ ಗೆ ಹೋದರೆ ಚೆನ್ನಾಗಿರುತ್ತಾ? ನನ್ನ ಕೆಲಸವನ್ನು ನಾನು ಸರಿಯಾಗಿ ಮಾಡುತ್ತೇನೆ. ಅದು ನನ್ನ ಕಮಿಟ್ ಮೆಂಟ್'' - ಶಿವರಾಜ್ ಕುಮಾರ್

ಆಸ್ಪತ್ರೆಯಿಂದ ಬಂದ ಮೇಲೆ....

''ಆಸ್ಪತ್ರೆಯಿಂದ ಬಂದ ಕೂಡಲೆ ಮತ್ತೆ ಬಾಕಿ ಇದ್ದ ಚಿತ್ರಗಳ ಕೆಲಸ ಮಾಡಿಕೊಟ್ಟೆ. ಯಾಕೇಳಿ, ನನ್ನ ಕಡೆಯಿಂದ ತಡವಾಗಬಾರದೆಂದು. ಆದರೂ ಚಿತ್ರ ತಡವಾಗುತ್ತಿದೆ. ಅದಕ್ಕೆ ಕಾರಣ ನಾನಲ್ಲ'' - ಶಿವರಾಜ್ ಕುಮಾರ್ [ಸೆಂಚುರಿ ಸ್ಟಾರ್ ಶಿವಣ್ಣನ ಅನಾರೋಗ್ಯಕ್ಕೆ ನಿಜವಾದ ಕಾರಣವೇನು?]

ರಿಲೀಸ್ ಗೆ ರೆಡಿಯಿದೆ 'ಶಿವಲಿಂಗ', 'ಕಿಲ್ಲಿಂಗ್ ವೀರಪ್ಪನ್'

''ಅವೆರಡು ನನ್ನ ಚಿತ್ರಗಳು. ಎರಡೂ ಚೆನ್ನಾಗಿ ಬಂದಿವೆ. ಯಾವುದು ಮೊದಲು ರಿಲೀಸ್ ಆಗ್ಬೇಕು ಅನ್ನೋದು ಎರಡು ನಿರ್ಮಾಪಕರು ಸೇರಿ ನಿರ್ಧರಿಸಲಿ. ನಾನೇನೋ ಹೇಳೋದು, ಅದು ಬೇರೆ ರೂಪ ಪಡೆದು ಮಾಧ್ಯಮಗಳಲ್ಲಿ ಬರೋದು, ಇನ್ಯಾರೋ ಕುಳಿತು ಚರ್ಚೆ ಮಾಡೋದು...ಇವ್ಯಾವುದು ನನಗೆ ಇಷ್ಟವಿಲ್ಲ. ಮೊದಲು ಆರಂಭವಾಗಿ, ಸೆನ್ಸಾರ್ ಆಗಿದ್ದು 'ಶಿವಲಿಂಗ'. ಮಿಕ್ಕಿದ್ದು ಆಯಾ ನಿರ್ಮಾಪಕರಿಗೆ ಬಿಟ್ಟಿದ್ದು'' - ಶಿವರಾಜ್ ಕುಮಾರ್.

ಶಿವಣ್ಣ ಪ್ಲಾನ್ ಏನಾಗಿತ್ತು?

ಶಿವರಾಜ್ ಕುಮಾರ್ ಹಾಕಿಕೊಂಡಿದ್ದ ಪ್ಲಾನ್ ಪ್ರಕಾರ ಇಷ್ಟೊತ್ತಿಗೆ ಎರಡು ಚಿತ್ರಗಳು ಬಿಡುಗಡೆ ಆಗ್ಬೇಕಿತ್ತು. ಆಗಸ್ಟ್ ಅಥವಾ ಅಕ್ಟೋಬರ್ ನಲ್ಲಿ ಒಂದು, ಡಿಸೆಂಬರ್ ನಲ್ಲಿ ಮತ್ತೊಂದು. ಫೆಬ್ರವರಿಯಲ್ಲಿ 'ಕಬೀರ' ಚಿತ್ರ ತೆರೆಗೆ ಬರ್ಬೇಕಿತ್ತು ಅನ್ನೋದು ಶಿವರಾಜ್ ಕುಮಾರ್ ಆಸೆಯಾಗಿತ್ತು.

'ಶಿವಲಿಂಗ' ತಡವಾಗುತ್ತಿರುವುದೇಕೆ?

ನಿನ್ನೆಯಷ್ಟೇ 'ಶಿವಲಿಂಗ' ಚಿತ್ರ ಸೆನ್ಸಾರ್ ಅಂಗಳದಿಂದ ಪಾಸ್ ಆಗಿದೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

'ಕಿಲ್ಲಿಂಗ್ ವೀರಪ್ಪನ್' ರಿಲೀಸ್ ಯಾವಾಗ?

'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅಡ್ಡಗಾಲು ಹಾಕಿದ್ದರು. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ ಇದೆ. 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಇನ್ನೂ ಸೆನ್ಸಾರ್ ಆಗ್ಬೇಕು. ಆಮೇಲೆ ರಿಲೀಸ್ ಮಾತು. [ಫ್ಲ್ಯಾಶ್ ನ್ಯೂಸ್: 3000 ಥಿಯೇಟರ್ ಗಳಲ್ಲಿ ಶಿವಣ್ಣ, ಕಿಲ್ಲಿಂಗ್ ವೀರಪ್ಪನ್]

    English summary
    Kannada Actor Shivarajkumar is upset over the delay in release of his Kannada Movies 'Killing Veerappan' and 'Shivalinga'.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada