Bigg Boss: ಬಿಗ್ ಬಾಸ್ ವಿಡಿಯೋಗಳನ್ನು ಬೇಕಾ ಬಿಟ್ಟಿ ಬಳಸುತ್ತಿದ್ದರೇ ಎಚ್ಚರ!, ದೆಹಲಿ ಹೈಕೋರ್ಟ್ ಆದೇಶ ಇಲ್ಲಿದೆ

ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್‌ನ ಅನಧಿಕೃತ ಸ್ಟ್ರೀಮಿಂಗ್ ಅನ್ನು ದಿಲ್ಲಿ ಹೈಕೋರ್ಟ್ ನಿರ್ಬಂಧಿಸಿದೆ. ಬಿಗ್ ಬಾಸ್ 17 ನೇ ಸೀಸನ್‌ನ ವಿಷಯವನ್ನು ಅಕ್ರಮವಾಗಿ ಪ್ರಸಾರ ಮಾಡುವ ವೆಬ್‌ಸೈಟ್‌ಗಳು ಪೈರಸಿಯನ್ನು ಉತ್ತೇಜಿಸುತ್ತವೆ ಎಂದು ತೀರ್ಪು ನೀಡಿದೆ. ಹಿಂದಿಯಲ್ಲಿ ಬಿಗ್ ಬಾಸ್ 17 ನೇ ಸೀಸನ್ ಆರಂಭವಾಗಿದೆ.

ಬಿಗ್ ಬಾಸ್‌ನ ಅನಧಿಕೃತ ಸ್ಟ್ರೀಮಿಂಗ್‌ಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. "ಬಿಗ್ ಬಾಸ್ ಕಾರ್ಯಕ್ರಮದ ವಿಡಿಯೋಗಳನ್ನು ಅಕ್ರಮವಾಗಿ ಪ್ರಸಾರ ಮಾಡುವ ವೆಬ್‌ಸೈಟ್‌ಗಳ ಪೈರಸಿಯನ್ನು ಉತ್ತೇಜಿಸುತ್ತದೆ ಮತ್ತು ಬಿಗ್ ಬಾಸ್ ಪ್ರಸಾರ ಮಾಡುವವರಿಗೆ ಭಾರೀ ನಷ್ಟವನ್ನು ಉಂಟುಮಾಡುತ್ತದೆ" ಎಂದು ನ್ಯಾಯಾಲಯ ಹೇಳಿದೆ.

Delhi High Court restrains unauthorised broadcast of TV show Bigg Boss 17th season

ನ್ಯಾಯಾಲಯದ ಆದೇಶದಲ್ಲಿ ಏನಿದೆ?

ವರದಿಯ ಪ್ರಕಾರ, ಬಿಗ್ ಬಾಸ್ ಪ್ರಸಾರವಾಗುವ ಕಲರ್ಸ್ ಟಿವಿ ಚಾನೆಲ್ ಅನ್ನು ಹೊಂದಿರುವ ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮೊಕದ್ದಮೆ ಸಲ್ಲಿಸಿದ್ದು, ನ್ಯಾಯಾಲಯವು ಈ ಅರ್ಜಿಯನ್ನು ವಿಚಾರಣೆ ನಡೆಸಿದೆ. ಬಿಗ್ ಬಾಸ್ ಕಾರ್ಯಕ್ರಮವು ಅಗಾಧ ಜನಪ್ರಿಯತೆಯನ್ನು ಹೊಂದಿದೆ. ಅದರ ಕಂಟೆಂಟ್ ಅಕ್ರಮ ಪ್ರಸಾರವು ಕಾರ್ಯಕ್ರಮದ ಪ್ರಸಾರ ಮತ್ತು ನಿರ್ಮಾಣದ ಹಕ್ಕುಗಳು ಮತ್ತು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.

ಅರ್ಜಿ ಸಲ್ಲಿಸಿರುವ ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್, ಟಿವಿ ಚಾನೆಲ್‌ಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ. ಬಿಗ್ ಬಾಸ್ ಅನ್ನು ತಮ್ಮ ಡೊಮೇನ್ ಹೆಸರನ್ನಾಗಿ ಹೊಂದಿರುವ ಹಲವಾರು ವೆಬ್‌ಸೈಟ್‌ಗಳು ಕಾರ್ಯಕ್ರಮವನ್ನು ವೀಕ್ಷಿಸಲು ಅನಧಿಕೃತ ಮತ್ತು ಪರವಾನಗಿ ರಹಿತ ರೀತಿಯಲ್ಲಿ ಪ್ರಸಾರ ಮಾಡುತ್ತವೆ. ಇದು ತನ್ನ ವ್ಯವಹಾರಕ್ಕೆ ಸಾಕಷ್ಟು ನಷ್ಟ ಉಂಟುಮಾಡುತ್ತಿದೆ ಎಂದು ತಿಳಿಸಿದೆ.

ನ್ಯಾಯಾಲಯದ ಆದೇಶದ ಪ್ರಕಾರ, ಬಿಗ್ ಬಾಸ್ ಕಾರ್ಯಕ್ರಮದ ಯಾವುದೇ ಸಂಚಿಕೆಯನ್ನು ಪ್ರಸಾರ, ಸ್ಟ್ರೀಮಿಂಗ್, ಮರುಪ್ರಸಾರ ಮತ್ತು ಹೋಸ್ಟ್ ಮಾಡುವುದನ್ನು ನಿರ್ಬಂಧಿಸಲಾಗಿದೆ. ಕಾರ್ಯಕ್ರಮದ ತುಣುಕುಗಳನ್ನು ಈಗಾಗಲೇ ಪ್ರಸಾರ ಮಾಡಲಾಗಿರುವುದು ಅಥವಾ ಮುಂದಿನ ದಿನಗಳಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದ್ದು, ಇವುಗಳಿಗೆ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

"ಬಿಗ್ ಬಾಸ್ ಹೆಸರಿನ ಯಾವುದೇ ವೆಬ್‌ಸೈಟ್‌ಳು ಕಾರ್ಯಕ್ರಮಗಳನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಿದರೇ ಅಥವಾ ಬೇರೆ ಯಾವುದೇ ಮಾಧ್ಯಮ ಅಕ್ರಮವಾಗಿ ಬಿಗ್ ಬಾಸ್ ಪ್ರಸಾರ ಮಾಡಿದರೇ ವೆಬ್‌ಸೈಟ್‌ಗಳ ಮೇಲೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ಪ್ರಸ್ತುತ ತಡೆಯಾಜ್ಞೆಯು ಆ ವೆಬ್‌ಸೈಟ್‌ಗಳಿಗೂ ಅನ್ವಯಿಸುತ್ತದೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈ ಆಕ್ಷೇಪಾರ್ಹ ವೆಬ್‌ಸೈಟ್‌ಗಳನ್ನು ನಿರ್ಬಂಧಿಸದಿದ್ದರೆ ತಮಗೆ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ಅರ್ಜಿದಾರರ ವಾದವನ್ನು ನ್ಯಾಯಾಲಯವು ಗಮನಿಸಿದೆ. ಕಾನೂನು ಉಲ್ಲಂಘಿಸುವ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

ಕಲರ್ಸ್ ಕನ್ನಡದ OTT ಪ್ಲಾಟ್‌ಫಾರ್ಮ್, ಜಿಯೋ ಸಿನಿಮಾ, ಚಂದಾದಾರಿಕೆ ಆಧಾರಿತ ವೇದಿಕೆಯಾಗಿದೆ. ಅಕ್ರಮ ವೆಬ್‌ಸೈಟ್‌ಗಳು ಅನಧಿಕೃತವಾಗಿ ಈ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅನುಮತಿಸಿದರೆ, ಚಂದಾದಾರಿಕೆ ಮಾಡಿಸುವ ಕ್ರಮವೇ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ.

ಬಿಗ್ ಬಾಸ್ ಹಿಂದಿ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಪ್ರಸಾರ ಆರಂಭಿಸಿದೆ. ಇತ್ತೀಚೆಗೆ ಈ ಕಾರ್ಯಕ್ರಮದ ವಿಡಿಯೋ, ಫೋಟೊಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿತ್ತು. ಇದರ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

More from Filmibeat

English summary
Delhi High Court restrains unauthorised broadcast of Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X