'ಮಿಸ್ಸಿಂಗ್ ಬಾಯ್'ಗೆ ವಿಶ್ ಮಾಡಿದ ಸಿದ್ಧರಾಮಯ್ಯ, ಪರಮೇಶ್ವರ್

'ಮಿಸ್ಸಿಂಗ್ ಬಾಯ್' ಸ್ಯಾಂಡಲ್ ವುಡ್ ನಲ್ಲಿ ಸದ್ಯ ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದ ಸಿನಿಮಾ. ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರೊ 'ಮಿಸ್ಸಿಂಗ್ ಬಾಯ್' ಟ್ರೈಲರ್ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೆಲವು ದಿನಗಳ ಹಿಂದೆ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಿ 'ಮಿಸ್ಸಿಂಗ್ ಬಾಯ್ ಶ್ರಮವನ್ನು ಮೆಚ್ಚಿಕೊಂಡಿದ್ದರು ಕಿಚ್ಚ ಸುದೀಪ್. ಈ ಸಿನಿಮಾ ತೆಲುಗು ನಟ ನಾಣಿಯನ್ನು ಇಂಪ್ರೆಸ್ ಮಾಡಿದೆ. ಸಾಕಷ್ಟು ಮಂದಿಯ ಮನ ಸೆಳೆದಿರುವ 'ಮಿಸ್ಸಿಂಗ್ ಬಾಯ್' ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಕೂಡ ಶುಭ ಹಾರೈಸಿದ್ದಾರೆ.

ಚಿತ್ರದ ಟ್ರೈಲರ್ ನೋಡಿ ಜಿ ಪರಮೇಶ್ವರ್ 'ಚಿತ್ರತಂಡಕ್ಕೆ ಶುಭವಾಗಲಿ' ಎಂದು ಶುಭಕೋರಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ, 'ಯಾವುದೆ ಸಿನಿಮಾಗಳಾದರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಾಗಿರಬೇಕು ಅಂತ ಹೇಳುತ್ತಾ ಮಿಸ್ಸಿಂಗ್ ಬಾಯ್ ಗೆ ಒಳ್ಳೆದಾಗಲಿ' ಎಂದು ವಿಶ್ ಮಾಡಿದ್ದಾರೆ.

Deputy Chief Minister G Parameshwara and Ex Chief Minister Siddaramaiah wishes to Missing Boy kannada movie

ಸದ್ಯ, ಪ್ರೇಕ್ಷಕರ ಗಮನ ಸೆಳೆದಿರುವ 'ಮಿಸ್ಸಿಂಗ್ ಬಾಯ್' ಇದೇ ತಿಂಗಳು 22ಕ್ಕೆ ತೆರೆಗೆ ಬರುತ್ತಿದೆ. ಗುರುನಂದನ್ ನಾಯಕನಾಗಿ ಕಾಣಿಸಿಕೊಂಡಿರುವ 'ಮಿಸ್ಸಿಂಗ್ ಬಾಯ್' ಚಿತ್ರಕ್ಕೆ ರಘುರಾಮ್ ನಿರ್ದೇಶನವಿದೆ.

More from Filmibeat

English summary
Deputy Chief Minister G Parameshwara and ex Chief Minister Siddaramaiah wishes to 'Missing Boy' kannada movie. Actor Gurunandan is playing lead roal in this movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X